SHIVAMOGGA AIRPORT ಗೆ ಪ್ರಧಾನಿ ಮೋದಿ ಬರುವ ಮುನ್ನ, ವಾಯುಸೇನೆ ವಿಮಾನದ ಟ್ರಯಲ್​ ರನ್​! ಏನಿದು? ಏತಕ್ಕಾಗಿ? ಹೇಗೆ ನಡೀತು? ವಿವರ ಇಲ್ಲಿದೆ

Ahead of PM Modi's arrival at SHIVAMOGGA AIRPORT, the trial run of an Air Force plane! What is this? For what? How did it go? Here's the details

MALENADUTODAY.COM | SHIVAMOGGA  | #KANNADANEWSWEB

ಶಿವಮೊಗ್ಗಕ್ಕೆ ಇವತ್ತು ವಿಶೇಷವಾದ ದಿನ. ಎಕೆಂದರೆ ಶಿವಮೊಗ್ಗಕ್ಕೆ ವಿಮಾನದಲ್ಲಿ ಹಾರಿಬರುತ್ತೀನಿ ಎನ್ನುತ್ತಿದ್ದವರ ಕನಸಿಗೆ ಇನ್ನೂ ರೆಕ್ಕೆ ಬರುತ್ತಿದೆ. ಇದೇ ಫೆಬ್ರವರಿ 27 ಪ್ರಧಾನಿ ನರೇಂದ್ರ ಮೋದಿ ಶಿವಮೊಗ್ಗಕ್ಕೆ ವಿಮಾನದಲ್ಲಿ ಹಾರಿಕೊಂಡು ಬರುತ್ತಿದ್ದಾರೆ. ಪ್ರಧಾನಿಯವರ ಈ ಆಕಾಶಯಾತ್ರೆಯ ಭೇಟಿಯನ್ನು ಇವತ್ತು ವಾಯುಸೇನೆಯ ಬೋಯಿಂಗ್ ವಿಮಾನ ದೃಢೀಕರಿಸಿದೆ. ನಿನ್ನೆಯಷ್ಟೆ ವಿಮಾನ ನಿಲ್ದಾಣಕ್ಕೆ ಲೈಸೆನ್ಸ್​ ಲಭ್ಯವಾಗಿತ್ತು. ಅದರೆ ಬೆನ್ನಲ್ಲೆ ಇವತ್ತು ವಿಶೇಷವಾಗಿ ಇವತ್ತು ವಾಯುಸೇನೆಯ ಮೊದಲ ವಿಮಾನ, ಕುವೆಂಪು ವಿಮಾನ ನಿಲ್ಧಾಣದಲ್ಲಿ ಬಂದಿಳಿದೆ. 

#SHIVAMOGGAAIRPORT : ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಮೊದಲ ವಿಮಾನ! ವಾಯುಸೇನೆ ವಿಮಾನ ಲ್ಯಾಂಡಿಂಗ್ ವಿಡಿಯೋ

ಶಿವಮೊಗ್ಗಕ್ಕೆ ಬಂದಿಳಿದ ಮೊದಲ ಏರ್​ಕ್ರಾಪ್ಟ್​ ಅದರದ್ದೇ ವಿಶೇಷ ಪದ್ದತಿ ಮೂಲಕ ವಾಟರ್ ಸೆಲ್ಯೂಟ್ ನೀಡಲಾಯ್ತು.  ಮಧ್ಯಾಹ್ನ 2.30 ರ ಹೊತ್ತಿಗೆ ಜೋರು ಶಬ್ದ ಸೋಗಾನೆಯ ಸುತ್ತಮುತ್ತ ಕೇಳುತ್ತಿದ್ದಂತೆ ಜನರು ಫ್ಲೈಟ್ ಬಂತೋ....ಅಂತಾ ಕೂಗುತ್ತಾ ಸಿಕ್ಕಿದ್ದನ್ನೆಲ್ಲಾ ಹತ್ತಿ ಆಕಾಶ ನೋಡುತ್ತಿದ್ದರು. ಘನ ಗಾಂಭೀರ್ಯದ ಹಾರಾಟದೊಂದಿಗೆ ವಿಮಾನವನ್ನು ಸುಸೂತ್ರವಾಗಿ ಲ್ಯಾಂಡ್ ಮಾಡಿದ ಫೈಲಟ್​ಗೆ ಸಂಸದ ಬಿ.ವೈ ರಾಘವೇಂದ್ರ ಹಾಗೂ ಜಿಲ್ಲಾಡಳಿತ ಹೂಗುಚ್ಚ ನೀಡಿಸ್ವಾಗಿಸಿತು. ಈ ಸಂದರ್ಭದಲ್ಲಿ ಶಿವಮೊಗ್ಗಕ್ಕೊಂದು ವಿಮಾನ ನಿಲ್ಧಾಣ ಆಗುತ್ತೆ ಎನ್ನುವ ಕನಸಿನ ವರುಷಗಳು ಅಲ್ಲಿದ್ದವರ ಕಣ್ಮುಂದೆ ಬಂದು ಹೋದವು. 

