ಶಿವಮೊಗ್ಗ ವಿಮಾನ ನಿಲ್ದಾಣ | ಸದ್ಯದಲ್ಲಿಯೇ ಹೊರಬೀಳಲಿದೆ ಮತ್ತೊಂದು ಗುಡ್​ ನ್ಯೂಸ್!

Work is going on regarding night landing at Shimoga airport ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ನೈಟ್​ ಲ್ಯಾಂಡಿಂಗ್​ಗೆ ಸಂಬಂಧಿಸಿದಂತೆ ಕಾಮಗಾರಿ ನಡೆಯುತ್ತಿದೆ

ಶಿವಮೊಗ್ಗ ವಿಮಾನ ನಿಲ್ದಾಣ |   ಸದ್ಯದಲ್ಲಿಯೇ ಹೊರಬೀಳಲಿದೆ ಮತ್ತೊಂದು ಗುಡ್​ ನ್ಯೂಸ್!

KARNATAKA NEWS/ ONLINE / Malenadu today/ Oct 23, 2023 SHIVAMOGGA NEWS

ಶಿವಮೊಗ್ಗ ಏರ್​ಪೋರ್ಟ್​ Shivamogga airport   ನಲ್ಲಿ ಈಗಾಗಲೇ ಬೆಂಗಳೂರು ಹೊರತು ಪಡಿಸಿ , ಹೈದ್ರಾಬಾದ್, ತಿರುಪತಿ, ಗೋವಾಗಳಿಗೆ ಸ್ಟಾರ್​ ಏರ್​ಲೈನ್ಸ್​ ವಿಮಾನ ಸಂಚಾರ ಆರಂಭಿಸುವ ಬಗ್ಗೆ ಸುದ್ದಿ ಹೊರಬಿದ್ದಿದೆ. ಇದರ ನಡುವೆ  ಶೀಘ್ರದಲ್ಲಿಯೇ ಶಿವಮೊಗ್ಗ ವಿಮಾನ ನಿಲ್ದಾಣದಿಂದ ರಾತ್ರಿ ವೇಳೆಯಲ್ಲಿಯೂ ವಿಮಾನ ಹಾರಾಟ ನಡೆಸಲಿವೆ ಎಂಬ ವರದಿಯೊಂದು ಲಭ್ಯವಾಗಿದೆ. ಇದಕ್ಕಾಗಿ ಪ್ರಯತ್ನಗಳು ನಡೆಯುತ್ತಿದ್ದು, ಅಂದುಕೊಂಡಂತೆ ನಡೆದ ಶೀಘ್ರವೇ ನೈಟ್​ ಹೊತ್ತು ವಿಮಾನಗಳು ಲ್ಯಾಂಡ್​ ಆಗಲಿವೆ. 

ನೈಟ್‌ ಲ್ಯಾಂಡಿಂಗ್‌ಗೆ ಎರಡನೇ ಹಂತದ ಒಪ್ಪಿಗೆಯೂ ಸಿಕ್ಕಿದೆ ಎನ್ನಲಾಗಿದ್ದು,  ಇನ್ನೊಂದು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆಯಂತೆ. ಅಗತ್ಯ ಪರವಾನಗಿಗೆ ಸ್ವಲ್ಪ ವಿಳಂಬವಾಗಿದ್ದು, ಸದ್ಯ ಎರಡನೇ ಹಂತದ ಒಪ್ಪಿಗೆ ಸಿಕ್ಕಿದ್ದು, ಉಳಿದ ಅನುಮತಿಗೆ ಪೂರಕವಾಗಿ ಕಾಮಗಾರಿಗಳು ನಡೆಯುತ್ತಿವೆ. ಈ ಕಾಮಗಾರಿಗಳು , ಡಿಸೆಂಬರ್‌ ವೇಳೆಗೆ  ಪೂರ್ಣಗೊಳ್ಳಲಿದೆ ಎಂದು ತಿಳಿದು ಬಂದಿದೆ. 

ನವೆಂಬರ್‌ 25 ರಿಂದ ಹೈದರಾಬಾದ್‌, ಗೋವಾ, ತಿರುಪತಿಗೆ ವಿಮಾನ ಸಂಚಾರ ಆರಂಭವಾಗಲಿದೆ.ಇನ್ನೂ   ಶಿವಮೊಗ್ಗದಿಂದ ಕೊಲ್ಕತ್ತಾ, ದಿಲ್ಲಿ, ಮುಂಬಯಿಗೆ ವಿಮಾನ ಸೇವೆ ನೀಡುವಂತೆ ಕೋರಿದ್ದು, ಅವುಗಳು ಆರಂಭವಾಗುವ ನಿರೀಕ್ಷೆಯಿದೆ. 

ಮಲೆನಾಡಿಗರಿಗೆ ಗುಡ್ ನ್ಯೂಸ್ | ಬೇಲಿ, ದಾರಿ ಸಮಸ್ಯೆಗೆ ಹೊರಬಿತ್ತು ಸುತ್ತೋಲೆ?| ಹಾದಿ ಜಗಳ ಇತ್ಯರ್ಥಕ್ಕೆ ಸುತ್ತೋಲೆ? ಏನಿದು



 


ಇನ್ನಷ್ಟು ಸುದ್ದಿಗಳು 

ದುರ್ಗಾಷ್ಟಮಿಯ ದಿನದಂತೆ 3 ಕಡೆಗಳಲ್ಲಿ ಕಳ್ಳತನ | ಎರಡು ದೇಗುಲದ ಭೀಗ ಮುಗಿದ ಕಳ್ಳರು

ರಾಗಿಗುಡ್ಡ ಕೇಸ್​ |DYSP ಯಿಂದಲೇ ದೂರು | ದಾಖಲಾಯ್ತು 150 ಮಂದಿ ವಿರುದ್ಧ ಕೇಸ್​ !

ಭದ್ರಾವತಿ ಕೇಸ್ | ಕೊಲೆಯಾದ ಟಿಪ್ಪು ನಗರ ನಿವಾಸಿ ಬಗ್ಗೆ SP ಮಿಥುನ್ ಕುಮಾರ್ ಹೇಳಿದ್ದೇನು?