ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಏನೆಲ್ಲಾ ಆಗ್ತಿದೆ ಗೊತ್ತಾ? ಇಲ್ಲಿದೆ ವಿವರ!

KARNATAKA NEWS / ONLINE / Malenadu today/ Nov 18, 2023 SHIVAMOGGA NEWS

Shivamogga | Malnenadutoday.com | ಶಿವಮೊಗ್ಗ ವಿಮಾನ ನಿಲ್ದಾಣ ನ ಇನ್ನಷ್ಟು ಅಭಿವೃದ್ಧಿಗೆ ಈಗಾಗಲೇ ಹಲವು ಕೆಲಸಗಳು ಆಗಿವೆ. ಇದರ ಜೊತೆಯಲ್ಲಿ ಇನ್ನಷ್ಟು ಕೆಲಸಗಳು ಆಗಬೇಕಿದೆ. ರಾಜ್ಯಮಟ್ಟದ ಪತ್ರಿಕೆಯೊಂದರ ವರದಿ ಪ್ರಕಾರ, ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ  ಎಎಸ್‌ಪಿ ಹಾಗೂ ಬಿಟಿಸಿಪಿ ಶಾಶ್ವತ ವ್ಯವಸ್ಥೆ ಇನ್ನಷ್ಟೆ ಆಗಬೇಕಿದೆ.

READ :5 COTPA , 9 IMV CASE | ಒಂದೇ ದಿನ ಒಂದೇ ಸ್ಟೇಷನ್​ ವ್ಯಾಪ್ತಿಯಲ್ಲಿ 30 ಕೇಸ್​ ದಾಖಲು! ಏನಿದು?

ಏರೋಡ್ರಮ್ ಸೆಕ್ಯುರಿಟಿ ಪ್ರೋಗ್ರಾಂ ಹಾಗೂ bomb threat contingency plan (BTCP)  ಅನುಷ್ಟಾನಕ್ಕೆ ಮೂರು ತಿಂಗಳ ಕಾಲಾವಕಾಶವನ್ನು  Bureau of Civil Aviation Security  ನೀಡಿತ್ತು. ಇದರ ಡೆಡ್​ಲೈನ್ ಇದೇ  ನವೆಂಬರ್​.28ಕ್ಕೆ ಮುಕ್ತಾಯವಾಗುತ್ತಿದೆ. ಈ ನಿಟ್ಟಿನಲ್ಲಿ  ಅನುಮತಿ ವಿಸ್ತರಣೆಗೆ ಕೇಂದ್ರ ಸರ್ಕಾರ ರಾಜ್ಯಕ್ಕೆ ಮತ್ತೆ ಮನವಿ ಮಾಡುವ ಸಾಧ್ಯತೆ ಇದೆ. ಸದ್ಯ ಈ ವ್ಯವಸ್ಥೆಯನ್ನು ಮಂಗಳೂರು ಹಾಗೂ ಮೈಸೂರು ಏರ್​ಪೋರ್ಟ್​ನಿಂದ ಪಡೆಯಲಾಗುತ್ತಿದೆ 

READ : SHIVAMOGGA AIRPORT ಗೆ ಆಗಮಿಸಿದ ಸ್ಟಾರ್​ ಏರ್​ಲೈನ್ಸ್​ನ ಸ್ಪೆಷಲ್​ ಬಸ್!

ಶಿವಮೊಗ್ಗ ಏರ್‌ಪೋರ್ಟ್‌ನಲ್ಲಿ ಕಾರ್ಗೋ ಕಾಂಪ್ಲೆಕ್ಸ್ ನಿರ್ಮಾಣ, ಏಪ್ರಾನ್ ವಿಸ್ತರಣೆ, ಏರೋಸ್ಪೇಸ್ ಪಾರ್ಕ್, ದಕ್ಷಿಣ ಭಾರತದ ಮೊದಲ ಏರ್‌ಬಸ್ ತರಬೇತಿ ಕೇಂದ್ರ ತೆರೆಯುವ ಸಂಬಂಧ ಮೂಲಸೌಕರ್ಯ ಅಭಿವೃದ್ಧಿ ಕೆಲಸ ಆಗಬೇಕಿದೆ. ಈ  ಸಂಬಂಧ ಸಂಸದ ಬಿ.ವೈ ರಾಘವೇಂದ್ರ ರವರು  ಸಚಿವ ಎಂ.ಬಿ.ಪಾಟೀಲ್ ಅವರೊಂದಿಗೆ  ಚರ್ಚೆ ನಡೆಸಿದ್ದಾರೆ. 

ಉಳಿದಂತೆ  ರಾತ್ರಿ ವೇಳೆ ವಿಮಾನಗಳ ಸಂಚಾರಕ್ಕೆ ಅಗತ್ಯವಿರುವ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಸರ್ಕಾರದಿಂದ ಪ್ರಕ್ರಿಯೆಗಳು ನಡೆಯುತ್ತಿವೆ. ಈ ಪ್ರಕ್ರಿಯೆ ಮುಗಿದ ನಂತರ ಶಿವಮೊಗ್ಗದಿಂದ ಬೇರೆ ಬೇರೆ ನಗರಗಳಿಗೆ ವಿಮಾನ ಸಂಚಾರ ರಾತ್ರಿಯು ಆರಂಭವಾಗಲಿದೆ. 


Leave a Comment