ಕಾಂಗ್ರೆಸ್ ಟಿಕೆಟ್ ಕದನ | ಯಾರು ನೈಋತ್ಯ ಪದವೀಧರ ಕ್ಷೇತ್ರದ ಅಭ್ಯರ್ಥಿ?

Who is the candidate of the Congress South-West Graduate Constituency? ಕಾಂಗ್ರೆಸ್​ ನೈಋತ್ಯ ಪದವೀಧರ ಕ್ಷೇತ್ರದ ಅಭ್ಯರ್ಥಿ ಯಾರು ?

ಕಾಂಗ್ರೆಸ್ ಟಿಕೆಟ್ ಕದನ | ಯಾರು ನೈಋತ್ಯ ಪದವೀಧರ ಕ್ಷೇತ್ರದ ಅಭ್ಯರ್ಥಿ?

KARNATAKA NEWS/ ONLINE / Malenadu today/ Oct 31, 2023 SHIVAMOGGA NEWS

SHIVAMOGGA | ಶಿವಮೊಗ್ಗ ಜಿಲ್ಲಾ ರಾಜಕಾರಣ ಮತ್ತೊಂದು ಜಿದ್ದಾಜಿದ್ದಿಗೆ ಸಜ್ಜಾಗುತ್ತಿದೆ. ಅದರಲ್ಲಿಯು ವಿಶೇಷವಾಗಿ ಆಡಳಿತ ಪಕ್ಷದಿಂದ ಮೇಲ್ಮನೆಯ ಸ್ಥಾನಗಳಿಗೆ ಅಭ್ಯರ್ಥಿಗಳು ಯಾರು ಎಂಬುದೇ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. 

ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್​ನಿಂದ ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ಸ್ಪರ್ದಿಸಲು ಟಿಕೆಟ್ ಆಕಾಂಕ್ಷಿಯಾಗಿ ರಮೇಶ್​ ಶಂಕರಘಟ್ಟ ಅರ್ಜಿ ಸಲ್ಲಿಸಿದ್ದರು. ಆದರೆ ಕೆಪಿಸಿಸಿ ಈ  ನೈಋತ್ಯ ಶಿಕ್ಷಕರ ಕ್ಷೇತ್ರಕ್ಕೆ ಕೊಡಗು ಜಿಲ್ಲಾಧ್ಯಕ್ಷ ಕೆ.ಕೆ.ಮಂಜುನಾಥ್ ಹೆಸರನ್ನು ಘೋಷಣೆ ಮಾಡಿದೆ.  

ಆದರೆ ಕೆಪಿಸಿಸಿ ಇದುವರೆಗೂ  ನೈಋತ್ಯ ಪದವೀಧರ ಕ್ಷೇತ್ರದ ಅಭ್ಯರ್ಥಿಯನ್ನು ಫೈನಲ್ ಮಾಡಿಲ್ಲ. ಹಾಗಾಗಿ ಶಿವಮೊಗ್ಗ ಜಿಲ್ಲೆಯಲ್ಲಿ ಈ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಯಾರು ಎಂಬುದೇ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. 

READ : ಮಧು ಬಂಗಾರಪ್ಪ V/s ಬೇಳೂರು ಗೋಪಾಲಕೃಷ್ಣ! ಏನು ನಡೆಯುತ್ತಿದೆ ಶಿವಮೊಗ್ಗ ಕಾಂಗ್ರೆಸ್​ನಲ್ಲಿ?

ಒಂದು ಕಡೆ ಬಿಜೆಪಿಯಿಂದ ಜೆಡಿಎಸ್​ಗೆ, ಜೆಡಿಎಸ್​ನಿಂದ ಕಾಂಗ್ರೆಸ್​ಗೆ ಬಂದಿರುವ ಆಯನೂರು ಮಂಜುನಾಥ್ ಮತ್ತೆ ನೈಋತ್ಯ ಪದವೀಧರ ಕ್ಷೇತ್ರದಿಂದ ಚುನಾವಣೆ ಎದುರಿಸುವ ಮಾತನಾಡ್ತಿದ್ದಾರೆ. ಅಲ್ಲದೆ ಈ ಸಂಬಂಧ ಪ್ರಬಲವಾಗಿ ಪ್ರಯತ್ನಿಸ್ತಿದ್ದಾರೆ. ಜೊತೆಯಲ್ಲಿ ಕಚೇರಿಯನ್ನು ಆರಂಭಿಸಿದ್ದಾರೆ. 

ಆದರೆ,ನೈಋತ್ಯ ಪದವೀಧರ ಕ್ಷೇತ್ರದಲ್ಲಿ ಚುನಾವಣೆಗೆ ನಿಂತು ಗೆಲ್ಲಲೇ ಬೇಕು ಎಂದು ಕಾಂಗ್ರೆಸ್​ನ ಇನ್ನೊಬ್ಬ ಮುಖಂಡ ಎಸ್​ಪಿ ದಿನೇಶ್ ಹಲವು ತಿಂಗಳಿನಿಂದ ಪ್ರಯತ್ನಿಸುತ್ತಿದ್ದಾರೆ.  ಎರಡು ಬಾರಿ ಚುನಾವಣೆಗೆ ಸ್ಪರ್ಧಿಸಿ ಸೋಲು ಕಂಡಿರುವ ಎಸ್.ಪಿ.ದಿನೇಶ್ ಈ ಸಲ ಗೆಲುವಿನ ನಿರೀಕ್ಷೆಯಲ್ಲಿದ್ಧಾರೆ. ಮತದಾರರ ನೋಂದಣಿ ಕಾರ್ಯದಲ್ಲಿ ಸಕ್ರಿಯರಾಗಿರುವ ಅವರು, ಟಿಕೆಟ್​ ಖಾತರಿಯಾಗುವುದನ್ನ ಕಾಯುತ್ತಿದ್ದಾರೆ. 

ಸದ್ಯ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್​​ನಲ್ಲಿ ಈ ಇಬ್ಬರು ಸಹ ನೈಋತ್ಯ ಪದವೀಧರ ಕ್ಷೇತ್ರದ ಟಿಕೆಟ್​ಗಾಗಿ ಕಾಯುತ್ತಿದ್ದಾರೆ. ಇಬ್ಬರ ನಡುವೆ ಯಾರಿಗೆ ಅದೃಷ್ಟ ಒಲಿಯುತ್ತೋ ಗೊತ್ತಿಲ್ಲ. ಆದರೆ ಯಾರಿಗೆ ಟಿಕೆಟ್ ಸಿಕ್ಕರೂ ಅಸಮಾಧಾನ ಹೊಗೆಯಾಡುವುದಂತು ಸತ್ಯ ಎನ್ನಲಾಗ್ತಿದೆ