ಚುನಾವಣೆ ಬಳಿಕ ಬಿ.ವೈ.ವಿಜಯೇಂದ್ರ ಸ್ಥಾನಕ್ಕೆ ಕುತ್ತು | ಬಿಎಸ್‌ವೈಗೆ ಅನ್ಯಾಯ | ಎಂ.ಬಿ.ಪಾಟೀಲ್‌ ಹೇಳಿದ್ದೇನು?

After the election, B.Y.Vijayendra's position is close. Injustice to BSY What did MB Patil say?

ಚುನಾವಣೆ ಬಳಿಕ ಬಿ.ವೈ.ವಿಜಯೇಂದ್ರ ಸ್ಥಾನಕ್ಕೆ ಕುತ್ತು | ಬಿಎಸ್‌ವೈಗೆ ಅನ್ಯಾಯ | ಎಂ.ಬಿ.ಪಾಟೀಲ್‌ ಹೇಳಿದ್ದೇನು?
B.Y.Vijayendra

SHIVAMOGGA | MALENADUTODAY NEWS |  Apr 20, 2024   

ಲೋಕಸಭಾ ಚುನಾವಣೆ 2024 ರಲ್ಲಿ ವಿರಶೈವ ಲಿಂಗಾಯತ ಮಗಳನ್ನ ಪಡೆಯುವ ಸಲುವಾಗಿ ಬಿ.ವೈ.ವಿಜಯೇಂದ್ರರನ್ನು ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಲೋಕಸಭೆ ಚುನಾವಣೆ ನಂತರ ಅವರನ್ನು ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಸುವುದಿಲ್ಲ ಅಂತಾ ಕೈಗಾರಿಕೆ ಮತ್ತು ಮೂಲ ಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ ಭವಿಷ್ಯ ನುಡಿದಿದ್ದಾರೆ. 

ಈ ಸಂಬಂಧ ಸಭೆಯೊಂದರಲ್ಲಿ ಮಾತನಾಡಿದ ಅವರು  2008ರಲ್ಲಿ ಎಚ್‌.ಡಿ.ಕುಮಾರಸ್ವಾಮಿ ಅವರು 20 ತಿಂಗಳ ಮುಖ್ಯಮಂತ್ರಿ ಅವಧಿ ಮುಗಿಸಿದ ನಂತರ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಅಧಿಕಾರ ಹಸ್ತಾಂತರಿಸಬೇಕಿತ್ತು. ಆದರೆ ಮಾತು ತಪ್ಪಿದ ಜೆಡಿಎಸ್‌, ಯಡಿಯೂರಪ್ಪ ಮುಖ್ಯಮಂತ್ರಿಯಾಗುವುದನ್ನು ತಪ್ಪಿಸಿದರು. 

ಆನಂತರ  ಯಡಿಯೂರಪ್ಪ ಅವರನ್ನು ಬಿಜೆಪಿ 2 ಬಾರಿ ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸಿದೆ. ಹೀಗಾಗಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋಲಾಯಿತು. ಬಿಜೆಪಿ ನಾಯಕ ಬಿ.ಎಲ್‌.ಸಂತೋಷ್ ಲಿಂಗಾಯತ ನಾಯಕತ್ವವನ್ನು ಮುಗಿಸಲು ಹೊರಟಿದ್ದಾರೆ. ಅದೇ ಕಾರಣಕ್ಕೆ ಯಡಿಯೂರಪ್ಪ ಅವರನ್ನು ತುಳಿದಿದ್ದಾರೆ ಎಂದು ಆರೋಪಿಸಿದರು.