ವಿಜಯೇಂದ್ರ ಅಧ್ಯಕ್ಷ ಆಗ್ತಾರಾ? ಅಪಪ್ರಚಾರ ರಾಷ್ಟ್ರ ವಿರೋಧನಾ! ಕಾಂಗ್ರೆಸ್​ ನ ಪ್ರೊಡ್ಯೂಸರ್​ ಯಾರು? ಡೈರಕ್ಟರ್ ಯಾರು?

In Shimoga, BJP leaders criticized the Congress party and the governmentಶಿವಮೊಗ್ಗದಲ್ಲಿ ಬಿಜೆಪಿ ಮುಖಂಡರಿಂದ ಕಾಂಗ್ರೆಸ್​ ಪಕ್ಷ ಹಾಗು ಸರ್ಕಾರದ ವಿರುದ್ಧ ಟೀಕೆ ವ್ಯಕ್ತವಾಗಿದೆ

ವಿಜಯೇಂದ್ರ ಅಧ್ಯಕ್ಷ ಆಗ್ತಾರಾ? ಅಪಪ್ರಚಾರ ರಾಷ್ಟ್ರ ವಿರೋಧನಾ! ಕಾಂಗ್ರೆಸ್​ ನ ಪ್ರೊಡ್ಯೂಸರ್​  ಯಾರು? ಡೈರಕ್ಟರ್ ಯಾರು?

KARNATAKA NEWS/ ONLINE / Malenadu today/ Sep 10, 2023 SHIVAMOGGA NEWS 



ಜೆಡಿಎಸ್​ ಮೈತ್ರಿ ಬಗ್ಗೆ ಮಾಹಿತಿಯಿಲ್ಲ 



ಶಿವಮೊಗ್ಗ ನಗರ ಬಿಜೆಪಿ ಕಚೇರಿಯಲ್ಲಿ ನಡೆದ ಪದವೀಧರ ಕ್ಷೇತ್ರದ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಮಾಧ್ಯಮಗಳೊಂದಿಗೆ ಮಾತನಾಡಿದ ಸಿ.ಟಿ ರವಿ, ಜೆಡಿಎಸ್​ ಜೊತೆಗಿನ ಮೈತ್ರಿ ಬಗ್ಗೆ ಇನ್ನೂ ಅಧೀಕೃತ ಮಾಹಿತಿ ಇಲ್ಲ ಎಂದರು. ಅಲ್ಲದೆ ಈ ಬಗ್ಗೆ ಬಿಎಸ್​ವೈ ಹೆಚ್​ಡಿಕೆ ಆಡಿದ ಮಾತುಗಳನ್ನು ಕೇಳಿದ್ದೇನೆ. ಆದರೆ ಇನ್ನೂ ಅಧಿಕೃತ ಮಾಹಿತಿ ಬಂದಿಲ್ಲ.ಇನ್ನೂ ವಿಪಕ್ಷ ನಾಯಕನ ಆಯ್ಕೆ ವಿಚಾರದಲ್ಲಿ ಯಾಕೆ ವಿಳಂಬವಾಗುತ್ತದೆ ಎಂಬುದು ಸ್ಪಷ್ಟವಿಲ್ಲ. ಆದರೆ ಕಾರಣವಿಲ್ಲದೆ ಕೇಂದ್ರದ ನಾಯಕರು ವಿಳಂಬ ಮಾಡುತ್ತಿಲ್ಲ ಎಂದು ನನಗೆ ಅನಿಸುತ್ತದೆ ಎಂದರು. 

