ವಾಹನ ಸವಾರರೇ ಎಚ್ಚರ..ಈ ರಸ್ತೆಯಲ್ಲಿ ಸಂಚರಿಸುವಾಗ ಇರಲಿ ಎಚ್ಚರಿಕೆ

Motorists, be careful while travelling on this road.

ವಾಹನ ಸವಾರರೇ ಎಚ್ಚರ..ಈ ರಸ್ತೆಯಲ್ಲಿ ಸಂಚರಿಸುವಾಗ ಇರಲಿ ಎಚ್ಚರಿಕೆ

MALENADUTODAY.COM  |SHIVAMOGGA| #KANNADANEWSWEB

ಶಿವಮೊಗ್ಗದ ಸ್ಮಾರ್ಟ್ ಸಿಟಿ ಯೋಜನೆ ಕಾಮಗಾರಿಗಳು ದೇವರಿಗೆ ಪ್ರೀತಿ ಎಂಬಂತಾಗಿದೆ. ಒಂದು ರಸ್ತೆ ಚರಂಡಿ ಫುಟ್ ಪಾತ್ ಮಾಡಲು ವರ್ಷಗಟ್ಟಲೆ ಸಮಯ ತೆಗೆದುಕೊಂಡ ಕಾಮಗಾರಿಗಳು ಬಹುತೇಕ ಪೂರ್ಣಗೊಂಡರೂ ಅಲ್ಲಲ್ಲಿ ಬಿಟ್ಟಿರುವ ಗುಂಡಿ ಗೊಟರುಗಳು ಸಾವನ್ನು ಕೈಬೀಸಿ ಕರೆಯುತ್ತಿದೆ.

ಮುಖ್ಯವಾಗಿ ಕುವೆಂಪು ರಸ್ತೆಯ ನಂಜಪ್ಪ ಆಸ್ಪತ್ರೆ ಬಳಿ ನೀರು ಸೋರಿಕೆ ತಡೆಗಟ್ಟಲು ದೊಡ್ಡ ಗುಂಡಿ ತೆಗೆದು ಹದಿನೈದು ದಿನಗಳಾಗಿವೆ. ಪೈಪ್ ಲೈನ್ ಕಾಮಗಾರಿಯನ್ನು ಸಕಾಲದಲ್ಲಿ ಪೂರ್ಣಗೊಳಿಸದೆ ಹಾಗೆ ಬಿಡಲಾಗಿದೆ. ವೇಗವಾಗಿ ಬರುವ ವಾಹನ ಸವಾರರಿಗೆ ಇಲ್ಲಿ ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ. ಕಡೇ ಪಕ್ಷ ನಾಲ್ಕು ಬದಿಯಲ್ಲಿ ರಿಫ್ಲೆಕ್ಟರ್ ಇರುವ ಬ್ಯಾರಿಕೂಡ್ ಕೂಡ ಹಾಕಿಲ್ಲ.

READ | Suspected KFD : ಶಿವಮೊಗ್ಗ ಜಿಲ್ಲೆ ಹೊಸನಗರದಲ್ಲಿ ಶಂಕಿತ ಕೆಎಫ್​ಡಿ ಕೇಸ್​!? ಮುಂದಿನ 6 ವಾರಗಳು ಮಹತ್ವದ್ದು! ಜಿಲ್ಲಾ ಆರೋಗ್ಯ ಇಲಾಖೆಯಿಂದ ಮಹತ್ವದ ಮಾಹಿತಿ ಇಲ್ಲಿದೆ

ಸೊಪ್ಪು ಸೆದೆಗಳನ್ನು ನೆಟ್ಟು ಅಪಾಯವನ್ನು ತಡೆಗಟ್ಟಲಾಗಿದೆ. ಹದಿನೈದು ದಿನ ಕಳೆದರೂ ಸಣ್ಣದೊಂದು ಕಾಮಗಾರಿಯನ್ನು ಪೂರ್ಣಗೊಳಿಸಲು ಸ್ಮಾರ್ಟ್ ಸಿಟಿ ಅಧಿಕಾರಿಗಳಿಗೆ ಸಾಧ್ಯವಾಗದೆ ಇರುವುದು ದುರಂತವೇ ಸರಿ. ಇನ್ನು ಪೈಪ್ಲೈನ್ ನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಪೋಲಾಗುತ್ತಿದ್ದು, ರಸ್ತೆಗೆ ಹರಿಯುತ್ತಿದೆ. ಈ ಗುಂಡಿಗೆ ಶಾಶ್ವತ ಪರಿಹಾರ ಕಲ್ಪಿಸಿ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ. ಇಲ್ಲಿ ಏನೇ ಅವಘಡಗಳಾದ್ರೂ, ಅದರ ಹೊಣೆಯನ್ನು ಸ್ಮಾರ್ಟ್ ಸಿಟಿ ಅಧಿಕಾರಿಗಳೇ ಹೊರಬೇಕಾಗುತ್ತದೆ. 

ಕುವೆಂಪು ರಸ್ತೆಯ ವಾಸನ್ ಐ ಕೇರ್ ಸನಿಹದ ರಸ್ತೆಯ ಪಕ್ಕದಲ್ಲಿ ಪೈಪ್ ಲೈನ್ ಗಳ ಜೋಡಣೆಗಾಗಿ ಹಾಕಿರುವ ಜಕ್ಷನ್ ಬಾಕ್ಸ್ ಬ್ಲಾಕ್ ಗಳು ಹಾಳಾಗಿದೆ. ಇವು ಭಾರದ ವಾಹನಗಳ ತೂಕವನ್ನು ಹೊರುವ ಸಾಮರ್ಥ್ಯವನ್ನು ಕಳೆದುಕೊಂಡಿದೆ ಎಂಬುದನ್ನು ಸಾಕ್ಷಿಕರಿಸಿ ಹೇಳುತ್ತಿವೆ. ಇಂತಹ ಬ್ಲಾಕ್ ಗಳ ಮೇಲೆ ಭಾರಿ ತೂಕದ ವಾಹನಗಳು ಸಂಚಿರಿಸಿದರೆ ಅವಘಡ ಸಂಭವಿಸುವ ಸಾಧ್ಯತೆಗಳು ಹೆಚ್ಚಿದೆ. ಸ್ಮಾರ್ಟ್ ಸಿಟಿ ಅಧಿಕಾರಿಗಳು ಈ ಬಗ್ಗೆ ತ್ವರಿತಗತಿಯಲ್ಲಿ ಕಾರ್ಯಗತವಾಗಬೇಕಿದೆ.
READ / Agumbe Tiger/ಇದು ಶಿವಮೊಗ್ಗದ ರಾಜಾಹುಲಿಯಲ್ಲವೇ? ಆಗುಂಬೆಯಲ್ಲಿ ವ್ಯಾಘ್ರ ಸಂಚಾರ ನಿಜವೆ? ವೈರಲ್​ ಸತ್ಯ ಇಲ್ಲಿದೆ

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com 

HASHTAGS| sagar karnataka Bhadravathi Latest News, #shivamogga live news #karnatakalocalnews, #karnataka assembly elections 2023shivamogga today news,shivamogga latest news#Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynewsChilur