ಸಾಗರ ಗ್ರಾಮಾಂತರದಲ್ಲಿ ಮತ್ತೊಂದು ದರೋಡೆ ಕೇಸ್! ಅಡಕೆ ಸಸಿ ಕೇಳಿ, ಮನೆಯಲ್ಲಿದ್ದ ಮಹಿಳೆಯ ಚಿನ್ನ-ದುಡ್ಡು ಕಿತ್ತುಕೊಂಡು ಹೋದ ದುಷ್ಕರ್ಮಿಗಳು!

A resident of a lonely house in rural Sagar taluka was robbed by bike-borne miscreants ಸಾಗರ ತಾಲ್ಲೂಕಿನ ಗ್ರಾಮಾಂತರ ಭಾಗದಲ್ಲಿರುವ ಒಂಟಿ ಮನೆಯ ನಿವಾಸಿಯೊಬ್ಬರನ್ನ ಬೈಕ್​ನಲ್ಲಿ ಬಂದಿದ್ದ ದುಷ್ಕರ್ಮಿಗಳು ದರೋಡೆ ಮಾಡಿದ್ಧಾರೆ

ಸಾಗರ ಗ್ರಾಮಾಂತರದಲ್ಲಿ ಮತ್ತೊಂದು ದರೋಡೆ ಕೇಸ್!  ಅಡಕೆ ಸಸಿ ಕೇಳಿ,  ಮನೆಯಲ್ಲಿದ್ದ ಮಹಿಳೆಯ  ಚಿನ್ನ-ದುಡ್ಡು ಕಿತ್ತುಕೊಂಡು ಹೋದ ದುಷ್ಕರ್ಮಿಗಳು!

KARNATAKA NEWS/ ONLINE / Malenadu today/ Jul 28, 2023 SHIVAMOGGA NEWS
ಅಡಕೆ ಸಸಿ ಕೊಳ್ಳುವ ನೆಪದಲ್ಲಿ ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು (sagara taluk) ತಾಲೂಕಿನ ಹೊಸಗುಂದ ಗ್ರಾಮದlಲ್ಲಿ ದರೋಡೆ ಮಾಡಲಾಗಿದೆ. ಇಲ್ಲಿನ ಒಂಟಿ ಮನೆಯೊಂದರ ನಿವಾಸಿ  ಭದ್ರಮ್ಮರವರಿಂದ  ನಗನಾಣ್ಯ ದೋಚಲಾಗಿದ್ದು, ಘಟನೆ ತಡವಾಗಿ ಹೊರಬಿದ್ದಿದೆ.  

ಬೈಕ್‌ನಲ್ಲಿ ಬಂದ ನಾಲ್ವರು ಅಪರಿಚಿತರು ಅಡಕೆ ಸಸಿ ಬೇಕೆಂದು  ಭದ್ರಮ್ಮರನ್ನ ವಿಚಾರಿಸಿದ್ಧಾರೆ. ಆನಂತರ ಏಕಾಯೇಕಿ ಅವರನ್ನ ಮನೆಯೊಳಗೆ ತಳ್ಳಿ ಅವರಿಂದ ಬೀರುವಿನ ಬೀಗದ ಕೈ ಕಿತ್ತುಕೊಂಡಿದ್ದಾರೆ. ತದನಂತರ ಭದ್ರಮ್ಮರ ಕುತ್ತಿಗೆಯಲ್ಲಿದ್ದ ಚೈನ್, ಕಿವಿಯೋಲೆ ಸೇರಿ 40 ಗ್ರಾಂ ಬಂಗಾರ ಹಾಗೂ ಬೀರುವಿನಲ್ಲಿದ್ದ 60 ಸಾವಿರ ರೂಪಾಯಿ ನಗದು ದೋಚಿ ಪರಾರಿಯಾಗಿದ್ದಾರೆ. ಸ್ಥಳಕ್ಕೆ ಆಗಮಿಸಿದ್ದ ಆನಂದಪುರ ಠಾಣೆಯ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ಧಾರೆ. 

ಸಾಗರ ತಾಲ್ಲೂಕು ಗ್ರಾಮಾಂತರ ಭಾಗದಲ್ಲಿ ಆಗಾಗ ಇಂತಹ ದರೋಡೆ ಪ್ರಕರಣಗಳು ದಾಖಲಾಗುತ್ತಿರುತ್ತಿದೆ. ಕೆಲ ತಿಂಗಳ ಹಿಂದಷ್ಟೆ ಸಾಗರ ಗ್ರಾಮಾಂತರ ಭಾಗದಲ್ಲಿಯೇ ಅರ್ಚಕರೊಬ್ಬರ ಮನೆಗೆ ನುಗ್ಗಿ ಹಣ ದೋಚಿದ ಪ್ರಕರಣ ದಾಖಲಾಗಿತ್ತು. ಒಂಟಿ ಮನೆಗಳನ್ನು ಟಾರ್ಗೆಟ್ ಮಾಡಿ ಹಣ ಆಭರಣ ದೋಚುತ್ತಿರುವ ಆರೋಪಿಗಳನ್ನ ಪೊಲೀಸರು ಅಷ್ಟೆ ಕ್ಷಿಪ್ರವಾಗಿ ಬಂಧಿಸುತ್ತಾರಾ ಎಂಬುದು ಇನ್ನಷ್ಟೆ ಗೊತ್ತಾಗಬೇಕಿದೆ. 


