112 ಎದುರೇ ನಡೆಯಿತು ಕೊಲೆ! ಗಾಯಗೊಂಡವನನ್ನ ಆಸ್ಪತ್ರೆಗೆ ಸೇರಿಸಲು ಸಹಾಯ ಮಾಡಲಿಲ್ಲವಾ ಪೊಲೀಸರು?

The murder took place in front of 112 police personnel. Didn't the police help in getting the injured to the hospital? The night beat needs armed personnel!

112 ಎದುರೇ ನಡೆಯಿತು ಕೊಲೆ!  ಗಾಯಗೊಂಡವನನ್ನ ಆಸ್ಪತ್ರೆಗೆ ಸೇರಿಸಲು ಸಹಾಯ ಮಾಡಲಿಲ್ಲವಾ ಪೊಲೀಸರು?

KARNATAKA NEWS/ ONLINE / Malenadu today/ Jun 5, 2023 SHIVAMOGGA NEWS

ಆಯನೂರು ಬಳಿಯಲ್ಲಿರುವ ನವರತ್ನ ಬಾರ್​ನಲ್ಲಿ ನಿನ್ನೆ ರಾತ್ರಿ ನಡೆದ ಕೊಲೆ ನಿಜಕ್ಕೂ ಆತಂಕ ಹುಟ್ಟಿಸುತ್ತಿದೆ. ರಕ್ಷಣೆಗಾಗಿ ಪೊಲೀಸರನ್ನ ಕರೆಸಿಕೊಂಡಿದ್ದರು. ಅವರ ಎದುರೇ ಹತ್ಯೆ ನಡೆದು ಹೋಗಿದೆ. ರಾತ್ರಿ 11.30 ಕ್ಕೆ ಬಾರ್​ ಮುಚ್ಚುವ ಹೊತ್ತಾದರೂ, ಇನ್ನೂ ಕುಡಿಯುತ್ತಾ ಕುಳಿತಿದ್ದವರನ್ನ ಎದ್ದೋಗಿ ಎಂದಿದ್ದಕ್ಕೆ ಕಿರಿಕ್ ಆರಂಭವಾಗಿದ್ದು, ಆನಂತರ ಗಲಾಟೆಯಾಗುತ್ತಿದೆ ಎಂಬ ಕಾರಣಕ್ಕೆ ಬಾರ್ ಸಿಬ್ಬಂದಿ 112 ಸಿಬ್ಬಂದಿಗೆ ಫೋನ್ ಮಾಡಿ ಕರೆಸಿದ್ದಾರೆ. ಸ್ಥಳಕ್ಕೆ ಬಂದ 112 ಸಿಬ್ಬಂದಿ ತಕ್ಷಣವೇ ಅಲ್ಲಿ ಕಿರಿಕ್ ಮಾಡ್ತಿದ್ದವರನ್ನ ವಶಕ್ಕೆ ತೆಗೆದುಕೊಳ್ಳುವ ಪ್ರಯತ್ನವನ್ನು ಮಾಡಿದ್ದಾರೆ. ಈ ವೇಳೆಯಲ್ಲಿಯೇ ಬಿಯರ್ ಬಾಟಲಿಯಲ್ಲಿ ಸಿಬ್ಬಂದಿ ಮೇಲೆ ಹಲ್ಲೆ ಮಾಡಲು ಮುಂದಾದ ಆರೋಪಿಗಳು, ಸಚಿನ್​ಗೆ  ಚಾಕುವಿನಿಂದ ಚುಚ್ಚಿದ್ದಾರೆ. 

ಶಿವಮೊಗ್ಗದಲ್ಲಿ ಗರಿಗೆದರಿದ ಕರ್ನಾಟಕ ರಾಷ್ಟ್ರ ಸಮಿತಿ ಚಟುವಟಿಕೆ !

