ಬೆಂಗಳೂರು-ಶಿವಮೊಗ್ಗ ವಿಮಾನ ಹಾರಾಟಕ್ಕೆ ಮತ್ತೆ ತಾಂತ್ರಿಕ ಸಮಸ್ಯೆ! ಏನಾಯ್ತು ಗೊತ್ತಾ?

The Bengaluru-Shivamogga flight was cancelled due to technical reasons on Thursday. Kempegowda International Airport, Shivamogga Rashtrakavi Kuvempu Airport.

ಬೆಂಗಳೂರು-ಶಿವಮೊಗ್ಗ ವಿಮಾನ ಹಾರಾಟಕ್ಕೆ ಮತ್ತೆ ತಾಂತ್ರಿಕ ಸಮಸ್ಯೆ! ಏನಾಯ್ತು ಗೊತ್ತಾ?

KARNATAKA NEWS / ONLINE / Malenadu today/ Nov 18, 2023 SHIVAMOGGA NEWS

Shivamogga | Malnenadutoday.com | ಶಿವಮೊಗ್ಗ ವಿಮಾನ ನಿಲ್ದಾಣ ದಿಂದ ಆಗಾಗ ಇಂಡಿಗೋ ಸಂಸ್ಥೆಯ ವಿಮಾನದ ಲ್ಯಾಂಡಿಂಗ್ ಹಾಗೂ ಹಾರಾಟಕ್ಕೆ ಸಮಸ್ಯೆಯಾದಂತಹ ಕೆಲವು ಘಟನೆಗಳ ಬಗ್ಗೆ ವರದಿಯಾಗಿದೆ. 

ಬೆಂಗಳೂರು-ಶಿವಮೊಗ್ಗ ವಿಮಾನ (banglore shivamogga flight) ಲ್ಯಾಂಡಿಂಗ್ ವೇಳೆ ಸಮಸ್ಯೆಯಾಗಿ ಕೆಲವು ಹೊತ್ತು ಆಕಾಶದಲ್ಲಿಯೇ ಸುತ್ತುಹೊಡೆದ  ಸನ್ನಿವೇಶಗಳು ಕಣ್ಣಮುಂದಿರುವಂತೆ ಮತ್ತೊಂದು ಘಟನೆ ಬಗ್ಗೆ ವರದಿಯಾಗಿದೆ..

READ : ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಏನೆಲ್ಲಾ ಆಗ್ತಿದೆ ಗೊತ್ತಾ? ಇಲ್ಲಿದೆ ವಿವರ!

ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ದಿಂದ ಕಳೆದ ಗುರುವಾರ ಬೆಳಗ್ಗೆ ಹೊರಡಬೇಕಿದ್ದ ವಿಮಾನ ಸಂಖ್ಯೆ 6E-7731ವಿಮಾನ ತಾಂತ್ರಿಕ ಕಾರಣ ನೀಡಿ ಹಾರಾಟವನ್ನು ರದ್ದುಗೊಳಿಸಿದ್ದರ ಬಗ್ಗೆ ವರದಿಯಾಗಿದೆ. 



READ : SHIVAMOGGA AIRPORT ಗೆ ಆಗಮಿಸಿದ ಸ್ಟಾರ್​ ಏರ್​ಲೈನ್ಸ್​ನ ಸ್ಪೆಷಲ್​ ಬಸ್!

ಶಿವಮೊಗ್ಗದ ರಾಷ್ಟ್ರಕವಿ ಕುವೆಂಪು ವಿಮಾನ ನಿಲ್ದಾಣದಿಂದ ಇಂಡಿಗೋ ಸಂಸ್ಥೆಯು ಎಟಿಆರ್​ ವಿಮಾನಗಳ ಸಂಚಾರವನ್ನ ನಡೆಸ್ತಿದೆ. ಈ ಮಧ್ಯೆ ವಿಮಾನ ಹಾರಾಟದಲ್ಲಿ ಆಗಾಗ ತಾಂತ್ರಿಕ ತೊಂದರೆಯಾಗುತ್ತಿರುವುದು ಪ್ರಯಾಣಿಕರಿಗೆ ಕಿರಿಕಿರಿಯಾಗಿಸ್ತಿದೆ