ಟಿಪ್ಪು ಪ್ರೇರಣೆ 

ಜನರನ್ನು ಬೇಡುವ ಸ್ಥಿತಿಯಲ್ಲಿಡುವುದು ಸರಿಯಲ್ಲ ಎಂದು ಹೇಳಿದ ಸಿ.ಟಿ.ರವಿಯವರು ಶಾಶ್ವತ ಹಾಗೂ ಸುದೀರ್ಘ ಅಭಿವೃದ್ಧಿ ಯೋಜನೆಗಳನ್ನು ಸರ್ಕಾರಗಳು ನೀಡಬೇಕು. ನಮಗೇ ಬೇಕಾಗಿದ್ದು ನಾಲ್ವಡಿ ಕೃಷ್ಣರಾಜ ಒಡೆಯರ್​ ನವರು ಕೈಗೊಂಡಂತಹ ಅಭಿವೃದ್ಧಿ ಯೋಜನೆ. ನಾವು  ಅವರಿಂದ ಕಾಂಗ್ರೆಸ್ ಸರ್ಕಾರ  ಪ್ರೇರಣೆ ಪಡೆಯುತ್ತದೆ ಎಂದು ಭಾವಿಸಿದ್ದೆ. ಆದರೆ ಇವರು ಟಿಪ್ಪುವಿನಿಂದ ಪ್ರೇರಣೆ ಪಡೆದಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ. 

ಈ ಕೈಯ್ಯಿಂದ ಕೊಟ್ಟು

ಈ ಕೈಯಿಂದ ಕೊಟ್ಟು, ಆ ಕೈಯಿಂದ ತೆಗೆದುಕೊಳ್ಳುತ್ತಿರುವ ಸರ್ಕಾರ, ಬೆಲೆ ಏರಿಕೆಗಳನ್ನು ನಿರಂತರವಾಗಿ ಮಾಡುತ್ತಿದೆ. ರಾಜ್ಯ ಸರ್ಕಾರವೊಂದು ಆರಂಭದಲ್ಲಿಯೇ  ಪ್ರತಿಭಟನೆಯನ್ನು ಎದುರಿಸುತ್ತಿದೆ. ಪ್ರತಿಭಟನಾಕಾರರ ಬೇಡಿಕೆಗಳನ್ನು ರಾಜ್ಯ ಸರ್ಕಾರ ಮುಕ್ತ ಮನಸ್ಥಿತಿಯಿಂದ ಕೇಳಬೇಕು ಎಂದ ಸಿಟಿ ರವಿಯವರು, ನಾವು ಚುನಾವಣೆಯ ಸೋಲಿನ ಪರಾಮರ್ಶೆಯ ಜೊತೆಗೆ ನಮ್ಮ ತಪ್ಪುಗಳನ್ನು ತಿದ್ದಿಕೊಳ್ಳುವ ಕೆಲಸವನ್ನು ಸಹ ಮಾಡುತ್ತೇವೆ ಎಂದಿದ್ದಾರೆ. 

ಅಪಪ್ರಚಾರ ಮಾಡುವವರು ರಾಷ್ಟ್ರ ವಿರೋಧಿಗಳು

ಭಯೋತ್ಪಾದಕರು ಮಾತ್ರ ರಾಷ್ಟ್ರ ವಿರೋಧಿಗಳು ಆಗುವುದಿಲ್ಲ. ರಾಷ್ಟ್ರದ ವಿರುದ್ಧವಾಗಿ ಅಪಪ್ರಚಾರವನ್ನು ಮಾಡುವವರು ಸಹ ರಾಷ್ಟ್ರ ವಿರೋಧಿಗಳಾಗುತ್ತಾರೆ. ಅಂತಹವರ ಸಾಲಿಗೆ ರಾಹುಲ್ ಗಾಂಧಿಯವರು ಸೇರಬಾರದು ಎಂದು ಸಿ.ಟಿ.ರವಿ ಆಕ್ರೋಶ ಹೊರಹಾಕಿದ್ದಾರೆ. 

