ತೀರ್ಥಹಳ್ಳಿಯ ಆ ಮನೆಯೊಳಗೆ ನಡೆದಿದ್ದೇನು? ಬದುಕಿರುವ ಭರತ್​ ಹೇಳಿದ್ದೇನು? ಬೀದಿ ನಾಯಿಗಳು ಮತ್ತು ಆ ಅನುಮಾನವೇನು?

Bharat's words about the incident in Tirthahalli are the details of the doubts expressed by the localsತೀರ್ಥಹಳ್ಳಿಯಲ್ಲಿ ನಡೆದ ಘಟನೆ ಬಗ್ಗೆ ಭರತ್ ಹೇಳಿದ ಮಾತು ಸ್ಥಳೀಯರು ವ್ಯಕ್ತಪಡಿಸಿದ ಅನುಮಾನಗಳ ವಿವರ



KARNATAKA NEWS/ ONLINE / Malenadu today/ Oct 8, 2023 SHIVAMOGGA NEWS

 

ಆರ್ ಎಸ್ ಎಸ್ ಗೆ ತಮ್ಮ ಬದುಕನ್ನೇ ಮುಡಿಪಾಗಿಟ್ಟಿದ್ದ ಆ ಕುಟುಂಬದ ಸದಸ್ಯರೆಲ್ಲರೂ ಸಜೀವ ದಹನ ಮಾಡಿಕೊಳ್ಳುವಂತ ಕಠೋರ ನಿಲುವು ತಳೆದಿದ್ದಾರು ಏಕೆ ಎನ್ನುವ ಅನುಮಾನ ಮೂಡದೆ ಇರದು. ಸದ್ಯ ಈ ಪ್ರಶ್ನೆಗೆ ಉತ್ತರವಿಲ್ಲ. ಆದರೆ ಇಡೀ ಮಲೆನಾಡನ್ನು ಬೆಚ್ಚಿಬೀಳಿಸಿರುವ ಅರಳು ಸುರಳಿಯ ಕೆಕೋಡ್  ಗ್ರಾಮದಲ್ಲಿ ಒಂದು ಕುಟುಂಬದ ಮೂವರು ಸಜೀವ ದಹನಗೊಂಡಿರುವ ಧಾರುಣ ಘಟನೆ ಚರ್ಚಿಸಿದಷ್ಟು ನಿಗೂಢತೆ ಪಡೆದುಕೊಳ್ತಿದೆ.  

ಅಲ್ಲಿ ಆಗಿದ್ದೇನು? / ಆರ್​ಎಸ್​ಎಸ್​ಗಾಗಿ ಬದುಕನ್ನೆ ಮುಡಿಪಾಗಿಟ್ಟವರು ಈ ಕುಟುಂಬದವರಲ್ಲಿ ಒಬ್ಬರು. ಅವರು ದೆಹಲಿಯದ್ದರು. ಆರ್​ಎಸ್​ಎಸ್​ನ ಪ್ರಮುಖ ಸ್ಥಾನದಲ್ಲಿದ್ದವರು. ಸನ್ಯಾಸಿಯ ರೀತಿಯಲ್ಲಿ ಬದುಕಿದವರು. ಸದ್ಯ ಅವರು ಬೆಂಗಳೂರಿನಲ್ಲಿದ್ದಾರೆ. ಅವರ ರಕ್ತ ಸಂಬಂಧಿ ಕುಟುಂಬ ನಿನ್ನೆ ದಹನಗೊಂಡಿದೆ..   

ಮನೆಯ ಪಕ್ಕದ  ಕೋಣೆಯೊಳಗೆ ಕಟ್ಟಿಗೆಗಳನ್ನು ಹಾಕಿಕೊಂಡು ಬೆಂಕಿ ಹಚ್ಚಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಈ ಬೆಂಕಿ ದುರಂತದಲ್ಲಿ  ರಾಘವೇಂದ್ರ ಕೆಕೋಡ್ (65), ಪತ್ನಿ ನಾಗರತ್ನಾ (55), ಹಿರಿಯ ಪುತ್ರ ಶ್ರೀರಾಮ್ (30) ಸಜೀವವಾಗಿ ಬೆಂಕಿಗೆ ಆಹುತಿಯಾಗಿದ್ದಾರೆ. ಇನ್ನೋರ್ವ ಪುತ್ರ ಭರತ್ (28) ಗಂಭೀರವಾಗಿ ಗಾಯಗೊಂಡಿದ್ದು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ರಾಘವೇಂದ್ರ ಕುಟಂಬದ ಐದು ಸಹೋದರಲ್ಲಿ ಓರ್ವ ಸಹೋದರ ಸಾವನ್ನಪ್ಪಿದ್ದಾರೆ. ಓರ್ವ ಸಹೋದರ ಡಾಕ್ಟರ್​ ಸುಧೀಂದ್ರ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಆರ್ಥೋಪೆಡಿಕ್ ವೈದ್ಯರಾಗಿದ್ದಾರೆ. ಪಾ.ರಾ ಕೃಷ್ಣಮೂರ್ತಿ ಆರ್.ಎಸ್.ಎಸ್ ರಾಷ್ಟ್ರೀಯ ಪ್ರಚಾರಕ್ ಆಗಿದ್ದಾರೆ.ಮತ್ತೋರ್ವರು ಬಿ.ಎಸ್.ಎನ್ಎಲ್ ನಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತಿಯಾಗಿದ್ದಾರೆ. ಆರ್ಥಿಕವಾಗಿಯು ಕುಟುಂಬ ಚೆನ್ನಾಗಿತ್ತು ಎಂದು ಹೇಳುತ್ತಾರೆ. 

