ಉದ್ಘಾಟನೆಗೂ ಮೊದಲೇ ಕುಸಿದು ಬೀಳುತ್ತಿದೆ ಸರ್ಕಾರಿ ಪ್ರೌಢಶಾಲೆ ಕಟ್ಟಡ.. ಬೀಳುತ್ತಿರುವ ಬಿಲ್ಡಿಂಗ್​ಗೆ ಸುಣ್ಣಬಣ್ಣದ ತ್ಯಾಪೆ! ತೀರ್ಥಹಳ್ಳಿಯಲ್ಲಿಇದೆಂತಹ ಅವಸ್ಥೆ!? ಎಷ್ಟು ಪರ್ಸೆಂಟೇಜ್​ ಕಥೆಯೋ ಇದು!? ಗೃಹಸಚಿವರೇ ಗಮನಕೊಡಬೇಕು!

The government high school building is collapsing even before the inauguration-What is the situation in Thirthahalli!? The home minister should pay attention!

ಉದ್ಘಾಟನೆಗೂ ಮೊದಲೇ ಕುಸಿದು ಬೀಳುತ್ತಿದೆ ಸರ್ಕಾರಿ ಪ್ರೌಢಶಾಲೆ ಕಟ್ಟಡ.. ಬೀಳುತ್ತಿರುವ ಬಿಲ್ಡಿಂಗ್​ಗೆ ಸುಣ್ಣಬಣ್ಣದ ತ್ಯಾಪೆ! ತೀರ್ಥಹಳ್ಳಿಯಲ್ಲಿಇದೆಂತಹ ಅವಸ್ಥೆ!? ಎಷ್ಟು ಪರ್ಸೆಂಟೇಜ್​ ಕಥೆಯೋ ಇದು!? ಗೃಹಸಚಿವರೇ ಗಮನಕೊಡಬೇಕು!
ಉದ್ಘಾಟನೆಗೂ ಮೊದಲೇ ಕುಸಿದು ಬೀಳುತ್ತಿದೆ ಸರ್ಕಾರಿ ಪ್ರೌಢಶಾಲೆ ಕಟ್ಟಡ.. ಬೀಳುತ್ತಿರುವ ಬಿಲ್ಡಿಂಗ್​ಗೆ ಸುಣ್ಣಬಣ್ಣದ ತ್ಯಾಪೆ! ತೀರ್ಥಹಳ್ಳಿಯಲ್ಲಿಇದೆಂತಹ ಅವಸ್ಥೆ!? ಎಷ್ಟು ಪರ್ಸೆಂಟೇಜ್​ ಕಥೆಯೋ ಇದು!? ಗೃಹಸಚಿವರೇ ಗಮನಕೊಡಬೇಕು!

ತೀರ್ಥಹಳ್ಳಿ -ನೊಣಬೂರು ಸರ್ಕಾರಿ ಹಿರಿಯ ಪ್ರೌಢಶಾಲೆ ಕಟ್ಟಡ ಉದ್ಗಾಟನೆಗೂ ಮೊದಲೇ  ಕುಸಿದುಬೀಳುವ ಆತಂಕದಲ್ಲಿದೆ. ಇದು ಎಷ್ಟು ಪರ್ಸೆಂಟೇಜ್​ ಕಾಮಗಾರಿ ಎಂಬ ಆರೋಪ ಸ್ಥಳೀಯರಿಂದ ಕೇಳಿಬರುತ್ತಿದೆ.  ಜಿಲ್ಲಾ ಪಂಚಾಯಿತಿ ಅನುದಾನ ₹30 ಲಕ್ಷ ರೂಪಾಯಿಗಳಲ್ಲಿ ಕಟ್ಟಲಾದ ಕಟ್ಟಡವನ್ನು ಮುರುಕು ಸ್ಥಿತಿಯಲ್ಲಿಯೇ ಉದ್ಘಾಟನೆಗೂ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.

