ಪ್ರೀತಿಗೆ ಇರಿದ ಪ್ರಿಯಕರ! ಮೆಡಿಕಲ್​ ಶಾಪ್​ನಲ್ಲಿ ನಡೀತು ಲವ್ ವಾರ್!

A youth allegedly tried to stab a woman with a knife at a medical shop in Haveri's Shiggavi police station limits

ಪ್ರೀತಿಗೆ ಇರಿದ ಪ್ರಿಯಕರ! ಮೆಡಿಕಲ್​ ಶಾಪ್​ನಲ್ಲಿ ನಡೀತು ಲವ್ ವಾರ್!
A youth allegedly tried to stab a woman with a knife at a medical shop in Haveri's Shiggavi police station limits

SHIVAMOGGA  |  Jan 27, 2024  | Haveri Shiggavi police station limits ನೆರೆಯ ಹಾವೇರಿ ಜಿಲ್ಲೆ ಶಿಗ್ಗಾಂವಿಯಿಂದ ಪ್ರೀತಿ ಪ್ರೇಮದ ಗಲಾಟೆಯ ಬಗ್ಗೆ ವರದಿಯೊಂದು ಮಲೆನಾಡು ಟುಡೆಗೆ ಬಂದಿದೆ. ಯುವಕನೊಬ್ಬ ತಾನು ಪ್ರೀತಿಸ್ತಿದ್ದ ಯುವತಿಗೆ ಚಾಕುವಿನಿಂದ ಇರಿಯಲು ಪ್ರಯತ್ನಿಸಿದ ಘಟನೆ ನಡೆದಿದೆ. ಈ ಗಲಾಟೆಯಲ್ಲಿ ಯುವಕ ಹಾಗೂ ಯುವತಿಗೂ ಗಾಯಗಳಾಗಿದ್ದು ಇಬ್ಬರನ್ನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. 

Haveri Shiggavi police station limits

ಪ್ರೀತಿಸ್ತಿದ್ದ ಯುವತಿಯ ಬಗ್ಗೆ ಅನುಮಾನಗೊಂಡಿದ್ದ ಯುವಕನೊಬ್ಬ, ಆಕೆ ಕೆಲಸ ಮಾಡುತ್ತಿದ್ದ ಮೆಡಿಕಲ್ ಶಾಪ್​ಗೆ ಬಂದು ಚಾಕುವಿನಿಂದ ಇರಿಯಲು ಯತ್ನಿಸಿದ್ದಾರೆ. ಈ ವೇಳೆ ಅಲ್ಲಿದ್ದವರು ಆತನನ್ನು ತಡೆದಿದ್ದಾರೆ. ಇನ್ನೂ ಘಟನೆ ಸಂಬಂಧ ಪೊಲೀಸರು ಆರೋಪಿಯನ್ನ ವಶಕ್ಕೆ ಪಡೆದಿದ್ದು, ಪ್ರಕರಣ ದಾಖಲಿಸಿದ್ದಾರೆ. 

ಶಿಗ್ಗಾಂವಿ ಪೊಲೀಸ್ ಸ್ಟೇಷನ್​ ಲಿಮಿಟ್ಸ್​ನಲ್ಲಿ ಈ ಘಟನೆ ನಡೆದಿದೆ. ಇಲ್ಲಿನ ಪ್ರೀತಿ (ಹೆಸರು ಬದಲಾಯಿಸಲಾಗಿದೆ) ಮೆಡಿಕಲ್ ಶಾಪ್ ಒಂದರಲ್ಲಿ ಕೆಲಸ ಮಾಡುತ್ತಾರೆ. 20 ವರ್ಷದ ಇವರನ್ನ 25 ವರ್ಷದ ಪ್ರಿಯಕರ (ಹೆಸರು ಬದಲಾಯಿಸಲಾಗಿದೆ ) ಪ್ರೀತಿಸುತ್ತಿದ್ದ . 2 ವರ್ಷದಿಂದ ಪ್ರೀತಿ ಸುಗಮವಾಗಿತ್ತು. ಈ ಮಧ್ಯೆ ಅನುಮಾನದ ಗಾಳಿ ಬೀಸಿದೆ. ಪ್ರೀತಿ ಇನ್ನೊಬ್ಬರ ಪ್ರೇಮದ ಸಂಪರ್ಕದಲ್ಲಿದ್ದಾಳೆ ಎಂಬ ಅನುಮಾನ ಪ್ರಿಯಕರನಿಗೆ ಬಂದಿತ್ತು. ಇದೇ ಕಾರಣಕ್ಕೆ ಈ ಕೃತ್ಯ ಎಸೆಗಿದ್ದಾನೆ ಎನ್ನಲಾಗುತ್ತಿದೆ. ಸದ್ಯ ಪೊಲೀಸರು ತನಿಖೆ ನಡೆಸ್ತಿದ್ದಾರೆ