ಕೆರೆಮಣ್ಣು | ಕೋಲಾರಕ್ಕೆ ವರ್ಗಾವಣೆ | ಸಚಿವರ ಆರೋಪ? | ಸಿ.ಎಸ್​. ಷಡಾಕ್ಷರಿ ಹೇಳಿದ್ದೇನು?

CS Shadakshari has commented on the allegations against him and his transfer ತಮ್ಮ ಮೇಲಿನ ಆರೋಪ ಹಾಗೂ ವರ್ಗಾವಣೆ ವಿಚಾರದಲ್ಲಿ ಸಿಎಸ್​ ಷಡಾಕ್ಷರಿಯವರು ಪ್ರತಿಕ್ರಿಯಿಸಿದ್ದಾರೆ

ಕೆರೆಮಣ್ಣು | ಕೋಲಾರಕ್ಕೆ ವರ್ಗಾವಣೆ | ಸಚಿವರ ಆರೋಪ? |  ಸಿ.ಎಸ್​. ಷಡಾಕ್ಷರಿ ಹೇಳಿದ್ದೇನು?

KARNATAKA NEWS/ ONLINE / Malenadu today/ Nov 10, 2023 SHIVAMOGGA NEWS

Shivamogga  |  ತಮ್ಮ ವರ್ಗಾವಣೆ ಹಾಗೂ ತಮ್ಮ ಮೇಲಿನ ಆರೋಪಕ್ಕೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ (Karnataka State Employees Association President) ಸಿ.ಎಸ್‌. ಷಡಾಕ್ಷರಿ (CS Shadakshari)  ಉತ್ತರಿಸಿದ್ದಾರೆ. ರಾಜ್ಯಮಟ್ಟದ ಮಾದ್ಯಮವೊಂದು ನಡೆಸಿದ ಸಂದರ್ಶನದಲ್ಲಿ ಮಾತನಾಡಿದ ಅವರು, ತಮಗೆ ಕ್ಲೀನ್ ಚಿಟ್ ಮೊದಲೇ ಕೊಟ್ಟಾಗಿತ್ತು. ಅದರ ಮೇಲೆ ಏನು ತನಿಖೆ ನಡೆಸಲು ಸಾಧ್ಯ ಎಂದು ಪ್ರಶ್ನಿಸಿದ್ದಾರೆ. 

ಇತ್ತೀಚೆಗೆ ಸರ್ಕಾರದಿಂದ ಸಿ.ಎಸ್​ ಷಡಾಕ್ಷರಿಯವರನ್ನ ಶಿವಮೊಗ್ಗದಿಂದ ಕೋಲಾರಕ್ಕೆ ವರ್ಗಾವಣೆ ಮಾಡಲಾಗಿತ್ತು. ಇದರ ಹಿಂದೆ ಶಿವಮೊಗ್ಗ ಮುದ್ದಣನ ಕಕೆರೆಯಿಂದ ಅಕ್ರಮವಾಗಿ ಮಣ್ಣು ಸಾಗಿಸಿದ ವಿಚಾರವಿತ್ತು ಎಂದು ಹೇಳಲಾಗುತ್ತಿದೆ. ಅಲ್ಲದೆ ಹಿಂದಿನ ಕೆಡಿಪಿ ಸಭೆಯಲ್ಲಿ ಸಚಿವ ಮಧು ಬಂಗಾರಪ್ಪರವರ ಎದುರಿಗೆ ತಮಗೆ ಆತಂಕವಿದೆ ಎಂದು ಅಧಿಕಾರಿಗಳು ಹೇಳಿಕೊಂಡಿದ್ದು ಕೂಡ ಷಡಾಕ್ಷರಿಯವರ ವರ್ಗಾವಣೆಗೆ ಕಾರಣ ಎನ್ನಲಾಗಿತ್ತು. 

READ : ಸಾಗರದಲ್ಲಿ ಸಿಡಿದೆದ್ದ ಸರ್ಕಾರಿ ನೌಕರರು!? ಡೆಡ್​ಲೈನ್​! ಕಾರಣವೇನು!