ಮಾರಕಾಸ್ತ್ರದೊಂದಿಗೆ ಬಂದಿದ್ದ ಆರೋಪಿಗಳು

ನಿನ್ನೆ ರಾತ್ರಿ ನಡೆದ ಘಟನೆಯಲ್ಲಿ ನಿರಂಜನ, ಸತೀಶ ಹಾಗೂ ಅಶೋಕ್​ ಎಂಬವರು ಕುಡಿಯಲು ಬಾರ್​ಗೆ ಆಗಮಿಸಿದ್ಧಾರೆ. ಈ ಹೊತ್ತಿಗೆ ನಿರಂಜನ್​ ತನ್ನ ಸೊಂಟದಲ್ಲಿ ಚಾಕು ಇಟ್ಟುಕೊಂಡಿದ್ದ. ಇನ್ನೂ 112 ಸಿಬ್ಬಂದಿ ಜಗಳ ಬಿಡಿಸಲು ಪ್ರಯತ್ನಿಸಿದ್ದರಾದರೂ, ಅವರು ಶಸ್ತ್ರ ಸಜ್ಜಿತರಾಗಿ ಬಂದಿರಲಿಲ್ಲ. ಇದು ಕೂಡ ಸಮರ್ಪಕವಾಗಿ ಗಲಾಟೆ ಬಿಡಿಸಿ,  ಹತ್ಯೆ ಘಟನೆಯೊಂದನ್ನ ಅವರಿಂದ ತಪ್ಪಿಸಲು ಸಾಧ್ಯವಾಗದೇ ಇರುವುದಕ್ಕೆ ಕಾರಣವಾಗಿರುವ ಸಾಧ್ಯತೆ ಇದೆ. 

ಸ್ಥಳದಲ್ಲಿ ತೆರಳಿದ ಪೊಲೀಸ್ ಸಿಬ್ಬಂದಿ

ನಿನ್ನೆ ನಡೆದ ಘಟನೆಯಲ್ಲಿ 112 ಗೆ ಕರೆ ಮಾಡಿದ ಬೆನ್ನಲ್ಲೆ ಇಬ್ಬರು ಪೊಲೀಸರು ಸ್ಥಳಕ್ಕೆ ಬಂದಿದ್ದಾರೆ. ಅವರ ಎದುರಲ್ಲಿಯೇ ಆರೋಪಿ ಸಚಿನ್​ಗೆ ಚಾಕುವಿನಿಂದ ಚುಚ್ಚಿದ್ಧಾನೆ. ಇನ್ನೊಬ್ಬ ಬಾರ್ ಸಿಬ್ಬಂದಿ ಹೆದರಿ ಸಚಿನ್​ನನ್ನ ಎಳೆದುಕೊಂಡು ಬಾರ್​ನ ಶೆಟರ್​ ಎಳೆದುಕೊಂಡಿದ್ದಾನೆ. ಆದರೆ ಇಷ್ಟೊತ್ತಿಗೆ ಅಲ್ಲಿದ್ದ 112 ಸಿಬ್ಬಂದಿ ವಾಹನ ತಿರುಗಿಸಿಕೊಂಡು ಹೋಗಿದ್ದಾರೆ. ಆರೋಪಿಗಳು ಅಲ್ಲಿಂದ ಓಡಿದ್ದಾರೆ. ಕೊನೆಗೆ ಬಾರ್ ಸಿಬ್ಬಂದಿಯೇ ಸಚಿನ್​ನನ್ನ ಸಿಕ್ಕಿದ ವಾಹನದಲ್ಲಿ ಕರೆದುಕೊಂಡು ಆಸ್ಪತ್ರೆಗೆ ಓಡಾಡಿದ್ಧಾರೆ. 

ಗಾಂಜಾ ಘಮಲು

ಇನ್ನೂ ಘಟನೆ ನಡೆದ ಸ್ಥಳದಲ್ಲಿದ್ದವರು ಹೇಳುವ ಪ್ರಕಾರ, ನಿನ್ನೆ ಬಾರ್ ಗೆ ಬರುವಾಗಲೇ ಆರೋಪಿಗಳು ಗಾಂಜಾ ಹೊಡೆದಿದ್ದರಂತೆ. ಬರುವಾಗಲೇ ತೂರಾಡಿಕೊಂಡು ಬಂದಿದ್ದವರ ಬಳಿ ಹೋದರೂ ಕೆಟ್ಟ ವಾಸನೆ ಬರುತ್ತಿತ್ತು ಎನ್ನುತ್ತಾರೆ ಸಿಬ್ಬಂದಿ. ಇಷ್ಟೆ ಅಲ್ಲದೆ, ಬಾರ್​ನಲ್ಲಿ ಕುಳಿತು ಎರಡು ಕ್ವಾರ್ಟರ್ ಎಣ್ಣೆ ಹೊಡೆದು ಆನಂತರ ಕಿರಿಕ್ ಮಾಡಿದ್ಧಾರೆ. 

