ಕೈ ಹಿಡಿದ ಶ್ರೀಕಾಂತ್ | ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಹಬ್ಬ ಹೇಗಿತ್ತು ನೋಡಿ

M. Srikanth joined the Congress party in Shimoga ಎಂ.ಶ್ರೀಕಾಂತ್ ಶಿವಮೊಗ್ಗದಲ್ಲಿ ಕಾಂಗ್ರೆಸ್​ ಪಕ್ಷ ಸೇರಿದರು

ಕೈ ಹಿಡಿದ ಶ್ರೀಕಾಂತ್ | ಕಾಂಗ್ರೆಸ್ ಕಚೇರಿಯಲ್ಲಿ ನಡೆದ  ಹಬ್ಬ ಹೇಗಿತ್ತು ನೋಡಿ

KARNATAKA NEWS/ ONLINE / Malenadu today/ Nov 4, 2023 SHIVAMOGGA NEWS

SHIVAMOGGA | ಶಿವಮೊಗ್ಗ ಕಾಂಗ್ರೆಸ್​ ಕಚೇರಿ ನಿನ್ನೆ ಕಳೆಗಟ್ಟಿತ್ತು. ಇದುವರೆಗೂ ಅಲ್ಲಿ ಅಂತಹದ್ದೊಂದು ಅದ್ದೂರಿತನ ಅಲ್ಲಿ ಕಂಡಿರಲಿಲ್ಲ. ಜೆಡಿಎಸ್​ನ ಜಿಲ್ಲಾಧ್ಯಕ್ಷರಾಗಿದ್ದ ಎಂ.ಶ್ರೀಕಾಂತ್ ಪಕ್ಷ ಸೇರ್ಪಡೆಯಾಗಿ ಸದಸ್ಯತ್ವ ಪಡೆಯುವುದಕ್ಕಾಗಿ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಬರುತ್ತಲೇ ಕಚೇರಿ ಆವರಣದಲ್ಲಿ ಹಬ್ಬದಂತ ವಾತಾವರಣ ಸೃಷ್ಟಿಯಾಗಿತ್ತು. ಕಾರ್ಯಕರ್ತರು ಅಭಿಮಾನಿಗಳು ಶ್ರೀಕಾಂತ್​ರವರ ಪರವಾಗಿ ಘೋಷಣೆಗಳನ್ನ ಕೂಗಿ ಪಕ್ಷಕ್ಕೆ ಅವರನ್ನ ಸ್ವಾಗತಿಸಿದರು. 

ಎರಡು ಶ್ರೇಣಿಗಳಲ್ಲಿ ದೊಡ್ಡ ಹೂವಿನ ಹಾರ, ಸೇಬಿನ ಹಾರಗಳಿಂದ ಸ್ವಾಗತಿಸಲಾಯಿತು. ಪಟಾಕಿ ಸಿಡಿಸಿ ಸಂಭ್ರಮಿಸ ಲಾಯಿತು, ನೂರಾರು ಜನರು ತೆರದ ಕಾರಿನಲ್ಲಿ ಬಂದ ಶ್ರೀಕಾಂತ್ ಪರವಾಗಿ ಜೈಕಾರ ಕೂಗಿದರು. ಮಹಿಳೆಯರ ಡೊಳ್ಳು ತಂಡದಿಂದ ಅದ್ಧೂರಿ ಸ್ವಾಗತ ನೀಡಲಾಯಿತು. ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ನೂಕುನುಗ್ಗಲು ಸಹ ಉಂಟಾಯ್ತು.  

ಪಕ್ಷ ಸೇರ್ಪಡೆಯ ವಿಡಿಯೋ ಲಿಂಕ್​ ಇಲ್ಲಿದೆ : ಲಿಂಕ್

ಇನ್ನೂ ಈ ವೇಳೆ ಮಾತನಾಡಿದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್​ ಎಸ್​ ಸುಂದರೇಶ್​  ಕೇಂದ್ರ ಬಿಜೆಪಿ ಸರ್ಕಾರದ ದುರಾಡಳಿತದಿಂದ ಜನ ಬೇಸತ್ತಿದ್ದು, ರಾಜ್ಯದ ಎಲ್ಲಾ ಪಕ್ಷಗಳ ಮಾಜಿ ಮತ್ತು ಹಾಲಿ ಶಾಸಕರು ಸೇರಿದಂತೆ ಪ್ರಮುಖ ನಾಯಕರು ಕಾಂಗ್ರೆಸ್‌ಗೆ ಬರುತ್ತಿದ್ದು, ದಿನೇದಿನೇ ಕಾಂಗ್ರೆಸ್ ಪಕ್ಷ ಜಿಲ್ಲೆಯಲ್ಲಿ ಬಲಯುತವಾಗಿ ಬೆಳೆಯುತ್ತಿದೆ ಎಂದಿದ್ದಾರೆ. 

