Prime Minister Narendra Modi/ದಾವಣಗೆರೆಯಿಂದ ಶಿವಮೊಗ್ಗ ಏರ್​ಪೋರ್ಟ್​ಗೆ ಪ್ರಧಾನಿ ನರೇಂದ್ರ ಮೋದಿ! ಎಷ್ಟೊತ್ತಿಗೆ ಬರುತ್ತಾರೆ? ವಿಮಾನನಿಲ್ದಾಣದಲ್ಲಿ ಹೇಗಿದೆ ಸಿದ್ದತೆ ?

Prime Minister Narendra Modi will arrive at Shivamogga airport from Davanagere in the evening. What time will they come? What is the preparation at the airport?

Prime Minister Narendra Modi/ದಾವಣಗೆರೆಯಿಂದ ಶಿವಮೊಗ್ಗ ಏರ್​ಪೋರ್ಟ್​ಗೆ ಪ್ರಧಾನಿ ನರೇಂದ್ರ ಮೋದಿ! ಎಷ್ಟೊತ್ತಿಗೆ ಬರುತ್ತಾರೆ? ವಿಮಾನನಿಲ್ದಾಣದಲ್ಲಿ  ಹೇಗಿದೆ ಸಿದ್ದತೆ ?
Prime Minister Narendra Modi/ದಾವಣೆಗೆರೆಯಿಂದ ಶಿವಮೊಗ್ಗ ಏರ್​ಪೋರ್ಟ್​ಗೆ ಪ್ರಧಾನಿ ನರೇಂದ್ರ ಮೋದಿ! ಎಷ್ಟೊತ್ತಿಗೆ ಬರುತ್ತಾರೆ? ವಿಮಾನನಿಲ್ದಾಣದಲ್ಲಿ ಏನಿದೆ ಸಿದ್ಧತೆ ?

ಪ್ರಧಾನಿ ನರೇಂದ್ರ ಮೋದಿ (Prime Minister Narendra Modi)ಇವತ್ತು ಮತ್ತೆ ರಾಜ್ಯ ಪ್ರವಾಸವನ್ನು ಕೈಗೊಂಡಿದ್ದಾರೆ. ಬೆಂಗಳೂರಿನಲ್ಲಿ ಸರ್ಕಾರಿ ಕಾರ್ಯಕ್ರಮಗಳನ್ನು ಮುಗಿಸಿಕೊಂಡು ದಾವಣಗೆರೆಯಲ್ಲಿ ನಡೆಯಲಿರುವ ವಿಜಯ ಸಂಕಲ್ಪ ಯಾತ್ರೆಯ ಸಮಾವೇಶ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಅಲ್ಲಿನ ಕಾರ್ಯಕ್ರಮಗಳನ್ನು ಮುಗಿಸಿಕೊಂಡು ಸಂಜೆ ಶಿವಮೊಗ್ಗ ಏರ್​ಪೋರ್ಟ್​ಗೆ (shivamogga airport) ಹೆಲಿಕಾಪ್ಟರ್​ನಲ್ಲಿ ಬಂದಿಳಿಯಲಿದ್ದಾರೆ. ಶಿವಮೊಗ್ಗ ವಿಮಾನ ನಿಲ್ದಾಣದಿಂದ ಸಂಜೆ 5.55ಕ್ಕೆ ಹೊರಟು ರಾತ್ರಿ 8.25ಕ್ಕೆ ದೆಹಲಿ ವಿಮಾನ ನಿಲ್ದಾಣ ತಲುಪಲಿದ್ದಾರೆ. 

ಇದೇ ಫೆಬ್ರವರಿ 27 ರಂದು ಪ್ರಧಾನಿ ನರೇಂದ್ರ ಮೋದಿ ಖುದ್ದು ವಿಮಾನದಲ್ಲಿ  ಶಿವಮೊಗ್ಗ ಏರ್​ಫೋರ್ಟ್​ನಲ್ಲಿ ಲ್ಯಾಂಡ್ ಆಗಿ, ಉದ್ಘಾಟಿಸಿದ್ದರು. ಆ ಬಳಿಕ ಇದೀಗ ಮತ್ತೊಮ್ಮೆ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿರುವ ಪ್ರಧಾನಿ ನರೇಂದ್ರ ಮೋದಿ, ರಾಜ್ಯ ಹಾಗು ಶಿವಮೊಗ್ಗದ ಜನರಿಗೆ ಏರ್​ಪೋರ್ಟ್​ನ ವಿಶೇಷತೆಯನ್ನು ಪರೋಕ್ಷವಾಗಿ ಸಾರಲಿದ್ದಾರೆ.  