SHIVAMOGGAAIRPORT : ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಮೊದಲ ವಿಮಾನ! ವಾಯುಸೇನೆ ವಿಮಾನ ಲ್ಯಾಂಡಿಂಗ್ ವಿಡಿಯೋ

ಇನ್ನೂ ಟ್ರಯಲ್​ ರನ್​ನ ಭಾಗವಾಗಿ ವಾಯುಸೇನೆಯ ವಿಮಾನ ಶಿವಮೊಗ್ಗಕ್ಕೆ ಬಂದು ಹೋಗಿದೆ. ಇದು ಸೇನೆಯ ವಾಹನ ಫೆಬ್ರವರಿ 27 ಪ್ರಧಾನಿ ನರೇಂದ್ರ ಮೋದಿ ಕೂಡ ವಾಯುಸೇನೆಯ ವಿಶೇಷ ವಿಮಾನದಲ್ಲಿ ಬಂದಿಳಿಯುತ್ತಾರೆ. ಇವತ್ತು ಬಂದಿದ್ದ ವಾಯುಸೇನೆ ವಿಮಾನ, ಅದರ ಪರೀಕ್ಷಾರ್ಥವಾಗಿ ಹಾರಾಟ ನಡೆಸಿದೆ. ಮುಕ್ಕಾಲು ಗಂಟೆಗಳ ಕಾಲ ನಿಲ್ಧಾಣದಲ್ಲಿ ವಿಮಾನ ಬಳಿಕ, ಅಲ್ಲಿಂದ ಮತ್ತೆ ಟೇಕಾಫ್​ ಆಯ್ತು. ಆ ದೃಶ್ಯ ನೋಡುವುದೇ ಒಂದು ವಿಶೇಷವಾಗಿತ್ತು. ಕೆಲಹೊತ್ತು ಏರ್​ಫೋರ್ಟ್​ನ ಸುತ್ತಮುತ್ತ ಹಾರಾಡಿದ ವಿಮಾನ ಬಳಿಕ ಅಲ್ಲಿಂದ ವಾಪಸ್ ಆಯ್ತು. 

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com

ಟ್ರಯಲ್​ ರನ್ ನ ಭಾಗವಾಗಿ ನಡೆದ ವಿಮಾನ ನಿಲ್ಧಾಣದ ಹಾರಾಟ ಮಲೆನಾಡಿಗರ ಮನಸ್ಸಿಗೊಂದು ಮುಧವಂತು ನೀಡಿದೆ. ಇದೇ ರೀತಿಯಲ್ಲಿ ಪ್ಯಾಸೆಂಜರ್​ ವಿಮಾನಗಳು ಲ್ಯಾಂಡ್ ಆಗಲು ಆರಂಭಿಸಿದರೇ, ಎಲ್ಲಿಂದಾದರೂ ಸರಿಯೇ ನಾನು ಫ್ಲೈಟ್​ ನಲ್ಲಿ ಬಂದಿಳಿತೀನಿ ನೋಡುತ್ತಿರು ಎಂದು ಯಾರಿಗಾದರೂ ಆಶ್ವಾಸನೆ ಕೊಡಬಹುದು,.