ಚೈತ್ರಾ ಕುಂದಾಪರ ಬಂಧನದ ಬಗ್ಗೆ ಬಿ.ವೈ.ವಿಜಯೇಂದ್ರ ಪ್ರತಿಕ್ರಿಯೆ!ಸಚಿವ ಸುಧಾಕರ್ ವಿರುದ್ಧ ಸಿಡಿಮಿಡಿ! ನಾಲ್ಕು ಮಾತು!

MLA B.Y.Vijayendra in Shikaripura district of Shimoga commented on the arrest of Chaitra Kundapura.ಶಿವಮೊಗ್ಗ ಜಿಲ್ಲೆ ಶಿಕಾರಿಪುರದಲ್ಲಿ ಶಾಸಕ ಬಿ.ವೈ.ವಿಜಯೇಂದ್ರವರು ಚೈತ್ರ ಕುಂದಾಪುರರವರ ಬಂಧನದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ

ಚೈತ್ರಾ ಕುಂದಾಪರ ಬಂಧನದ ಬಗ್ಗೆ ಬಿ.ವೈ.ವಿಜಯೇಂದ್ರ ಪ್ರತಿಕ್ರಿಯೆ!ಸಚಿವ ಸುಧಾಕರ್ ವಿರುದ್ಧ ಸಿಡಿಮಿಡಿ! ನಾಲ್ಕು ಮಾತು!

KARNATAKA NEWS/ ONLINE / Malenadu today/ Sep 13, 2023 SHIVAMOGGA NEWS 



ಕಾಂಗ್ರೆಸ್​ ಸರ್ಕಾರದ ಸಚಿವ ಡಿ.ಸುಧಾಕರ್​ ವಿರುದ್ಧ ಶಿವಮೊಗ್ಗ ಜಿಲ್ಲೆ ಶಿಕಾರಿಪುರ ಕ್ಷೇತ್ರದ ಶಾಸಕ  ರಾಜ್ಯ ಬಿಜೆಪಿ ಉಪಾಧ್ಯಕ್ಷ ಹಾಗೂ ಶಾಸಕ ಬಿ.ವೈ.ವಿಜಯೇಂದ್ರ ಆಕ್ರೋಶ ಹೊರಹಾಕಿದ್ದಾರೆ . ಸುಧಾಕರ್ ಸೇರಿದಂತೆ ಯಾವುದೇ ಮಂತ್ರಿಯ ಜೊತೆ ನನಗೆ ವೈಯಕ್ತಿಕ ದ್ವೇಷ ಇಲ್ಲ.  ಗೌರವಾನ್ವಿತ ಸ್ಥಾನದಲ್ಲಿರುವ ಸುಧಾಕರ್ ದಲಿತ & ಬ್ರಾಹ್ಮಣ ಸಮಾಜದ ಬಗ್ಗೆ ಮಾತನಾಡಿದ್ದಾರೆ ಸುಧಾಕರ್ ಅವರ ಮಾತುಗಳು ಅವರಿಗೆ ಶೋಭೆ ತರುತ್ತದೆಯೇ ಎಂದು ಪ್ರಶ್ನಿಸಿದ್ದಾರೆ. 

ಸಚಿವರ ವಿರುದ್ಧ ಕೇಸ್ ದಾಖಲಾದ್ರೂ ಡಿಸಿಎಂ ಸಮರ್ಥನೆ ಮಾಡಿ, ಕ್ಲೀನ್ ಚಿಟ್ ಕೊಡ್ತಿದ್ದಾರೆ ಎಂದು ಆರೋಪಿಸಿದ ವಿಜಯೇಂದ್ರರವರು, ದಲಿತರ ಬಗ್ಗೆ ಒಂದು ಕಡೆ ಮೊಸಳೆ ಕಣ್ಣೀರು ಹಾಕ್ತಾರೆ. ದಲಿತರ ಮತ ಪಡೆಯಲು ಎಲ್ಲಾ ನಾಟಕ ಮಾಡ್ತಾರೆ. ಕಾಂಗ್ರೆಸ್ ನವರ ನಿಜಬಣ್ಣ ದಲಿತರು ಸೇರಿದಂತೆ ರಾಜ್ಯದ ಜನರಿಗೆ ಈಗ ಗೊತ್ತಾಗಿದೆ ಎಂದು ಟೀಕಿಸಿದ್ದಾರೆ. 

