ಶಿವಮೊಗ್ಗ ಜಿಲ್ಲಾ ಬಿಜೆಪಿಯಲ್ಲಿ ಮತ್ತೆ ಭಿನ್ನಮತ/ ಮತ್ತೊಬ್ಬ ಶಾಸಕರ ವಿರುದ್ಧ ಮಹಿಳಾ ನಾಯಕಿಯ ಬಹಿರಂಗ ಅಸಮಾಧಾನ/ ವೈರಲ್ ವಿಡಿಯೋದಲ್ಲಿ ಏನಿದೆ

ಶಿವಮೊಗ್ಗ ಗ್ರಾಮಾಂತರ ಶಾಸಕ ಅಶೋಕ್​ ನಾಯ್ಕ್​ರವರ ವಿರುದ್ಧ ಅಸಮಾಧಾನ ಸ್ಫೋಟಗೊಂಡಿದೆ. ಅಲ್ಲದೆ ಈ ಸಂಬಂಧ ಮಹಿಳಾ ಜನಪ್ರತಿನಿದಿಯೊಬ್ಬರು ತಮ್ಮ ಅಳಲನ್ನು ಮುಖಂಡರಾದ ಆಯನೂರು ಮಂಜುನಾಥ್ ಹಾಗೂ ರುದ್ರೇಗೌಡರ ಎದುರೇ ತೋಡಿಕೊಂಡಿದ್ಧಾರೆ

ಶಿವಮೊಗ್ಗ ಜಿಲ್ಲಾ ಬಿಜೆಪಿಯಲ್ಲಿ ಮತ್ತೆ ಭಿನ್ನಮತ/ ಮತ್ತೊಬ್ಬ ಶಾಸಕರ ವಿರುದ್ಧ ಮಹಿಳಾ ನಾಯಕಿಯ ಬಹಿರಂಗ ಅಸಮಾಧಾನ/ ವೈರಲ್ ವಿಡಿಯೋದಲ್ಲಿ ಏನಿದೆ

ಶಿವಮೊಗ್ಗ ಜಿಲ್ಲಾ ಬಿಜೆಪಿಯಲ್ಲಿ ಮತ್ತೆ ಅಸಮಾಧಾನ ಸ್ಫೋಟಗೊಂಡಿದೆ. ಇತ್ತೀಚೆಗೆ ಸೊರಬ ಶಾಸಕರ ವಿರುದ್ಧ ಅಸಮಾಧಾನ ಹೊಗೆಯಾಡಿತ್ತು.

ಸಾದ್ವಿ ಪ್ರಗ್ಯಾ ವಿರುದ್ಧ ದೂರು/ ಕೋಟೆ ಪೊಲೀಸ್​ ಸ್ಟೇಷನ್​ಗೆ ಹಾಜರಾಗುವಂತೆ ಸೂಚನೆ/ ದಾಖಲಾಗಿತ್ತಾ ಇನ್ನೊಂದು ಕಂಪ್ಲೆಂಟ್

ಇದೀಗ ಶಿವಮೊಗ್ಗ ಗ್ರಾಮಾಂತರ ಶಾಸಕ ಅಶೋಕ್​ ನಾಯ್ಕ್​ರವರ ವಿರುದ್ಧ ಅಸಮಾಧಾನ ಸ್ಫೋಟಗೊಂಡಿದೆ. ಅಲ್ಲದೆ ಈ ಸಂಬಂಧ ಮಹಿಳಾ ಜನಪ್ರತಿನಿದಿಯೊಬ್ಬರು ತಮ್ಮ ಅಳಲನ್ನು ಮುಖಂಡರಾದ ಆಯನೂರು ಮಂಜುನಾಥ್ ಹಾಗೂ ರುದ್ರೇಗೌಡರ ಎದುರೇ ತೋಡಿಕೊಂಡಿದ್ಧಾರೆ. ಅದರ ವಿಡಿಯೋ ವೈರಲ್ ಆಗಿದೆ. 

ಅಗ್ನಿ ಆಕಸ್ಮಿಕ : ಅಂಗಡಿಗೆ ಬಿತ್ತು ಬೆಂಕಿ/ ಉಡುಗೊರೆ ತಯಾರಿಸುವ ಶಾಪ್​ನಲ್ಲಿ 50 ಲಕ್ಷ ರೂಪಾಯಿಗೂ ಅಧಿಕ ನಷ್ಟ?

ಹಾರ್ನಹಳ್ಳಿಯಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ವಿಡಿಯೋ ಇದಾಗಿದೆ ಎನ್ನಲಾಗಿದೆ, ವಿಡಿಯೋದಲ್ಲಿ ಮಹಿಳೆ ಧರ್ಮಸ್ಥಳವೂ ಸೇರಿದಂತೆ ತನ್ನ ಮಕ್ಕಳ ಮೇಲೆ ಆಣೆ ಮಾಡಿದ್ದಾಗಿ ಪ್ರಸ್ತಾಪಿಸಿದ್ಧಾರೆ.

ಕೆಲಸದ ಸಮಾಚಾರ/ Job news/ ಕೆಲಸ ಹುಡುಕುತ್ತಿರೋರಿಗೆ ಇಲ್ಲಿದೆ ಗುಡ್​ ನ್ಯೂಸ್/ ಶಿವಮೊಗ್ಗದಲ್ಲಿಯೇ ನಡೆಯಲಿದೆ JOB ಮೇಳ/ ವಿವರ ಇಲ್ಲಿದೆ, ವಿಷಯ ಎಲ್ಲರಿಗೂ ತಿಳಿಸಿ

ಅಲ್ಲದೆ ತಮ್ಮನ್ನ ಶಾಸಕರು ಕಡೆಗಣಿಸಿದ್ಧಾರೆ ಎಂದು ಆರೋಪಿಸಿದ್ಧಾರೆ. ವಿಡಿಯೋದಲ್ಲಿ ಮಹಿಳೆಯೇ ಹೇಳುವಂತೆ ಅವರು ಶಾರದಾ ರಂಗನಾಥ್ ಎಂಬವರಾಗಿದ್ದು, ಗ್ರಾಮ ಪಂಚಾಯಿತಿ ಒಂದರ ಅಧ್ಯಕ್ಷೆಯಾಗಿದ್ದಾರಂತೆ.

ಇದನ್ನು ಸಹ ಓದಿ : ಸಾರ್ವಜನಿಕರಲ್ಲಿ ವಿನಂತಿ/ ಇವತ್ತು ಶಿವಮೊಗ್ಗದ ಈ ಬಹುತೇಕ ಭಾಗಗಳಲ್ಲಿ ಕರೆಂಟ್ ಇರೋದಿಲ್ಲ/ ಎಲ್ಲೆಲ್ಲಿ ಓದಿ

ಇನ್ನೂ ಮಹಿಳಾ ನಾಯಕಿ ಮಾತನಾಡುವುದಕ್ಕೂ ಮೊದಲು ಇನ್ನೊಬ್ಬರು ಜನಪ್ರತಿನಿದಿ ಕೂಡ ಶಾಸಕ ಅಶೋಕ್ ನಾಯ್ಕ್​ ವಿರುದ್ಧ  ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