ಹಳೇ ಕಿರಿಕ್​! ಆಯನೂರಿನಲ್ಲಿ ನಿನ್ನೆ ರಾತ್ರಿ, ಬಾರ್ ಕ್ಯಾಶಿಯರ್​ಗೆ ಚುಚ್ಚಿ​ ಕೊಲೆ! ಪೊಲೀಸರೇ ಸಾಕ್ಷಿಯಾದರಾ ಭೀಕರ ಘಟನೆಗೆ?

ಹಳೆಯ ವೈಷಮ್ಯ!

ಆರೋಪಿತರು8-10 ದಿನಗಳ ಹಿಂದೆ, ನವರತ್ನ ಬಾರ್​ನಿಂದಲೇ ಮದ್ಯದ ಪೌಚುಗಳನ್ನ ತೆಗೆದುಕೊಂಡು ಹೋಗಿದ್ದರಂತೆ. ಆದರೆ ಅದರ ಹಣ ಕೊಟ್ಟಿರಲಿಲ್ಲ ಎಂಬುದು ಆರೋಪ. ಬಾರ್​ ಗೆ ಆರೋಪಿಗಳು ಬಂದ ಸಂದರ್ಭದಲ್ಲಿ ಹಣ ಕೇಳಿದ್ದಕ್ಕೆ , ಎಲ್ಲರ ಮುಂದೆ ದುಡ್ಡು ಕೇಳ್ತೀಯಾ ನಿಮ್ಮನ್ನ ನೋಡ್ಕೊಳ್ತೀವಿ ಎಂದು ಬೆದರಿಕೆ ಹಾಕಿದ್ದರು ಎಂದು ದೂರಿನಲ್ಲಿ ಹೇಳಲಾಗಿದೆ. ಇದೇ ಕಾರಣಕ್ಕೆ ಉದ್ದೇಶಪೂರ್ವಕವಾಗಿ ಗಲಾಟೆ ತೆಗೆದು ಕೃತ್ಯವೆಸಗಿದರಾ ಎಂಬುದು ತನಿಖೆಯಿಂದ ತಿಳಿದು ಬರಬೇಕಾಗಿದೆ. 

ಲಾರಿಗೆ ಕಾರು ಡಿಕ್ಕಿ! ಭೀಕರ ಅಪಘಾತದಲ್ಲಿ ಸಾವನ್ನಪ್ಪಿದ ನಾಲ್ವರು ಯುವಕರ ಪೈಕಿ ಓರ್ವ ಶಿವಮೊಗ್ಗದವನು!

ಸೊರಬ ಮೂಲದ ಸಚಿನ್​

27 ವರ್ಷದ ಸಚಿನ್​ ಎಂಬಾತ ಘಟನೆಯಲ್ಲಿ ಸಾವನ್ನಪ್ಪಿದ್ದು, ಆತನಿಗೆ ಮೂರು ನಾಲ್ಕು ಕಡೆಗಳಲ್ಲಿ ಇರಿಯಲಾಗಿದೆ. ಆತ ಮೂಲ ಸೊರಬ ಪಟ್ಟಣದವನಾಗಿದ್ದು, ದುಡಿಮೆಗಾಗಿ ನವರತ್ನ ಬಾರ್​ನಲ್ಲಿ ಕ್ಯಾಶಿಯರ್ ಆಗಿ ಕೆಲಸ ಮಾಡುತ್ತಿದ್ದ. ಕೇವಲ ತನ್ನ ಕೆಲಸ ತಾನು ಮಾಡಿದ್ದಕ್ಕೆ ಆತ ನಿನ್ನೆ ರಾತ್ರಿ ಕೊಲೆಯಾಗಿದ್ಧಾನೆ. 

