ಶಿವಮೊಗ್ಗ ನಗರದಲ್ಲಿ ಬಜರಂಗದಳದ ಶೌರ್ಯ ಸಂಚಲನ

In Shivamogga city, the shourya sanchalana parade,organised by the Bajrang Dal, is going on

ಶಿವಮೊಗ್ಗ ನಗರದಲ್ಲಿ ಬಜರಂಗದಳ ಆಯೋಜಿಸಿರುವ ಶೌರ್ಯ ಸಂಚಲನ ಕಾರ್ಯಕ್ರಮ ಆರಂಭವಾಗಿದೆ. ವಿಶ್ವ ಹಿಂದೂ ಪರಿಷತ್ ಅಂಗಸಂಸ್ಥೆ ಬಜರಂಗಳ ಹಮ್ಮಿಕೊಂಡಿರುವ ಈ ಕಾರ್ಯಕ್ರಮದ ಅಂಗವಾಗಿ ನಗರದ ಫ್ರೀಢಂ ಪಾರ್ಕ್ ನಿಂದ ಹೊರಟ ಶೌರ್ಯ ಸಂಚಲನ ಯಾತ್ರೆ ಹೊರಟಿದೆ

ಶಿವಮೊಗ್ಗದಲ್ಲಿ ಶಾರ್ಟ್​ ಸರ್ಕ್ಯೂಟ್ ಅವಘಡ/ಮಗನನ್ನ ಉಳಿಸಿ, ಪ್ರಾಣ ಬಿಟ್ಟ ತಂದೆ/ ಜೀವ ತೆಗೆದ ಹೊಗೆ/ ವಿಡಿಯೋ ವರದಿ

 ನಗರದ ದುರ್ಗಿಗುಡಿ, ನೆಹರೂ ರಸ್ತೆ, ಶಿವಪ್ಪನಾಯಕ ಸರ್ಕಲ್, ರಾಮಣ್ಣ ಶ್ರೇಷ್ಟಿ ಪಾರ್ಕ್ ಮಾರ್ಗವಾಗಿ ಕೋಟೆ ಆಂಜನೇಯ ಸ್ವಾಮಿ ದೇಗುಲದವರಗೆ  ಪಥ ಸಂಚಲನ ಸಾಗಲಿದೆ. ಈ ಪಥ ಸಂಚಲನದಲ್ಲಿ ಸುಮಾರು 1 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಭಾಗಿಯಾಗಿದ್ದಾರೆ. 

BREAKING NEWS/ ಶಿವಮೊಗ್ಗದ ಭೂಪಾಳಂ ರವರ ಮನೆಯಲ್ಲಿ ಶಾರ್ಟ್​ ಸರ್ಕಿಟ್​-ಬೆಂಕಿ/ ಶರತ್​ ಸಾವು, ಮಗು ಸ್ಥಿತಿ ಗಂಭೀರ

ಲವ್ ಜಿಹಾದ್, ಮತಾಂತರ, ಗೋ ಹತ್ಯೆ, ಭಯೋತ್ಪಾದನಾ ವಿರುದ್ಧ ಜನತೆಗೆ ಎಚ್ಚರಿಸುವ ಉದ್ದೇಶವನ್ನು ಈ ಪಥಸಂಚಲನ ಹೊಂದಿದೆ. ಇನ್ನೂ ಪಥಸಂಚಲನದಲ್ಲಿ ಬಜರಂಗದಳ ಮತ್ತು ವಿ.ಹೆಚ್.ಪಿ. ಹಾಗೂ ಹಿಂದೂಪರ ಸಂಘಟನೆಗಳ ಪ್ರಮುಖರು ಭಾಗಿಯಾಗಿದ್ಧಾರೆ. ಪಥಸಂಚಲನದ ಬಳಿಕ ವಾಸವಿ ಶಾಲಾ ಆವರಣದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದೆ. 

ಇನ್ನೂ ಪಥಸಂಚಲನ ಹಿನ್ನೆಲೆಯಲ್ಲಿ ಅಮೀರ್ ಅಹಮದ್ ಸರ್ಕಲ್​ನಲ್ಲಿ ಮದ್ಯದಲ್ಲಿನ ಸರ್ಕಲ್​ಗೆ ಸರಿಯಾಗಿ ಬ್ಯಾರಿಕೇಡ್​ಗಳನ್ನಿಟ್ಟು ತಡೆ ಮಾಡಲಾಗಿದೆ ಮೇಲಾಗಿ ಹೆಚ್ಚುವರಿ ಪೊಲೀಸ್ ತುಕಡಿಗಳನ್ನು ಇಲ್ಲಿಯೆ ನಿಯೋಜಿಸಲಾಗಿದೆ.ಇನ್ನೂ ಪಥಸಂಚಲನದಲ್ಲಿ  ಹಿಂದೂ ಕಾರ್ಯಕರ್ತರು ವೀರ ಸಾವರ್ಕರ್ ಹಾಗೂ ಹಿಂದೂ ಹರ್ಷನ ಪರವಾಗಿ ಘೋಷಣೆಗಳನ್ನು ಕೂಗಿದರು. 

 ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com