ಶಿವಮೊಗ್ಗದಲ್ಲಿ ನಡೆದ ಬಿಜೆಪಿ ಕಾರ್ಯಕ್ರಮದಲ್ಲಿ ತಮಿಳು ನಾಡಗೀತೆ ಪ್ರಸಾರ! ತಡಿಯಪ್ಪ ಎಂದು ನಿಲ್ಲಿಸಿ ಕನ್ನಡ ನಾಡಗೀತೆ ಹಾಕಿಸಿದ ಈಶ್ವರಪ್ಪ

Tamil national anthem to be played at BJP event in Shimoga Eshwarappa stops Tamil song, sings Kannada national anthem

ಶಿವಮೊಗ್ಗದಲ್ಲಿ ನಡೆದ ಬಿಜೆಪಿ ಕಾರ್ಯಕ್ರಮದಲ್ಲಿ ತಮಿಳು ನಾಡಗೀತೆ ಪ್ರಸಾರ! ತಡಿಯಪ್ಪ ಎಂದು ನಿಲ್ಲಿಸಿ  ಕನ್ನಡ ನಾಡಗೀತೆ ಹಾಕಿಸಿದ ಈಶ್ವರಪ್ಪ

KARNATAKA NEWS/ ONLINE / Malenadu today/ Apr 27, 2023 GOOGLE NEWS


ಶಿವಮೊಗ್ಗ/  ಇಲ್ಲಿ ನಡೆದ ಬಿಜೆಪಿ ಕಾರ್ಯಕ್ರಮದಲ್ಲಿ ತಮಿಳುನಾಡಿನ ನಾಡಗೀತೆಯನ್ನು ಪ್ರಸಾರ ಮಾಡಿದ ಘಟನೆ ಹಾಗೂ ಅದನ್ನ ತಡೆದು ಕನ್ನಡ ನಾಡಗೀತೆಯನ್ನು ಹಾಡುವಂತೆ ಮಾಜಿ ಸಚಿವ ಕೆ.ಎಸ್​.ಈಶ್ವರಪ್ಪ ಹೇಳಿದ ಸನ್ನಿವೇಶ ನಡೆದಿದೆ. 

ಶಿವಮೊಗ್ಗ ನಗರ ಎನ್​ಇಎಸ್ ಮೈದಾನದಲ್ಲಿ ಗುರುವಾರ ಮಧ್ಯಾಹ್ನ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ನೇತೃತ್ವದಲ್ಲಿ ತಮಿಳು ಬಾಂದವರ ಸಮಾವೇಶವನ್ನ ಹಮ್ಮಿಕೊಳ್ಳಲಾಗಿತ್ತು. 

ಈ ವೇಳೆ ಕಾರ್ಯಕ್ರಮವನ್ನು ಆರಂಭಿಸುವುದಕ್ಕೂ ಮೊದಲು ನಾಡಗೀತೆಯನ್ನು ಪ್ರಸಾರ ಮಾಡಲಾಯ್ತು. ಆದರೆ ಪ್ರಸಾರವಾದ ನಾಡಗೀತೆ ತಮಿಳುನಾಡಿನದ್ದಾಗಿತ್ತು. ಹಾಡು ಪ್ರಸಾರವಾಗುತ್ತಲೇ ಎಲ್ಲರೂ ಎದ್ದು ನಿಂತಿದ್ದರು. ಇದು ಅಲ್ಲಿದ್ದವರನ್ನು ಕಸಿವಿಸಿಗೊಳಿಸಿತ್ತು. 



ಇದನ್ನು ಕೂಡ ಓದಿ- ಶಿವಮೊಗ್ಗದಲ್ಲಿ ಬಸ್​ ಹತ್ತಿದ  ಎಸ್​ಪಿ ಮಿಥುನ್​ ಕುಮಾರ್, ಡಿಸಿ ಡಾ.ಆರ್​ ಸೆಲ್ವಮಣಿ! ವಿವರ ಇಲ್ಲಿದೆ 

ಕನ್ನಡ ನಾಡಗೀತೆಯನ್ನು ಪ್ರಸಾರ ಮಾಡಿಸಿದ ಮಾಜಿ ಸಚಿವ

ಸರಿಯಲ್ಲ ಎನ್ನುವುದನ್ನ ಅಲ್ಲೆ ಪ್ರಶ್ನಿಸುತ್ತೇನೆ ಎನ್ನುವ ಮಾಜಿ ಸಚಿವ ಕೆ.ಎಸ್​.ಈಶ್ವರಪ್ಪನವರು ಇವತ್ತು ಕೂಡ ಅದೇ ರೀತಿ ನಡೆದುಕೊಂಡರು. ತಮಿಳು ಹಾಡು ಪ್ರಸಾರವಾಗುತ್ತಲೇ ಅದನ್ನು ಮಧ್ಯದಲ್ಲಿ ತಡೆದ ಮಾಜಿ ಸಚಿವ ಕೆ.ಎಸ್​. ಈಶ್ವರಪ್ಪ ಆಸನದ ಬಳಿಯಿಂದ ಡಯಾಸ್ ನತ್ತ ಬಂದರು. ನಾಡಗೀತೆ ನಿಲ್ಲಿಸುವಂತೆ ಸಂಘಟಕರಿಗೆ ಸೂಚಿಸಿದರು. 



