ರಾಷ್ಟ್ರೀಯ ಹೆದ್ದಾರಿಗೆ ಅಡ್ಡಲಾಗಿ ಉರುಳಿದ ಮರ! ಶಿವಮೊಗ್ಗ-ಸಾಗರ ರಸ್ತೆಯಲ್ಲಿ ಟ್ರಾಫಿಕ್ ಜಾಮ್! ಸ್ಥಳಕ್ಕೆ ಬಂದ ಶಾಸಕರು!

Traffic jams were caused after a tree fell on Shivamogga Sagar Road National Highway. The MLAs who reached the spot helped in clearing the tree. ಶಿವಮೊಗ್ಗ ಸಾಗರ ರಸ್ತೆ, ರಾಷ್ಟ್ರೀಯ ಹೆದ್ಧಾರಿಯಲ್ಲಿ ಮರವೊಂದು ಉರುಳಿಬಿದ್ದು ಟ್ರಾಫಿಕ್ ಜಾಮ್ ಆಗಿತ್ತು. ಸ್ಥಳಕ್ಕೆ ಬಂದ ಶಾಸಕರು ಮರ ತೆರವುಗೊಳಿಸಲು ನೆರವಾದರು.

ರಾಷ್ಟ್ರೀಯ ಹೆದ್ದಾರಿಗೆ ಅಡ್ಡಲಾಗಿ ಉರುಳಿದ ಮರ! ಶಿವಮೊಗ್ಗ-ಸಾಗರ ರಸ್ತೆಯಲ್ಲಿ ಟ್ರಾಫಿಕ್ ಜಾಮ್! ಸ್ಥಳಕ್ಕೆ ಬಂದ ಶಾಸಕರು!

KARNATAKA NEWS/ ONLINE / Malenadu today/ Jul 24, 2023 SHIVAMOGGA NEWS 

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು  ಗಿಳಾಲಗುಂಡಿ ಸಮೀಪ ಬೃಹತ್ ಮರವೊಂದು ರಸ್ತೆಗೆ ಅಡ್ಡಲಾಗಿ ಉರುಳಿಬಿದ್ದಿತ್ತು. ಗಾಳಿ ಮಳೆಗೆ ಬಿದ್ದ ಮರದಿಂದಾಗಿ ಶಿವಮೊಗ್ಗ-ಸಾಗರ ರಸ್ತೆಯಲ್ಲಿ ಸಂಚಾರಕ್ಕೆ ಕೆಲವು ಹೊತ್ತು ಸಮಸ್ಯೆ ಉಂಟಾಗಿತ್ತು.  

ಸ್ಥಳೀಯರ ಸಹಾಯ

ರಾಷ್ಟ್ರೀಯ ಹೆದ್ಧಾರಿಯಲ್ಲಿ ಸುಮಾರು 2 ಗಂಟೆ ಕಾಲ ಸಂಚಾರ ಬಂದ್ ಆಗಿತ್ತು. ಮರ ಉರುಳಿಬಿದ್ದ ಬೆನ್ನಲ್ಲೆ ಸ್ಥಳೀಯರು ಮರವನ್ನು ಕಡಿದು , ಸಂಚಾರಕ್ಕೆ ಅನುವು ಮಾಡಿಕೊಡಲು ಮುಂದಾದರು. ಆದರೆ ದೊಡ್ಡದಾಗಿದ್ದ ಮರವನ್ನು ತೆರವುಗೊಳಿಸುವುದು ಸುಲಭದ ಕೆಲಸವಾಗಿರಲಿಲ್ಲ. 

ಸ್ಥಳಕ್ಕೆ ಬಂದ ಶಾಸಕರು

ಗಿಳಾಲಗುಂಡಿ ಕ್ರಾಸ್ ಸಮೀಪವೇ ಘಟನೆ ಬಗ್ಗೆ ವಿಷಯ ತಿಳಿದು ಸ್ಥಳಕ್ಕೆ ಶಾಸಕ ಬೇಳೂರು ಗೋಪಾಲಕೃಷ್ಣ (MLA Belur Gopalakrishna) ಮರ ತೆರವು ಕಾರ್ಯಾಚರಣೆಯಲ್ಲಿ ಕೈ ಜೋಡಿಸಿದರು, ತಮ್ಮ ಬೆಂಬಲಿಗರ ಜೊತೆ ಮರವನ್ನು ತೆರವುಗೊಳಿಸಲು ನೆರವಾದರು. ಬಳಿಕ ಮರ ತುಂಡು ಮಾಡುವ ಮಷಿನ್​ ಮೂಲಕ ಮರವನ್ನ ಅಲ್ಲಲ್ಲಿ ತುಂಡು ಮಾಡಿ, ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಯ್ತು. ಮಳೆಯ ನಡುವೆಯೇ ಶಾಸಕರು ಹಾಗೂ ಸ್ಥಳೀಯರು ಮಾಡಿದ ಕಾರ್ಯದಿಂದಾಗಿ, ಹೆದ್ಧಾರಿಯಲ್ಲಿ ವಾಹನ ಸವಾರರು ಮುಂದಕ್ಕೆ ಹೋಗಲು ಸಹಾಯವಾಯ್ತು. 

ಭದ್ರಾವತಿ ಮರ್ಡರ್ ಕೇಸ್! ರೌಡಿ ಮುಜ್ಜು ಹತ್ಯೆ ಪ್ರಕರಣದ ರಹಸ್ಯ ಭೇದಿಸಿದ ಶಿವಮೊಗ್ಗ ಪೊಲೀಸ್ ! ನಡೆದಿದ್ದೇನು? 



ನಡುರಸ್ತೆಯಲ್ಲಿ ಮಹಿಳೆಯ ಕೊಲೆ! ಸಾಬೀತಾಯ್ತು ಅಪರಾಧ! ಶಿಕಾರಿಪುರ ಗ್ರಾಮಾಂತರ ಠಾಣೆಯ ಕೇಸ್​ನಲ್ಲಿ ಕೋರ್ಟ್ ತೀರ್ಪು!

ಮಾಜಿ ಸಿಎಂ ಬಿಎಸ್​ವೈ ಇನ್ಮುಂದೆ ಡಾ.ಬಿಎಸ್​ ಯಡಿಯೂರಪ್ಪ! ಅಭಿಮಾನಿಗಳಿಗೂ ಅವಕಾಶ ನೀಡಿದ BYR

ಮಗ ಬೈಕ್​ ಓಡಿಸಿದ ತಪ್ಪಿಗೆ 25 ಸಾವಿರ ರೂಪಾಯಿ ದಂಡ ಕಟ್ಟಿದ ತಂದೆ! ಕಾರಣವೇನು ಗೊತ್ತಾ?

ವೈದ್ಯರೊಬ್ಬರ ಸಮಯ ಪ್ರಜ್ಞೆಯಿಂದ ಬಯಲಾಯ್ತು ದುಷ್ಕೃತ್ಯ! ಶಿವಮೊಗ್ಗ ಜಿಲ್ಲೆಯಲ್ಲಿ ದಾಖಲಾಯ್ತು ಮತ್ತೊಂದು ಪೋಕ್ಶೋ ಕೇಸ್!

 ​