ಇನ್ನೂ ಪ್ರಧಾನಿ ನರೇಂದ್ರ ಮೋದಿ ಆಗಮನದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಹಾಗು ಶಿವಮೊಗ್ಗ ಪೊಲೀಸ್ ಇಲಾಖೆ ವಿಮಾನ ನಿಲ್ದಾಣದಲ್ಲಿ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ.  ಶಿವಮೊಗ್ಗ ವಿಮಾನ‌ ನಿಲ್ದಾಣಕ್ಕೆ ಪೊಲೀಸ್ ಬಿಗಿ ಭದ್ರತೆ ಒದಗಿಸಲಾಗಿದ್ದು, ಶಿವಮೊಗ್ಗ ಪೊಲೀಸ್ ವಿಮಾನ ನಿಲ್ದಾಣದ ಹೊರಗಡೆ ಭದ್ರತೆ ಕೈಗೊಂಡಿದ್ದಾರೆ. ಏರ್​ಪೋರ್ಟ್​ನಲ್ಲಿ ಕೈಗಾರಿಕಾ ಭದ್ರತಾ ಪಡೆ ಬಂದೊಬಸ್ತ್​ ಮಾಡಿದೆ. 

ಪ್ರೋಟೋಕಾಲ್ ಪ್ರಕಾರ, ಮೋದಿ ಏರ್​ಪೋರ್ಟ್​ನಲ್ಲಿ ಯಾರನ್ನು ಭೇಟಿಯಾಗುವುದಿಲ್ಲ ಎನ್ನಲಾಗಿದೆ. ಆದಾಗ್ಯು ಮೋದಿಯವರು ದೆಹಲಿ ಪ್ರಯಾಣದ ನಡುವಿನ ಈ ಭೇಟಿ ಕುತೂಹಲ ಮೂಡಿಸಿದೆ. ಈ ಹಿನ್ನೆಲೆಯಲ್ಲಿ ಏರ್​ಪೋರ್ಟ್​ ಬಳಿ ವಾಹನಗಳ ನಿಲುಗಡೆಗೂ ಸಹ ಅವಕಾಶ ನೀಡಲಾಗುತ್ತಿಲ್ಲ ಇನ್ನೂ ಪ್ರಧಾನಿ ನರೇಂದ್ರ ಮೋದಿಯವರ ಇಂದಿನ ರಾಜ್ಯ  ಪ್ರವಾಸದ ಕಾರ್ಯಕ್ರಮದ ವಿವರವನ್ನ ಓದಲು ಮತ್ತೊಮ್ಮೆ ಶಿವಮೊಗ್ಗ ಏರ್​ಪೋರ್ಟ್​ನಲ್ಲಿ ಬಂದಿಳಿಯಲಿದ್ದಾರೆ ನರೇಂದ್ರ ಮೋದಿ! ಹುಬ್ಬಳ್ಳಿ ಬಿಟ್ಟು ಶಿವಮೊಗ್ಗವನ್ನೇ ಆಯ್ಕೆ ಮಾಡಿದ್ದೇಕೆ ಪ್ರಧಾನಿ! ಇಲ್ಲಿ ಕ್ಲಿಕ್ ಮಾಡಿ ಓದಿ

Read/ SSLC EXAM/ ಶಿವಮೊಗ್ಗದಲ್ಲಿ ಎಸ್​​ಎಸ್​ಎಲ್​ಸಿ ಪರೀಕ್ಷೆ ಸಿದ್ದತೆ ಹೇಗಿದೆ! ವಿದ್ಯಾರ್ಥಿಗಳಿಗಾಗಿ ಜಿಲ್ಲಾಡಳಿತ ಏನೇನು ವ್ಯವಸ್ಥೆ ಮಾಡುತ್ತಿದೆ ಓದಿ

Read / ಇನ್ನೊಂದು ವಾರದಲ್ಲಿ ವಿಮಾನ ಹಾರಾಟ! ಟಿಕೆಟ್​ಗೆ ₹500 ಸಬ್ಸಿಡಿ! ಏಕೆಗೊತ್ತಾ?

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com 

MALENADUTODAY.COM/ SHIVAMOGGA / KARNATAKA WEB NEWS/ 

HASHTAGS| sagar karnataka Bhadravathi Latest News, #shivamogga live news #karnatakalocalnews, #karnataka assembly elections 2023shivamogga today news,shivamogga latest news#Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynewsChilsagar karnataka Bhadravathi Latest News, #shivamogga live news #karnatakalocalnews, #karnataka assembly elections 2023, shivamogga,shivamogga accident,road ,shivamogga news,shivamogga,shivamogga airport,kannada news live,kannada news,shivamogga airport inauguration,shivamogga latest news,pm modi in shivamogga,latest kannada news,shivamogga mp,live news,shivamogga today news,shivamogga airport​,kannada live news,karnataka latest news,kannada latest news,pm modi inaugurate shivamogga airport,shivamogga new airport,latest news,karnataka news,breaking news,shivamogga news today