ಶಿವಮೊಗ್ಗದಿಂದ ಗೋವಾ, ಹೈದ್ರಾಬಾದ್ , ತಿರುಪತಿಗೂ ಪ್ಲೈಟ್! ವಿಮಾನ ಹಾರಿಸಲು ಶೀಘ್ರದಲ್ಲಿಯೇ ಮೂರು ಸಂಸ್ಥೆಗಳಿಗೆ ಪರ್ಮಿಟ್​!? ಬುಕ್ಕಿಂಗ್​ಗೆ ಬಲೇ ಡಿಮ್ಯಾಂಡ್!

ಬೆಂಗಳೂರು: ಶಿವಮೊಗ್ಗದಿಂದ ತಿರುಪತಿ, ಗೋವಾ ಹಾಗೂ ಹೈದರಾಬಾದ್‌ಗೆ ವಿಮಾನಯಾನ ಸೇವೆ ಶೀಘ್ರ ಆರಂಭವಾಗಲಿದೆ. ಈ ಸಂಬಂಧ ಮೂರು ಸಂಸ್ಥೆಗಳಿಗೆ ಅನುಮತಿ ದೊರೆತಿದೆ ಎಂದು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ್​  (MB Patil)ಹೇಳಿದ್ದಾರೆ. 

ನಿನ್ನೆ ವಿಧಾನಸೌಧದಲ್ಲಿ  ಮಾತನಾಡಿದ ಅವರು,  ಆಗಸ್ಟ್‌ 31ರಂದು ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಮೊದಲ ವಿಮಾನ ಹಾರಾಟ ನಡೆಸಲಿದೆ. ಇಂಡಿಗೊ‌ ಏರ್‌ಲೈನ್ಸ್‌ ಬುಕ್ಕಿಂಗ್‌ ಸೇವೆ ಆರಂಭಿಸಿದೆ. ಮೊದಲು ಹಾರಲಿರುವ ವಿಮಾನದಲ್ಲಿ ಪ್ರಯಾಣಿಸುವ ಅವಕಾಶಕ್ಕೆ ಸಾಕಷ್ಟು ಬೇಡಿಕೆ ಬಂದಿದೆ. ಉಡಾನ್ ಯೋಜನೆಯಡಿ ಅನುಮತಿ ಪಡೆದಿರುವ ಸ್ಪೈಸ್‌ ಜೆಟ್‌, ಸ್ಟಾರ್‌ ಏರ್‌ಲೈನ್ಸ್‌ ಹಾಗೂ ಅಲಯನ್ಸ್‌ ಸಂಸ್ಥೆಗಳು ವಿಮಾನ ಸಂಚಾರಕ್ಕೆ ಸಿದ್ಧತೆ ನಡೆಸಿವ ಎಂದು ತಿಳಿಸಿದ್ದಾರೆ. ಈ ಸಂಬಂಧ ನಾಗರಿಕ ವಿಮಾನಯಾನ ನಿರ್ದೇಶನಾಲಯದ ಅನುಮತಿ ದೊರೆತ ನಂತರ ಸೇವೆ ಆರಂಭಿಸಲಿವೆ ಎಂದು ಮಾಹಿತಿ ನೀಡಿದರು.


ಕಾಡು ದಾರಿಯಲ್ಲಿ ಅಡ್ಡ ಸಿಕ್ಕ ಹುಲಿರಾಯ! ಮಳೆ ನೀರು ಕುಡಿವ ವ್ಯಾಘ್ರ ರೂಪ ಇದೀಗ ವೈರಲ್​

ಶರಾವತಿ ಸಂತ್ರಸ್ತರ ಮಾಹಿತಿ ಪಡೆದ ಸಿಎಂ ಸಿದ್ದರಾಮಯ್ಯ! ಜಿಲ್ಲಾಡಳಿತಕ್ಕೆ ಆರು ಮಹತ್ವದ ಸೂಚನೆ !

ವಿಮಾನ ಹಾರಾಟಕ್ಕೆ ಟಿಕೆಟ್ ಬುಕ್ಕಿಂಗ್ ಆರಂಭ! ರೇಟು ಎಷ್ಟು? ಏನಿದು ಸೌಲಭ್ಯ? ಟೈಮಿಂಗ್ಸ್ ಏನು? ಫುಲ್ ಡಿಟೇಲ್ಸ್ ಇಲ್ಲಿದೆ

.  



 ​