ಜಾತಿಗಳ ನಡುವೆ ವಿಷಬೀಜ ಬಿತ್ತುತ್ತಾ ಕೋಮು ಗಲಭೆಗಳಿಗೆ ಕಾರಣವಾದ ಬಿಜೆಪಿಯನ್ನು ರಾಜ್ಯದ ಜನತೆ ಸಂಪೂರ್ಣವಾಗಿ ತಿರಸ್ಕರಿಸಿದ್ದಾರೆ. ಕಾಂಗ್ರೆಸ್‌ನ ಐದು ಗ್ಯಾರಂಟಿ ಯೋಜನೆಗಳಿಗೆ ವ್ಯಾಪಕ ಜನಬೆಂಬಲ ವ್ಯಕ್ತವಾಗಿದೆ. ಜಿಲ್ಲೆಯಲ್ಲಿ ಬಿಜೆಪಿ ಸಂಪೂರ್ಣ ನಾಶದತ್ತ ಸಾಗಿದೆ. ಮೋದಿಯವರ ಸುಳ್ಳಿನ ಕಂತೆಯನ್ನು ಜನ ಅರಿತಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕೂಡ ಕಾಂಗ್ರೆಸ್‌ ಗೆಲುವು ನಿಶ್ಚಿತ ಎಂದರು.



ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಮಾತನಾಡಿ, ಎಂ ಶ್ರೀಕಾಂತ್ ಸೇರ್ಪಡೆಯಿಂದ ಕಾಂಗ್ರೆಸ್‌ಗೆ ಹೆಚ್ಚಿನ ಬಲ ಬಂದಿದೆ. ಸಾವಿರಾರು ಭಾಷೆ ಮತ್ತು ಸಂಸ್ಕೃತಿ, ಧರ್ಮ ಉಳ್ಳ ಈ ದೇಶವನ್ನು ಕಾಂಗ್ರೆಸ್ ಪಕ್ಷವು ಒಟ್ಟಾಗಿ

ತೆಗೆದುಕೊಂಡು ಬಂದಿದೆ. ಬಡವರು ಹಿಂದುಳಿದ ವರ್ಗಗಳ ಆಶೋತ್ತರಗಳನ್ನು ಈಡೇರಿಸಿದೆ ಎಂದರು. 



ಸಚಿವ ಮಧು  ಬಂಗಾರಪ್ಪ, ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಕೆ. ಮಂಜುನಾಥ್, ಮಾಜಿ ವಿಧಾನಪರಿಷತ್‌ ಸದಸ್ಯ ಆರ್. ಪ್ರಸನ್ನ ಕುಮಾರ್‌, ಪ್ರಮುಖರಾದ ಆರ್.ಎಂ. ಮಂಜುನಾಥ ಗೌಡ, ಕಲಗೋಡು ರತ್ನಾಕರ್, ಇಸ್ಮಾಯಿಲ್ ನಾಗರಾಜ್‌, ಎನ್‌, ರಮೇಶ್‌, ದೇವೇಂದ್ರಪ್ಪ, ಮುಕ್ತಿಯಾರ್ ಅಹ್ಮದ್‌, ಜ್ಯೋತಿ ಅರಳಪ್ಪ, ವಿಶ್ವನಾಥ್‌ ಕಾಶಿ, ರಂಗನಾಥ್, ಎಸ್.ಪಿ. ಶೇಷಾದ್ರಿ, ಸಿ.ಎಸ್. ಚಂದ್ರಭೂಪಾಲ್‌, ರಾಮೇಗೌಡ, ಉಸ್ಮಾನ್‌ ಇನ್ನಿತರರು ಉಪಸ್ಥಿತರಿದ್ದರು.