ಶಾಲೆ ಕಟ್ಟಡದ ಸೀಲಿಂಗ್​ ಬಿರುಕು ಬಿಟ್ಟಿದ್ದು , ಗೋಡೆಗಳು ಸಹ ಬಿರುಕು ಬಿರಕಾಗಿದೆ. ಮತ್ತೆ ಕೆಲೆವೆಡೆ ಸೀಲಿಂಗ್ ಒಡೆದಿದೆ. ಸದ್ಯ ಈ ಕಟ್ಟಡವನ್ನು ಉದ್ಘಾಟನೆ ಮಾಡಲು ಜನಪ್ರತಿನಿಧಿಗಳು ಮುಂದಾಗಿದ್ದಾರೆ. ಅದಕ್ಕಾಗಿ ಕಳಪೆ ಕಾಮಗಾರಿ ಮಾಡಿದ್ದನ್ನು ತ್ಯಾಪೆ ಹಾಕುವ ಕೆಲಸ ಕೂಡ ನಡೆಯುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ.

ಮೂಡಿಗೆರೆಯಲ್ಲಿ ಸಿಕ್ಕ ಕಾಡಾನೆಯನ್ನು ಕೇವಲ ಎರಡು ತಿಂಗಳಲ್ಲಿ ಪಳಗಿಸಿ ತರಬೇತಿ ನೀಡಿ ದಾಖಲೆ ಬರೆದ ಸಕ್ರೆಬೈಲು ಮಾವುತರು! JP EXCL

ಓದಲು ಶಾಲೆಗೆ ಬರುವ ಮಕ್ಕಳಿಗೆ ನಾಳೆ ಏನಾದರೂ ತೊಂದರೆ ಆದರೆ ಏನು ಗತಿ ಎಂದು ಪ್ರಶ್ನಿಸುತ್ತಿರುವ ಸ್ಥಳೀಯರಿಗೆ ಅಧಿಕಾರಿಗಳು ಉತ್ತರ ನೀಡುತ್ತಿಲ್ಲ. ಇನ್ನೂ ಕಳಪೆ ಕಾಮಗಾರಿಯ ಬಗ್ಗೆ ತನಿಖೆ ನಡೆಸುವ ಕೆಲಸವೂ ಆಗುತ್ತಿಲ್ಲ. ಹೇಗೋ ಒಂದು ರೀತಿಯಲ್ಲಿ ಉದ್ಘಾಟಿಸಿ ಕೈತೊಳೆದುಕೊಳ್ಳಲು ಆಡಳಿತ ವ್ಯವಸ್ಥೆ ಮುಂದಾಗಿದೆ. ಹಾಗೊಂದು ವೇಳೆ ಆರಂಭದಲ್ಲಿಯೇ ಕುಸಿದು ಬೀಳಲು ಸಿದ್ಧವಾಗಿರುವ ಕಟ್ಟಡದಲ್ಲಿ ಮಕ್ಕಳಿಗೆ ಏನಾದರು ಆದರೆ ಹೊಣೆ ಯಾರು ಎಂಬುದು ಪೋಷಕರ ಪ್ರಶ್ನೆಯಾಗಿದೆ. 

ರಾಜ್ಯದ ಗೃಹಸಚಿವರು ಹಾಗೂ ಸ್ಥಳೀಯ ಶಾಸಕರು ಆರಗ ಜ್ಞಾನೇಂದ್ರರಿಗೆ ಈ ಬಗ್ಗೆ ಮಾಹಿತಿ ಇದೆಯೋ ಅಥವಾ ಅವರಿಂದ ಕಟ್ಟಡದ ಸತ್ಯವನ್ನು ಮುಚ್ಚಿಡಲಾಗುತ್ತಿದೆಯೋ ಗೊತ್ತಿಲ್ಲ. ಆದರೆ  ಯಾರೇ ಕಟ್ಟಡ ಉದ್ಘಾಟಿಸಿದ್ರೂ ಅವರಿಗೂ ಕಟ್ಟಡದ ಹಿಂದಿನ ಕಳಪೆ ಕಾಮಗಾರಿಯ ಕೊಳೆ ಅಂಟುವುದಂತು ಗ್ಯಾರಂಟಿ. ಹೀಗಾಗಿ ಎಚ್ಚೆತ್ತುಕೊಂಡು, ಕಟ್ಟುತ್ತಲೇ ಕುಸಿಯುವಂತಹ ಕಟ್ಟಡ ನಿರ್ಮಾಣ ಮಾಡಿದವರ ಬಗ್ಗೆ ತುಸು ವಿಶೇಷ ಗಮನ ನೀಡಬೇಕಿದೆ ಗೃಹಸಚಿವರು. 

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com