ಡಿ.ಸುಧಾಕರ್ ರಾಜೀನಾಮೆ ಜೊತೆಗೆ ಕಾನೂನು ಕ್ರಮಕ್ಕೆ ರಾಜ್ಯ ಬಿಜೆಪಿ ಪರವಾಗಿ ಒತ್ತಾಯಿಸುತ್ತೇನೆ ಎಂದ ಅವರು  FIR ದಾಖಲಾದ್ರೂ ಡಿಸಿಎಂ ಸಚಿವರ ಪರ ಮಾತನಾಡುವುದು ದಲಿತರಿಗೆ ಮಾಡುವ ಅಪಮಾನ ಎಂದಿದ್ದಾರೆ.

ಇದೇ ವೇಳೆ  ಕರಾವಳಿಯಲ್ಲಿ ಅರೆಸ್ಟ್ ಆದ  ಚೈತ್ರಾ ಕುಂದಾಪುರ ವಿರುದ್ಧ ಕೇಸ್ ವಿಚಾರಕ್ಕೆ ಪ್ರತಿಕ್ರಿಯಿಸಿದ ವಿಜಯೇಂದ್ರ, ಚೈತ್ರಾ ವಿರುದ್ಧ FIR ಆಗಿದೆ. ಅರೆಸ್ಟ್ ಮಾಡಿದ್ದಾರೆ. ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲಿ. ಅದಕ್ಕೆ ನಮ್ಮ ಅಭ್ಯಂತರವಿಲ್ಲ ಎಂದಿದ್ದಾರೆ. 



ಕಾವೇರಿ ವಿಚಾರದಲ್ಲಿ ರಾಜ್ಯ ಸರ್ಕಾರ ಚೆಲ್ಲಾಟ ಆಡುತ್ತಿದೆ ಎಂದ ಬಿವೈ ವಿಜಯೇಂದ್ರ ರವರು ಸರ್ಕಾರ ಮಾಡಬೇಕಾದ ಕೆಲಸ ರೈತ ಸಂಘ ಮಾಡುತ್ತಿದೆ. ಇವತ್ತು ರೈತಸಂಘ ಸುಪ್ರೀಂ ಕೋರ್ಟ್ ಗೆ ಇಂಪ್ಲೀಡಿಂಗ್ ಅರ್ಜಿ ಸಲ್ಲಿಸಿದೆ. ಸರ್ಕಾರದ ಬಗ್ಗೆ ರೈತರು ವಿಶ್ವಾಸ ಕಳೆದುಕೊಂಡಿದ್ದಾರೆ. ಕಾವೇರಿ ವಿಚಾರದಲ್ಲೂ ಆ ಭಾಗದ ರೈತರು ವಿಶ್ವಾಸ ಕಳೆದುಕೊಂಡಿದ್ದಾರೆ ಎಂದು ಆರೋಪಿಸಿದರು. 

ಬರದ ವಿಚಾರದಲ್ಲಿ ಕಷ್ಟಕ್ಕೆ ಸ್ಪಂದಿಸಬೇಕಾದ ಸರ್ಕಾರದ ಸಚಿವರು ಬೇಜವಾಬ್ದಾರಿ ಹೇಳಿಕೆ ನೀಡ್ತಿದ್ದಾರೆ. ಇದರಿಂದಲೇ ರೈತರ ಆತ್ಮವಿಶ್ವಾಸ ಕುಸಿಯುತ್ತಿದೆ. ಕಂದಾಯ ಸಚಿವರು ವಾರದಲ್ಲೇ ಬರ ಘೋಷಣೆ ಮಾಡ್ತಿವಿ ಅಂದಿದ್ದರು. ಆದರೆ, ಈವರೆಗೆ ಬರ ಘೋಷಣೆ ಮಾಡಿಲ್ಲ. ಪರಿಹಾರಕ್ಕೆ ರೈತರು ಆತ್ಮಹತ್ಯೆ ಮಾಡಿಕೊಳ್ತಾರೆ ಎಂದು ಸಚಿವರೇ ಹೇಳ್ತಾರೆ. ಬಾಯ್ತಪ್ಪಿನಿಂದಲೂ ಸಹ ಸಚಿವರು ಈ ರೀತಿ ಹೇಳಿಕೆ ಕೊಡಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದ್ರು. 


ಇನ್ನಷ್ಟು ಸುದ್ದಿಗಳು