ಶಿವಮೊಗ್ಗ ಗ್ರಾಮಾಂತರದಲ್ಲಿ ‘ಹರಿದ’ ಫ್ಲೆಕ್ಸ್​ ರಾಜಕಾರಣ! ಕೇಸರಿ ಪಾಳಯದಲ್ಲಿ ಶೀತಲ ಸಮರವೇ?

Flex politics in Shimoga rural! Cold War in the bjp camp?

ಶಿವಮೊಗ್ಗ ಗ್ರಾಮಾಂತರದಲ್ಲಿ ‘ಹರಿದ’ ಫ್ಲೆಕ್ಸ್​ ರಾಜಕಾರಣ!  ಕೇಸರಿ ಪಾಳಯದಲ್ಲಿ ಶೀತಲ ಸಮರವೇ?
ಶಿವಮೊಗ್ಗ ಗ್ರಾಮಾಂತರದಲ್ಲಿ ‘ಹರಿದ’ ಫ್ಲೆಕ್ಸ್​ ರಾಜಕಾರಣ! ಕೇಸರಿ ಪಾಳಯದಲ್ಲಿ ಶೀತಲ ಸಮರವೇ?

ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಫ್ಲೆಕ್ಸ್​ ಪಾಲಿಟಿಕ್ಸ್ ಜೋರಾಗಿ ನಡೆಯುತ್ತಿದೆ. ಅದು ಒಂದೇ ಪಕ್ಷದಲ್ಲಿನ ಸದಸ್ಯರ ನಡುವಿನ ಶೀತಲ  ಸಮರಕ್ಕೆ ಸಾಕ್ಷಿಯಾಗಿದೆ. 

ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಹಾಲಿ ಶಾಸಕ ಅಶೋಕ್ ನಾಯ್ಕ್​ ಈ ಸಲವೂ ಮತ್ತೊಮ್ಮೆ ಸ್ಪರ್ಧೆ ಬಯಸಿದ್ದು, ಅಭ್ಯರ್ಥಿಯಾಗುವ ನಿರೀಕ್ಷೆಯಲ್ಲಿದ್ದಾರೆ. ಅದರೇ ರೀತಿಯಲ್ಲಿ ಪಾಲಿಕೆ ಸದಸ್ಯ ದೀರರಾಜ್ ಹೊನ್ನವಿಲೆ ಕೂಡ ಕ್ಷೇತ್ರದಲ್ಲಿ ಟಿಕೆಟ್ ಬಯಸಿದ್ದಾರೆ. ಈ ನಿಟ್ಟಿನಲ್ಲಿ ಪ್ರಯತ್ನವನ್ನು ಸಹ ನಡೆಸ್ತಿದ್ದಾರೆ. ಸದ್ಯ ಈ ಪೈಪೋಟಿ ರಾಜ್ಯಾಧ್ಯಕ್ಷರ ಭೇಟಿ ವೇಳೆ ಫ್ಲೆಕ್ಸ್ ಹರಿದ ಘಟನೆಗಳಿಗೆ ಸಾಕ್ಷಿಯಾಗಿದೆ. 

ಮೀನು ಹಿಡಿಯಲು ಬಂದವರ ಮೇಲೆ ಜೇನುನೊಣಗಳ ದಾಳಿ! 6 ಜನರಿಗೆ ಗಂಭೀರ ಪೆಟ್ಟು!

ಬಿಜೆಪಿ ರಾಜ್ಯಾಧ್ಯಕ್ಷ ನಿನ್ನೆ ಹೊಳಲೂರಿನಲ್ಲಿ ಪೇಜ್​ ಪ್ರಮುಖ್​ ಸಮಾವೇಶಕ್ಕೆ ಬಂದಿದ್ದರು. ವಿಪಕ್ಷಗಳ ವಿರುದ್ಧ ಅಬ್ಬರದ ಮಾತುಗಳನ್ನ ಆಡಿ, ಕಾರ್ಯಕರ್ತರನ್ನು ಹುರಿದುಂಬಿಸಿ, ಚುನಾವಣೆಗೆ ಅಣಿಯಾಗುವಂತೆ ಅವರು ಪ್ರೇರಣೆ ನೀಡಿದರು. ಆದರೆ ಇದರ ನಡುವೆ ರಾಜ್ಯಾಧ್ಯಕ್ಷರ ಸ್ವಾಗತದ ಪ್ಲೆಕ್ಸ್​ಗಳು ದೊಡ್ಡಮಟ್ಟಿಗೆ ಸದ್ದು ಮಾಡಿವೆ. 

JP BIG EXCLUSIVE : ಸಕ್ರೆಬೈಲ್ ಅನೆ ಬಿಡಾರದಿಂದ ಮತ್ತೆ ಮೂರು ಆನೆಗಳ ಸ್ಥಳಾಂತರಕ್ಕೆ ಬೇಡಿಕೆ!

ಅಶೋಕ್​ ನಾಯ್ಕ್​ ಹಾಗೂ ದೀರರಾಜ್ ಹೊನ್ನವಿಲೆ ಇಬ್ಬರು ಸಹ ರಾಜ್ಯಾಧ್ಯಕ್ಷರ ಸ್ವಾಗತ ಕೋರಿ ಪ್ಲೇಕ್ಸ್​ಗಳನ್ನು ಅಳವಡಿಸಿದ್ದರು. ಈ ನಡುವೆ ಹೊನ್ನವಿಲೆಯವರ ಭಾವಚಿತ್ರವಿದ್ದ ಫ್ಲೆಕ್ಸ್​ಗಳನ್ನು ಕಿಡಿಗೇಡಿಗಳು ಹರಿದಿದ್ದಾರೆ. ಇದನ್ನ ಯಾರು ಮಾಡಿದ್ರು? ಏಕೆ ಮಾಡಿದ್ರು ? ಎಂಬುದು ಭಾವಚಿತ್ರಗಳನ್ನು ನೋಡಿಯೆ ಪಾಲಿಕೆ ಸದಸ್ಯರ ಬೆಂಬಲಿಗರಿಗೆ ಅರ್ಥವಾಗಿತ್ತು. ಹೀಗಾಗಿ, ಶಾಸಕರ ಬೆಂಬಲಿಗರ ವಿರುದ್ಧ ಆರೋಪ ಮಾಡಿ ಆಕ್ರೋಶ ಹೊರಹಾಕಿದ್ದರು. ಸದ್ಯ ಈ ಫ್ಲೆಕ್ಸ್​ ರಾಜಕಾರಣ ಗ್ರಾಮಾಂತರ ಕ್ಷೇತ್ರದಲ್ಲಿನ ಬಿಜೆಪಿ ನಾಯಕರ ಶೀತಲಸಮರಕ್ಕೆ ಸಾಕ್ಷಿಯಾಗಿದ್ದು, ಟಿಕೆಟ್ ಘೋಷಣೆಯಾಗುವವರೆಗೂ ಈ ಪೈಪೋಟಿ ಮುಂದುವರಿಯುವ ಸಾಧ್ಯತೆ ಇದೆ. 

ನಂದಿನಿ ಜಂಬೋ ಪಾಕೆಟ್ ಹಾಲಿನ ದರ 3 ರೂಪಾಯಿ ಹೆಚ್ಚಳ!

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com