ಪಾಲಿಶ್‌ಗೆ ಕೊಟ್ಟ ಚಿನ್ನದ ಸರ ಇದ್ದ ಹಾಗೆ ಇರುತ್ತೆ, ಆದರೆ ತೂಕ ಅರ್ಧಕರ್ಧ ಕಮ್ಮಿಯಾಗುತ್ತೆ! ಮಹಿಳೆಯರೇ ಹುಷಾರ್!?‌ ಈ ಗ್ಯಾಂಗ್‌ನ್ನ ನಂಬದಿರಿ

A case of theft of gold on the pretext of polishing a gold chain has been registered in Bhadravathi

ಪಾಲಿಶ್‌ಗೆ ಕೊಟ್ಟ ಚಿನ್ನದ ಸರ ಇದ್ದ ಹಾಗೆ ಇರುತ್ತೆ, ಆದರೆ ತೂಕ ಅರ್ಧಕರ್ಧ ಕಮ್ಮಿಯಾಗುತ್ತೆ! ಮಹಿಳೆಯರೇ ಹುಷಾರ್!?‌ ಈ ಗ್ಯಾಂಗ್‌ನ್ನ ನಂಬದಿರಿ
Bhadravathi , polishing a gold chain

Shivamogga  Apr 5, 2024   ಎಲೆಕ್ಷನ್‌ ಗಡಿಬಿಡಿ ನಡುವೆ ಶಿವಮೊಗ್ಗದಲ್ಲಿ ಮತ್ತೆ ಪಾಲಿಶ್‌ ಗ್ಯಾಂಗ್‌ ಆಕ್ಟೀವೇಟ್‌ ಆಗಿದೆ. ಇದಕ್ಕೆ ಸಾಕ್ಷಿ ಎಂಬಂತೆ ಭದ್ರಾವತಿಯಲ್ಲಿ ಪಾಲಿಶ್‌ ಗ್ಯಾಂಗ್‌ ಚಿನ್ನದೊಂದಿಗೆ ಪರಾರಿಯಾಗಿರುವ ಬಗ್ಗೆ ವರದಿಯಾಗಿದೆ. 

ಏನಿದು ಕೇಸ್‌

ಕೆಎಸ್‌ಆರ್ಟಿಸಿ ಡಿಪೋದಲ್ಲಿ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿರುವ ಸಿಬ್ಬಂದಿಯೊಬ್ಬರ ಪತ್ನಿಯನ್ನ ಅಪರಿಚಿತರು ಸಂಪರ್ಕಿಸಿದ್ದಾರೆ. ಮನೆ ಬಾಗಿಲಿಗೆ ಬಂದಿದ್ದ ಅಪರಿಚಿತರು ನಾವು ಬಂಗಾರದ ಕೆಲಸ ಮಾಡುತ್ತೇವೆ ಎಂದು ಪರಿಚಯಿಸಿಕೊಂಡಿದ್ದಾರೆ. ಅಲ್ಲದೆ ಚಿನ್ನಕ್ಕೆ ಪಾಲಿಶ್‌ ಹಾಕಿಕೊಡುತ್ತೇವೆ ಎಂದು ನಾನಾ ರೀತಿಯಲ್ಲಿ ಮಾತನಾಡಿದ್ದಾರೆ. ಅವರ ಮಾತು ನಂಬಿದ ಲೇಡಿ, ತಮ್ಮ ಮಾಂಗಲ್ಯ ಸರವನ್ನ ಪಾಲಿಶ್‌ ಮಾಡಲು ನೀಡಿದ್ದಾರೆ. ಆ ಬಳಿಕ ಅತ್ತೆಯ ಚಿನ್ನದ ಸರವನ್ನ ಪಾಲಿಶ್‌ ಮಾಡಿಸಿದ್ದಾರೆ. 

ಅಪರಿಚಿತರು ಚಿನ್ನವನ್ನು ಪಾಲಿಶ್‌ ಮಾಡಿ, ಮಹಿಳೆಗೆ ವಾಪಸ್‌ ಕೊಟ್ಟು ಹೋಗಿದ್ದಾರೆ. ಸರಗಳನ್ನ ಪಡೆದ ಮಹಿಳೆಗೆ ಅದರ ತೂಕ ಕಡಿಮೆ ಇರುವ ಬಗ್ಗೆ ಅನುಮಾನ ಮೂಡಿದಿದೆ. ಹಾಗಾಗಿ ಹತ್ತಿರದ ಚಿನ್ನದ ಅಂಗಡಿಗೆ ಹೋಗಿ ಸರವನ್ನು ತೂಕಕ್ಕೆ ಇಟ್ಟಿದ್ದಾರೆ. ಈ ವೇಳೆ 23 ಗ್ರಾಂನ ಮಾಂಗಲ್ಯ ಸರದ ತೂಕ 14 ಗ್ರಾಂಗೆ ಇಳಿದಿರುವುದು ಗೊತ್ತಾಗಿದೆ. ಅದೇ ರೀತಿಯಲ್ಲಿ ಅತ್ತೆಯವರ ಚಿನ್ನದ ಸರದ ತೂಕ 20 ಗ್ರಾಂ ಇದ್ದಿದ್ದು 14 ಗ್ರಾಂಗೆ ಇಳಿದಿರುವುದು ಗೊತ್ತಾಗಿದೆ. 

ಹೀಗೆ ತಮಗೆ ಮೋಸವಾಗಿರುವ ವಿಚಾರ ಗೊತ್ತಾಗಿ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ. ಚಿನ್ನವನ್ನು ಪಾಲಿಶ್‌ ಮಾಡುವುದಾಗಿ ಆಸಿಡ್‌ ನಲ್ಲಿ ಕರಗಿಸಿ 15 ಗ್ರಾಂ ಚಿನ್ನವನ್ನು ಮೋಸದಿಂದ ತೆಗೆದುಕೊಂಡು ಹೋಗಿರುವ ಬಗ್ಗೆ ದೂರಿನಲ್ಲಿ ಆರೋಪಿಸಿದ್ದಾರೆ. ಸದ್ಯಕ್ಕೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.