DJ ಹಾಡಿಗೆ ಕಿರಿಕ್​! ಆರ್ಕೆಸ್ಟ್ರಾ ಮುಗಿಯುತ್ತಲೇ ನಡೀತು ಮರ್ಡರ್​! ಕಬಾಬ್ ಮೂರ್ತಿ ಸೇರಿ ಏಳು ಮಂದಿ ಅರೆಸ್ಟ್!

ನಡೆದ ಘಟನೆ ವಿವರವಾಗಿ

ನಿನ್ನೆ ರಾತ್ರಿ 10 ಗಂಟೆ ಸುಮಾರಿಗೆ ಆಯನೂರು ಕೋಟೆ ತಾಂಡದ ಮೂವರು ಆರೋಪಿಗಳು ಇಲ್ಲಿನ ನವರತ್ನ ಬಾರ್​ನಲ್ಲಿ ಕಂಠ ಪೂರ್ತಿ ಕುಡಿದಿದ್ದಾರೆ. ಆನಂತರ  ಬಾರ್​ ಮುಚ್ಚುವ ಸಮಯವಾಗಿದ್ದರೂ ಅಲ್ಲಿಂದ ಎದ್ದು ಹೋಗಿರಲಿಲ್ಲ. ಇದಕ್ಕೆ ಸಿಬ್ಬಂದಿ ಎದ್ದೋಗಿ ಸಮಯವಾಯ್ತು ಎಂದಿದ್ದಾರೆ. ಈ ವೇಳೆ  ಆರೋಪಿಗಳು ಕಿರಿಕ್ ತೆಗೆದು ಗಲಾಟೆ ಮಾಡಿದ್ಧಾರೆ. ಇದರಿಂದ ಬೆದರಿದ ಸಿಬ್ಬಂದಿ 112 ಗೆ ಕರೆ ಮಾಡಿದ್ದಾರೆ. ತಕ್ಷಣವೇ ಪೊಲೀಸರು ಸಹ ಬಂದಿದ್ಧಾರೆ. ಇದನ್ನ ನೋಡಿದ ಆರೋಪಿಗಳು ಪೊಲೀಸರನ್ನ ಕರೆಸ್ತೀಯಾ ಎಂದು ಸಿಬ್ಬಂದಿಗಳ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದಾರೆ. ಸತೀಶ್ ಎಂಬಾತ ಬಿಯರ್​ ಬಾಟಲಿಯೊಂದನ್ನ ತನ್ನ ತಲೆಗೆ ಮೊದಲು ಹೊಡೆದುಕೊಂಡಿದ್ಧಾನೆ. ಆನಂತರ ಅದನ್ನ ಸಿಬ್ಬಂದಿಯನ್ನ ಗುರಿಮಾಡಿ ಚುಚ್ಚಲು ಮುಂದಾಗಿದ್ಧಾರೆ. ಇದನ್ನ ಪೊಲೀಸರು ತಪ್ಪಿಸಿದ್ದಾರೆ. ಅಷ್ಟರಲ್ಲಿ ನಿರಂಜನ ಎಂಬಾತ, ತನ್ನ ಸೊಂಟದಲ್ಲಿದ್ದ ಚಾಕುವನ್ನ ತೆಗೆದು, ಸಚಿನ್​ನ ಕಾಲರ್ ಹಿಡಿದು ಚುಚ್ಚಿದ್ಧಾನೆ. ಈ ಬಗ್ಗೆ ವಿವರವಾಗಿ ದೂರಿನಲ್ಲಿ ಉಲ್ಲೇಖವಾಗಿದೆ. 

ಮುಪ್ಪಾನೆ ಆಯ್ತು ಈಗ ಹಸಿರುಮಕ್ಕಿ ಸರದಿ! ಲಾಂಚ್​ ಸ್ಥಗಿತ ! ಕೊಲ್ಲೂರು ಮಾರ್ಗ ಬಂದ್!

