ಶಿವಮೊಗ್ಗಕ್ಕೆ ಬರಲಿದ್ದಾರೆ ಇಂಧನ ಸಚಿವ ಕೆ.ಜೆ. ಜಾರ್ಜ್! ಏನು ವಿಶೇಷ! ಪ್ರವಾಸದ ವಿವರ ಇಲ್ಲಿದೆ

Malenadu Today

Shivamogga | Feb 1, 2024 | ಶಿವಮೊಗ್ಗಕ್ಕೆ ಇಂಧನ ಸಚಿವ ಕೆ.ಜೆ.ಜಾರ್ಜ್​  ಆಗಮಿಸುತ್ತಿದ್ದಾರೆ. ಇದೇ ಫೆಬ್ರವರಿ ಆರರಂದು ಅವರು ಆಗಮಿಸುತ್ತಿದ್ದಾರೆ.  ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ದಿಂದ ಶಿವಮೊಗ್ಗ ವಿಮಾನ ನಿಲ್ದಾಣ ಕ್ಕೆ ಬರಲಿರುವ ಅವರು ಫೆಬ್ರವರಿ ಮೂರರಂದು ಶಿವಮೊಗ್ಗ ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ. 

ಇಂಧನ ಇಲಾಖೆ ಸಚಿವರಾದ ಕೆ.ಜೆ. ಜಾರ್ಜ್‍ರವರು ಫೆ. 03  ರಂದು  ಬೆಳಿಗ್ಗೆ 11.05 ಗಂಟೆಗೆ ಶಿವಮೊಗ್ಗಕ್ಕೆ ಆಗಮಿಸುವರು. ಬೆಳಿಗ್ಗೆ 11.20 ಕ್ಕೆ ಜಿಲ್ಲಾಧಿಕಾರಿಗಳ ಕಚೇರಿಗೆ ಭೇಟಿ ನೀಡುವರು.   

ಆನಂತರ ಬೆ-11.30ಕ್ಕೆ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲೆಯ ಎಲ್ಲಾ ಚುನಾಯಿತ ಪ್ರತಿನಿಧಿಗಳೊಂದಿಗೆ ಮೆಸ್ಕಾಂ ಮತ್ತು ಕೆಪಿಟಿಸಿಎಲ್ ವಿಷಯಗಳಿಗೆ ಸಂಬಂಧಿಸಿದಂತೆ ಸಭೆ ನಡೆಸುವರು. 

ಮ. 01.00ಕ್ಕೆ ಜಿಲ್ಲಾ ಕಾಂಗ್ರೇಸ್ ಪಕ್ಷದ ಕಚೇರಿಗೆ ಭೇಟಿ ನೀಡುವರು.  ಮ. 2.30ಕ್ಕೆ ಜೆ.ಎಲ್.ಆರ್. ಜೋಗ-ಕಾರ್ಗಲ್‍ಗೆ ತೆರಳಲಿದ್ದಾರೆ. 

ಸಂ.4.30 ರಿಂದ 6.30ರವರೆಗೆ ಶರಾವತಿ ಪವರ್ ಹೌಸ್‍ಗೆ ಭೇಟಿ ನೀಡಿ ಪಿ.ಹೆಚ್.ಎಸ್.ಪಿ. ಯೋಜನೆಯ ಅನುಷ್ಠಾನ ಬಗ್ಗೆ ಚರ್ಚೆ ಮಾಡಲಿದ್ದಾರೆ ಹಾಗೂ ವಾಸ್ತವ್ಯ ಮಾಡಲಿದ್ದಾರೆ ಎಂದು ಸಚಿವರ ಆಪ್ತ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. 


Share This Article