ಬೈಕ್​ ವೀಲಿಂಗ್​​ ಮಾಡಿದವರಿಗೆ ₹15 ಸಾವಿರ ದಂಡ! ವಿಡಿಯೋ ಮಾಡಿದ್ದಕ್ಕೆ ₹5 ಸಾವಿರ ಫೈನ್! ಏನಿದು ಕೇಸ್?

Rs 15,000 fine for wheeling bike Rs 5,000 fine for making video What is the case?

ಬೈಕ್​ ವೀಲಿಂಗ್​​ ಮಾಡಿದವರಿಗೆ ₹15 ಸಾವಿರ ದಂಡ! ವಿಡಿಯೋ ಮಾಡಿದ್ದಕ್ಕೆ ₹5 ಸಾವಿರ ಫೈನ್! ಏನಿದು ಕೇಸ್?
Rs 15,000 fine for wheeling bike Rs 5,000 fine for making video What is the case?

SHIVAMOGGA  |  Jan 10, 2024  |  ಶಿವಮೊಗ್ಗ ಸಿಟಿಯ ಪ್ರಮುಖ ರಸ್ತೆಯಲ್ಲಿ ಬೈಕ್ ವೀಲಿಂಗ್ ಮಾಡಿದ ಯುವಕನ ವಿಡಿಯೋ ವೈರಲ್​ ಆದ ಬಗ್ಗೆ ಮಲೆನಾಡು ಟುಡೆ ಸಹ ಸುದ್ದಿ ಮಾಡಿತ್ತು. ಈ ಬೆನ್ನಲ್ಲೆ ಅವರ ವಿರುದ್ಧ ಪೊಲೀಸ್ ಇಲಾಖೆ ಕ್ರಮ ಕೈಗೊಂಡಿದ್ದು, ವೀಲಿಂಗ್ ಮಾಡಿದವರ ವಿರುದ್ದ ದೋಷಾರೋಪಣ ಪಟ್ಟಿ ಸಲ್ಲಿಸಿ ಪೊಲೀಸರು ಕೋರ್ಟ್​ಗೆ ಹಾಜರುಪಡಿಸಿದ್ದರು. 

ಇದೀಗ  ಶಿವಮೊಗ್ಗದ ನ್ಯಾಯಾಲಯ ವೀಲಿಂಗ್ ಮಾಡಿದ ಯುವಕನಿಗೆ ₹15,500 ದಂಡವಿಧಿಸಿದೆ. ವೀಲಿಂಗ್ ವಿಡಿಯೋ ಚಿತ್ರೀಕರಿಸಲು ಮತ್ತೊಂದು ಬೈಕ್‌ನಲ್ಲಿ ತೆರಳುತ್ತಿದ್ದ ಯುವಕನಿಗೆ 5 ಸಾವಿರ ದಂಡ ವಿಧಿಸಲಾಗಿದೆ.

READ : ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ್ ಪ್ರಕಾಶ್ ಪಾಟೀಲ್ ಶಿವಮೊಗ್ಗಕ್ಕೆ ! ಮೂರು ದಿನದ ಪ್ರವಾಸದ ವಿವರ ಇಲ್ಲಿದೆ

ನಗರದ ಕಾಮಾಕ್ಷಿ ಬೀದಿಯ ಯುವಕನೊಬ್ಬ ಶಿವಮೊಗ್ಗದ ರಸ್ತೆಯಲ್ಲಿ ಬೈಕ್ ವೀಲಿಂಗ್ ಮಾಡಿ, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿದ್ದ. ಈ ವಿಡಿಯೋ ವೈರಲ್ ಆಗಿತ್ತು. 

ಆ ಬಳಿಕ ವಿಡಿಯೋ ವೈರಲ್ ಆಗುತ್ತಿದ್ದಂತೆ ಪಶ್ಚಿಮ ಸಂಚಾರ ಠಾಣೆಯ ಎಚ್.ಸಿ. ಸಂದೀಪ್ ಬೈಕ್‌ಗಳನ್ನು ಪತ್ತೆ ಹಚ್ಚಿದ್ದರು. ತನಿಖೆ ನಡೆಸಿದ ಪಶ್ಚಿಮ ಸಂಚಾರ ಠಾಣೆ ಪಿಎಸ್‌ಐ ತಿರುಮಲೇಶ್ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ವಿಚಾರಣೆ ನಡೆಸಿದ 5ನೇ ಎಸಿಜೆ ಮತ್ತು ಜೆಎಂಎಫ್‌ಸಿ ನ್ಯಾಯಾಲಯ ಶಿವಮೊಗ್ಗ ವೀಲಿಂಗ್ ಮಾಡಿದ ಬೈಕ್ ಸವಾರ ಮತ್ತು ಹಿಂಬದಿಯಲ್ಲಿ ವಿಡಿಯೋ ಚಿತ್ರೀಕರಣ ಮಾಡಿಕೊಂಡು ಸಾಗಿದ್ದ ಬೈಕ್ ಸವಾರನಿಗೆ ದಂಡ ವಿಧಿಸಿದೆ.

ವೀಲಿಂಗ್ ಮಾಡಿದ್ದ ಬೈಕ್ ಸವಾರ ರೇಸಿಂಗ್, ಡಿ.ಎಲ್. ರಹಿತ ಚಾಲನೆ, ನಿರ್ಲಕ್ಷ್ಯದ ಚಾಲನೆ, ಬೈಕ್‌ನಲ್ಲಿ ಸೈಡ್ ಮಿರರ್‌ಗಳು ಇಲ್ಲದಿರುವುದಕ್ಕೆ ದಂಡ ವಿಧಿಸಲಾಗಿದೆ.