ಪ್ರೊಡ್ಯೂಸರ್ ಯಾರು

ಕೆಪಿಸಿಸಿಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಕೆಪಿಸಿಸಿ ಅಧ್ಯಕ್ಷರು ಹಾಗೂ ಡಿಸಿಎಂ ಆಗಿರುವ ಡಿ.ಕೆ.ಶಿವಕುಮಾರ್​ರವರಿಗೆ ಗೊತ್ತಿಲ್ಲವೋ ಅಥವಾ ಗೊತ್ತಿದ್ದು ಸಹ ಗೊತ್ತಿಲ್ಲದಂತೆ ಇದ್ದಾರೋ ಅಥವಾ ಅವರೇ ಪ್ರೊಡ್ಯೂಸರ್ ಅಥವಾ ಡೈರಕ್ಟರ್ ಆಗಿದ್ದಾರೋ ಎಂಬುದು ನನಗೆ ಮಾಹಿತಿ ಇಲ್ಲ. ಆದರೆ ಇದೆಲ್ಲದ ಪ್ರೊಡ್ಯುಸರ್ ಯಾರು ಡೈರಕ್ಟರ್​ ಯಾರು ಎಂಬುದು ಸಿಎಂ ಸಿದ್ದರಾಮಯ್ಯರಿಗೆ ಸ್ಪಷ್ಟವಾಗಿ ಗೊತ್ತಿರುತ್ತದೆ. ಗೊತ್ತಿಲ್ಲದಷ್ಟು ಅಮಾಯಕರಲ್ಲ ಎಂದು ಭಾವಿಸಿದ್ದೇನೆ ಎಂದರು. 



ಸರ್ಕಾರಕ್ಕೆ ಹಿಡಿಶಾಪ 

ಇನ್ನೂ ಇದೇ ವೇಳೇ ಮಾತನಾಡಿದ ಬಿ.ವೈ ವಿಜಯೇಂದ್ರರವರು, ಕಾಂಗ್ರೆಸ್ ಸರ್ಕಾರ ಬಂದು ನಾಲ್ಕು ತಿಂಗಳಾಗಿದೆ. ಅಷ್ಟರಲ್ಲಿ ಅಸಮಾಧಾನ ಹೊಮ್ಮಿದೆ. ನಿನ್ನೆ ಅವರ ಪಕ್ಷ ನಾಯಕರು ಆಡಿದ ಮಾತು ಅಸಮಾಧಾನಕ್ಕೆ ಸಾಕ್ಷಿಯಾಗಿದೆ. ನಮಗೆ ಈ ಸರ್ಕಾರದ ಬಗ್ಗೆ ಭಯವಿಲ್ಲ. ಜನರೇ ಈ ಬಗ್ಗೆ ಶಾಪ ಹಾಕುತ್ತಿದ್ದಾರೆ, ರೈತರು ಶಾಪ ಹಾಕುತ್ತಿದ್ದಾರೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ವಿಜಯೇಂದ್ರರಿಗೆ ಅಧ್ಯಕ್ಷ ಸ್ಥಾನ ನೀಡಬೇಕು ಎಂದು ಕಾರ್ಯಕರ್ತರು ಚರ್ಚೆ ಮಾಡುತ್ತಿದ್ದಾರೆ. ಆದರೆ ನಾಯಕರು ಈ ಬಗ್ಗೆ ತೀರ್ಮಾನಿಸುತ್ತಾರೆ. ಈ ವಿಚಾರವಾಗಿ ಹೆಚ್ಚು ಮಾತನಾಡುವುದಿಲ್ಲ ಎಂದಿದ್ದಾರೆ. 

ಹರಿಪ್ರಸಾದ್​ರ ಅಸಮಾಧಾನ ಕಾಂಗ್ರೆಸ್​ನ ಒಳಬೇಗುದಿ



ಇಂದಿರಾಗಾಂಧಿಯವರ ಕುಟುಂಬಕ್ಕೆ ಆಪ್ತರಾಗಿದ್ದ ಹರಿಪ್ರಸಾದ್​ರವರ ಒಳಕುದಿಯು ಹೊರಕ್ಕೆ ಬಂದಿದ್ದು ಕಾಂಗ್ರೆಸ್​ನಲ್ಲಿನ ಬೆಳವಣಿಗೆ ಗಳನ್ನು ಸಾಕ್ಷಿಕರೀಸುತ್ತಿದ ಎಂದ ಮಾಜಿ ಸಚಿವ ಆರಗ ಜ್ಞಾನೇಂದ್ರ , ರಾಹುಲ್ ಗಾಂಧಿಯವರು ವಿದೇಶದಲ್ಲಿದ್ದುಕೊಂಡು ರಾಷ್ಟ್ರದ ಬಗ್ಗೆ ಟೀಕಿಸುವುದು ಸರಿಯಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ. 




ಇನ್ನಷ್ಟು ಸುದ್ದಿಗಳು