112 ಗಟ್ಟಿಗೊಳಿಸಬೇಕು

ನಿನ್ನೆ ರಾತ್ರಿ ನಡೆದ ಘಟನೆ ಪೊಲೀಸ್ ಇಲಾಖೆಗೆ ಕೆಟ್ಟ ಹೆಸರು ತಂದುಕೊಡಬಹುದಾದ ಸಾಧ್ಯತೆ ಇದೆ . ಈ ಹಿಂದೆ ಶಿವಮೊಗ್ಗದಲ್ಲಿ ನೈಟ್ ಬೀಟ್ ಪೊಲೀಸರು ಶಸ್ತ್ರಸಜ್ಜಿತವಾಗಿಯೇ ಬೀಟ್​ಗೆ ತೆರಳಬೇಕು ಎಂದು ಸೂಚಿಸಲಾಗಿತ್ತು. ಅದೇ ರೀತಿಯಲ್ಲಿ 112 ಸಿಬ್ಬಂದಿಯು ಸಹ  ಶಸ್ತ್ರಸಜ್ಜಿತವಾಗಿಯೇ ತೆರಳಿದ್ದರೆ, ನಿನ್ನೆ ಘಟನೆಯನ್ನ ತಪ್ಪಿಸಬಹುದಿತ್ತೇನೋ. ಮಾರಕಾಸ್ತ್ರಗಳನ್ನ ಹಿಡಿದು ಕುಡಿದ ಮತ್ತಿನಲ್ಲಿ ಗಲಾಟೆ ಮಾಡುವ ಆರೋಪಿಗಳನ್ನ ಸಂಬಾಳಿಸುವುದು ಸಾಮಾನ್ಯ ಪೊಲೀಸ್ ಸಿಬ್ಬಂದಿಗೂ ಕಷ್ಟವೇ ಸರಿ. ಸಾಹಸ ಮಾಡಲು ಹೋದಲ್ಲಿ ಪೊಲೀಸ್ ಸಿಬ್ಬಂದಿ ಜೀವಕ್ಕೆ ಅಪಾಯ ಎದುರಾಗುವ ಸಾಧ್ಯತೆ ಇರುತ್ತದೆ. 

ಶಿವಮೊಗ್ಗದ ಕ್ರೈಂ ಪೊಲೀಸರಿಗೆ ವಿಶೇಷ ಟ್ರೈನಿಂಗ್! ವಿವರ ಓದಿ

ನಿನ್ನೆ ರಾತ್ರಿ ಗಡಿಯಾರದ ಮುಳ್ಳು ದಿನ ಬದಲಿಸುವ ಹೊತ್ತಿಗೆ ಕೊಲೆಯೊಂದು ನಡೆದು ಹೋಗಿದೆ. ಪೊಲೀಸರೇ ಕೊಲೆ ಘಟನೆಯ ಪ್ರತ್ಯಕ್ಷ ಸಾಕ್ಷಿಗಳಾಗಿದ್ದಾರೆ. ಘಟನೆ ಬೆನ್ನಲ್ಲೆ ಸಚಿನ್​ನನ್ನ ಪೊಲೀಸರೇ ಆಸ್ಪತ್ರೆಗೆ ರವಾನಿಸುವ ಕೆಲಸ ಮಾಡಬಹುದಿತ್ತು. ಏಕಾಗಿ ಮಾಡಲಿಲ್ಲವೋ ಗೊತ್ತಿಲ್ಲ.   ಘಟನೆಯಲ್ಲಿ ಗಾಂಜಾ ಅಮಲು ಕೆಲಸ ಮಾಡಿದೆ ಎಂಬ ಅನುಮಾನ ಬೆಟ್ಟದಷ್ಟಿದೆ. ಬಾರ್​ಗಳ ಮಾಲೀಕರು ಹಾಗೂ ಸಿಬ್ಬಂದಿ ಘಟನೆಯಿಂದ ನಿಜಕ್ಕೂ ಆತಂಕಗೊಂಡಿದ್ದು, ಈ ಬಗ್ಗೆ ತೀವ್ರ ಆಕ್ರೋಶ ಹೊರಹಾಕುತ್ತಿದ್ದಾರೆ. ಇವೆಲ್ಲದರೆ ನಡುವೆ ಇಂತಹ ಕುಕೃತ್ಯಗಳನ್ನ ತಡೆಯಲು ತಳಮಟ್ಟದ ಪೊಲೀಸ್ ಸಿಬ್ಬಂದಿ ಕೂಡ ವಿತ್​ ವೆಪನ್​ ಬೀಟ್​ ಕೈಗೊಳ್ಳುವುದು ಉತ್ತಮವಾಗಿದೆ.