ಹೋಮ್‌ ಮೇಡ್‌ ಉದ್ಯಮದ ದಿಗ್ಗಜೆಯಾಗಿದ್ದ ಹೋಳಿಗೆ ಗೌರಮ್ಮ ಇನ್ನಿಲ್ಲ! ಬಿ.ಬಿ. ಸ್ಟ್ರೀಟ್‌ನ ಇವರ ಬಗ್ಗೆ ಪ್ರತಿ ಮಹಿಳೆಯರು ತಿಳಿಯಬೇಕು!

Holige Gowramma, the legend of the homemade industry, is no more! Every woman should know about this lady of BB Street!

ಹೋಮ್‌ ಮೇಡ್‌ ಉದ್ಯಮದ ದಿಗ್ಗಜೆಯಾಗಿದ್ದ ಹೋಳಿಗೆ ಗೌರಮ್ಮ  ಇನ್ನಿಲ್ಲ! ಬಿ.ಬಿ. ಸ್ಟ್ರೀಟ್‌ನ ಇವರ ಬಗ್ಗೆ ಪ್ರತಿ ಮಹಿಳೆಯರು ತಿಳಿಯಬೇಕು!
Holige Gowramma

Shivamogga  Apr 14, 2024  ಶಿವಮೊಗ್ಗದಲ್ಲಷ್ಟೆ ಅಲ್ಲದೆ ಹೋಳಿಗೆ ಪ್ರಿಯರ ಮನೆ ಮಾತನಾಗಿದ್ದ ಹೋಳಿಗೆ ಗೌರಮ್ಮ ಎಂದೇ ಖ್ಯಾತರಾಗಿದ್ದ ಗೌರಮ್ಮನವರು ನಿಧನರಾಗಿದ್ದಾರೆ. ವಯೋಸಹಜ ಅನಾರೋಗ್ಯದಿಂದಾಗಿ ಅವರು ಸಾವನ್ನಪ್ಪಿದ್ದಾರೆ. 

ವಿದೇಶಕ್ಕೂ ರಪ್ತಾಗುತ್ತಿತ್ತು ಹೋಳಿಗೆ 

ಶಿವಮೊಗ್ಗ ನಗರದ ಬಿಬಿ ಸ್ಟ್ರೀಟ್‌ ( ದೊಡ್ಡ ಬ್ರಾಹ್ಮಣರ ಬೀದಿ) ಯ ಬೀಮೇಶ್ವರ ದೇವಸ್ಥಾನದ ಸಮೀಪದ ನಿವಾಸಿಯಾಗಿದ್ದ ಹೋಳಿಗೆ ಗೌರಮ್ಮನವರು ಮನೆಯಿಂದಲೇ ಉದ್ಯಮವನ್ನು ಆರಂಭಿಸಿ ಸ್ವಾಭಿಮಾನಿ ಉದ್ಯಮಿಯಾಗಿ ಬೆಳೆದವರು. ಸಣ್ಣಮಟ್ಟದಲ್ಲಿ ಹೋಳಿಗೆಯನ್ನ ಸಿದ್ದಪಡಿಸಿ ಆಚೀಚೆಗೆ ನೀಡುತ್ತಿದ್ದ ಅವರ ಕೈ ರುಚಿಯಿಂದಾಗಿ ಹೋಳಿಗೆಗೆ ಸಿಕ್ಕಾಪಟ್ಟೆ ಡಿಮ್ಯಾಂಡ್‌ ಆರಂಭವಾಗಿತ್ತು. ಎಷ್ಟರಮಟ್ಟಿಗೆ ಎಂದರೇ ಇವರು ಮಾಡುತ್ತಿದ್ದ ಹೋಳಿಗೆಯನ್ನು ವಿದೇಶದಲ್ಲಿದ್ದವರು ಸಹ ಆರ್ಡರ್‌ ಕೊಟ್ಟು ತರಿಸಿಕೊಳ್ಳುತ್ತಿದ್ದರು. 

ದೊಡ್ಡ ಉದ್ಯಮವನ್ನೆ ಸ್ಥಾಪಿಸಿದ ಹೋಳಿಗೆ ಗೌರಮ್ಮನವರು ಇಳಿವಯಸ್ಸಿನಲ್ಲಿಯು ತಮ್ಮ ಹೋಳಿಗೆಯ ಸಿಹಿರುಚಿಯನ್ನ ಜನರಿಗೆ ಸವಿಯಲು ಅವಕಾಶ ಮಾಡಿಕೊಟ್ಟಿದ್ದರು.  88 ವರ್ಷದ ಅವರು ನಿನ್ನೆ   ಭಾನುವಾರ ಬೆಳಗ್ಗೆ ನಿಧನರಾದರು. ಮೃತರಿಗೆ ಇಬ್ಬರು ಪತ್ರಿಯರು ಇದ್ದಾರೆ. ಇವರ ನಿಧನಕ್ಕೆ ಮಾಜಿ ಶಾಸಕ ಕೆ.ಬಿ.ಪ್ರಸನ್ನ ಕುಮಾ‌ರ್, ತಾಲೂಕು ಬ್ರಾಹ್ಮಣ ಸೇವಾ ಸಂಘ, ವಿಪ್ರ ಯುವ ಪರಿಷತ್‌, ವೈದಿಕ ಪರಿಷತ್‌ ಮುಖಂಡರು ಸಂತಾಪ ಸೂಚಿಸಿದ್ದಾರೆ