ಈ ವಿಚಾರದ ಬಗ್ಗೆ ಮಾತನಾಡಿರುವ ಅವರು  ನಾನು ಮಣ್ಣು ಹೊಡೆದ ಸರ್ಕಾರಕ್ಕೆ ನಷ್ಟ ಮಾಡಲು ತಮ್ಮ ಬಳಿ ಭೂಮಿಯೇ ಇಲ್ಲ ಎಂದಿದ್ದಾರೆ. ಈ ವಿಚಾರದ ಬಗ್ಗೆ ತನಿಖೆ ನಡೆಸಿ ಎಂದು ಸರ್ಕಾರಕ್ಕೆ ನಾನೆ ಮನವಿ ಮಾಡಿದ್ದೇವೆ. ಎಂದಿದ್ದಾರೆ. 

ಅಕ್ರಮ ಮಣ್ಣು ಸಾಗಾಣಿಕೆ ವಿಚಾರದಲ್ಲಿ ಡೆವಲಪರ್ ಒಬ್ಬರು 500 ಲೋಡ್ ಮಣ್ಣು ಬೇಕು ಎಂದಿದ್ದರು. ಅದಕ್ಕೆ ಸಂಬಂಧಿಸಿದಂತೆ ಕಾನೂನಿನಲ್ಲಿ ಅವಕಾಶ ಇದ್ದರೇ ರಾಯಲ್ಟಿ ಕಟ್ಟಿಸಿಕೊಂಡು ಮಣ್ಣು ಸಾಗಾಣಿಕೆ ಅವಕಾಶ ನೀಡಿ ಎಂದು ಶಿಫಾರಸ್ಸು ನೀಡಲಾಗಿತ್ತು. ಅದರಂತೆ ಮಣ್ಣು ಸಾಗಾಟ ಮಾಡಲಾಗಿದೆ. ಆನಂತರ ಬೇರೆಯವರು ಮಣ್ಣು ಸಾಗಾಟ ಮಾಡಿದ್ದರೇ ಅದಕ್ಕೆ ನಾನು ಹೊಣೆಗಾರನಲ್ಲ ಎಂದು ತಮ್ಮ ವಾದ ಮಂಡಿಸಿದ್ದಾರೆ. 

ಇದೇ ವಿಚಾರದಲ್ಲಿ  ಈಗಾಗಲೇ ಮೂರು ಹಂತಗಳಲ್​ಲಿ ತನಿಖೆ ಆಗಿದೆ. ಜುಲೈ, ಆಗಸ್ಟ್ ಹಾಗೂ ಸೆಪ್ಟೆಂಬರ್​ ತಿಂಗಳಲ್ಲಿ ಈ ಸಂಬಂಧ ಕ್ಲೀನ್ ಚಿಟ್ ನೀಡಲಾಗಿದೆ. ಆದರೆ ಸೆಪ್ಟೆಂಬರ್​ 22 ರಂದು ಮತ್ತೆ ಪತ್ರ ಬರೆದು 72 ಲಕ್ಷ ರೂಪಾಯಿ ನಷ್ಟದ ತನಿಖೆ ಆಗಬೇಕು ಎಂದು ಪತ್ರ ಬರೆದರೇ ಏನರ್ಥ ಎಂದು ಪ್ರಶ್ನಿಸಿರುವ ಷಡಾಕ್ಷರಿಯವರು, ಇದೇ ವಿಚಾರದಲ್ಲಿ ಲೋಕಾಯುಕ್ತ ತನಿಖೆ ನಡೆಸುತ್ತಿದೆ ಅದರಲ್ಲಿ ನನ್ನನ್ನು ಪಾರ್ಟಿ ಮಾಡಿಲ್ಲ. ಅದರ ವರದಿ ಬಂದು ಅಲ್ಲಿ ನಾನು ತಪ್ಪಿತಸ್ತ ಎಂದು ಬಂದರೆ ಚರ್ಚಿಸೋಣ ಎಂದಿದ್ದಾರೆ. 

ಇನ್ನೂ ಇದೇ ವೇಳೆ ಸರ್ಕಾರಿ ನೌಕರನಾದವನಿಗೆ ವರ್ಗಾವಣೆ ಸಹಜ ಅದರಲ್ಲಿ ನನಗೆ ಯಾವ ಬೇಸರವೂ ಇಲ್ಲ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷನಾಗಿ ನೌಕರರ ಬೇಡಿಕೆಗಳಿಗಾಗಿ ಹೋರಾಟ ನಡೆಸುತ್ತೇನೆ. ವೈಯಕ್ತಿಕ ವಿಚಾರದಲ್ಲಿ ಯಾವುದೇ ಹೋರಾಟ ನಡೆಸುವುದಿಲ್ಲ ಎಂದಿದ್ದಾರೆ