ಓದಿ / ಶಿವಮೊಗ್ಗದಲ್ಲಿ ಬಸ್​ ಹತ್ತಿದ  ಎಸ್​ಪಿ ಮಿಥುನ್​ ಕುಮಾರ್, ಡಿಸಿ ಡಾ.ಆರ್​ ಸೆಲ್ವಮಣಿ! ವಿವರ ಇಲ್ಲಿದೆ 

 

ಯಾರಿಗಾದರೂ ನಾಡಗೀತೆ ಹಾಡಲು ಬರುತ್ತದಾ?

ಅಲ್ಲದೆ ನಾಡಗೀತೆಯನ್ನು ಹಾಡೋದಕ್ಕೆ ಬರುತ್ತದಾ ಎಂದು ಕೇಳಿದರು. ನಾಡಗೀತೆ ಹಾಡಲು ಬರುವವರು ಬನ್ನಿ ಎಂದು ಸಭಿಕರಲ್ಲಿ ಕೇಳಿದರು. ಯಾರಾದರೂ ಹೆಣ್ಣುಮಕ್ಕಳು ಇದ್ದರೇ ಬಂದು ನಾಡಗೀತೆಯನ್ನು ಹಾಡಿ ಎಂದರು. ಅಷ್ಟರಲ್ಲಿ ಅಲ್ಲಿದ್ದ ಸಂಘಟಕರು ಇಲ್ಲಾ ಹಾಡು ಹಾಕ್ತಾರೆ ಎಂದರು. ಇದಕ್ಕೆ ಏನೇನೋ ಹಾಕಿ ಕುಳಿತುಬಿಟ್ಟರೇ ಕಷ್ಟ ಎಂದರು. ಅಷ್ಟರಲ್ಲಿ ಕನ್ನಡ ನಾಡಗೀತೆ ಪ್ರಸಾರವಾಯಿತು. ಸಬಿಕರೆಲ್ಲರೂ ನಿಂತು ನಾಡಗೀತೆಗೆ ಗೌರವವನ್ನು ಸಲ್ಲಿಸಿದರು. 



ಇದನ್ನು ಕೂಡ ಓದಿ- ಶಿವಮೊಗ್ಗದಲ್ಲಿ ಬಸ್​ ಹತ್ತಿದ  ಎಸ್​ಪಿ ಮಿಥುನ್​ ಕುಮಾರ್, ಡಿಸಿ ಡಾ.ಆರ್​ ಸೆಲ್ವಮಣಿ! ವಿವರ ಇಲ್ಲಿದೆ 

ಕಾರ್ಯಕ್ರಮದಲ್ಲಿ ಶಿವಮೊಗ್ಗ ನಗರದ ವಿವಿಧ ತಮಿಳು ಸಂಘಟನೆಗಳ ಮುಖಂಡರು ಹಾಗೂ ತಮಿಳು ಸಮುದಾಯದವರು  ಶಿವಮೊಗ್ಗ ನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ಎನ್. ಚನ್ನಬಸಪ್ಪ (ಚನ್ನಿ)  ಪಾಲ್ಗೊಂಡಿದ್ದರು. 

ತಮಿಳು ನಾಡಗೀತೆಯನ್ನು ಪ್ರಸಾರ ಮಾಡಲು ಕಾರಣವಾಗಿದ್ಧೇನು. ಅಲ್ಲಿ ಅಪಾರ್ಥದಿಂದ ಹಾಡು ಪ್ರಸಾರವಾಯಿತಾ ಅಥವಾ ಅದಕ್ಕೆ ಬೇರೆ ಕಾರಣವಿತ್ತಾ ಎಂಬುದು ಗೊತ್ತಾಗಲಿಲ್ಲ. ಆದರೆ ಈಶ್ವರಪ್ಪನವರು ಮಾತ್ರ, ಕನ್ನಡ ನಾಡಗೀತೆಯನ್ನು ಹಾಡಿಸಿದ್ದು. ಆಗುತ್ತಿದ್ದ ವಿವಾದವನ್ನು ತಪ್ಪಿಸಿದ್ದಷ್ಟೆ ಅಲ್ಲದೆ ಈಶ್ವರಪ್ಪನವರ ಕನ್ನಡಾಭಿಮಾನಕ್ಕೆ ವೇದಿಕೆ ಸಾಕ್ಷಿಯಾಯ್ತು.

Malenadutoday.com Social media