ಸ್ವತಃ ಮಾಜಿ ಸಚಿವ ಗೃಹಸಚಿವ ಆರಗ ಜ್ಞಾನೇಂದ್ರರವರು ಹೇಳುವಂತೆ ಕುಟುಂಬದಲ್ಲಿ ಭರತ ಉತ್ತಮ ಅಡಿಕೆ ವ್ಯಾಪಾರ ಮಾಡುತ್ತಿದ್ದ. 10 ಎಕೆರೆ ಅಡಿಕೆ ತೋಟ ಇತ್ತು ಒಳ್ಳೆ  ಫಲ ಬರುತ್ತಿತ್ತು. ಹೀಗಿದ್ದು, ಈಥರ ಏಕಾಯ್ತು ಎಂಬುದು ಅರ್ಥವಾಗ್ತಿಲ್ಲ ಎನ್ನುತ್ತಾರೆ ಗೃಹಸಚಿವರು. 

ಸುಟ್ಟುಕೊಂಡಿದ್ದೇಕೆ?  /ಏನೇ ಅಂದರು, ತಮ್ಮನ್ನು ತಾವೇ ಸುಟ್ಟುಕೊಂಡು ಸಾಯಬೇಕು ಎಂದರೆ, ಅದು ಸಣ್ಣಮಾತಂತು ಅಲ್ಲ.ಅಷ್ಟೊಂದು ಮನಸ್ಸು ಗಟ್ಟಿ ನಿರ್ಧಾರ ತಳೆಯಲು ಕಾರಣವೇನಿತ್ತು ಎಂಬುದೇ ಪ್ರಶ್ನೆ.. ಘಟನೆ ನಡೆದ ಮನೆಯ ಪಕ್ಕದ ಕೋಣೆಯನ್ನು ಗಮನಿಸಿದರೆ ಸಾಕಷ್ಟು ಅನುಮಾನಗಳು ಕಾಡುತ್ತವೆ. ಸುಡಬಹುದಾದ ಎಲ್ಲಾ ವಸ್ತುಗಳು ಅಂದರೆ ಕಟ್ಟಿಗೆ,ಹಾಸಿಗೆ, ಚಾಪೆ ಬಟ್ಟೆ ಬರೆ ಪೇಪರ್  ಪೇಸ್ಟು ಎಲ್ಲವನ್ನು ಕೋಣೆಯಲ್ಲಿ ಹಾಕಿಕೊಂಡು ಮದ್ಯದಲ್ಲಿ ಈ ಕುಟುಂಬ ಪೆಟ್ರೋಲ್ ಸುರಿದುಕೊಂಡು ಸಜೀವವಾಗಿ ದಹಿಸಿಕೊಂಡಂತಿದೆ. 

ಗಂಭೀರವಾಗಿ ಗಾಯಗೊಂಡ ಕೊನೆ ಮಗ ಭರತ್ ಬದುಕುಳಿದಿದ್ದಾನೆ. ಈತನ ಹೇಳಿಕೆಯಿಂದ  ಘಟನೆಯ ಸತ್ಯಾಸತ್ಯತೆಯನ್ನು ಹೊರಬರಬೇಕಿದೆ. ಇವತ್ತು ಬೆಳಗ್ಗೆ ಉರಿ ಉರಿ ಎಂದು ಮನೆಯಿಂದ ಹೊರಬಿದ್ದ ಈತ ಅಲ್ಲಿದ್ದವರಿಗೆ. ನನ್ನನ್ನು ಬದುಕಿಸಬೇಡಿ, ನನಗೂ ಏನಾದ್ರೂ ಕೊಟ್ಟು ಸಾಯಿಸಿ ಎಂದು ಅಲವತ್ತುಕೊಂಡಿದ್ದಾನೆ. ನನಗೆ ಇಂಜೆಕ್ಷನ್ ಕೊಟ್ಟುಬಿಡಿ ಎಂದಿದ್ದಾನೆ. ಅಲ್ಲಿಯೇ ಸನಿಹವಿದ್ದ ಬಾವಿಯನ್ನು ಹಾರಲು ಹೋಗುತ್ತಾನೆ. ಸ್ಥಳೀಯರು ಆತನನ್ನು ರಕ್ಷಿಸಿ, ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಿದ್ದಾರೆ.



ಹೊರಗಿನಿಂದ ಒತ್ತಡವಿತ್ತೆ / ಸಾಲಬಾದೆ, ಇಲ್ಲವೇ ಖಾಯಿಲೆ ಕಸಾಲೆ, ಮಾನಸಿಕ ಹಿಂಸೆ ತಾಳಲಾರದೆ ಒಬ್ಬ ವ್ಯಕ್ತಿ ಆತ್ಮಹತ್ಯಗೆ ಶರಣಾಗುವುದು ಸಾಮಾನ್ಯ ಇಲ್ಲಿ ಇಡೀ ಕುಟುಂಬ ಸಾವಿನ ಬೆಂಕಿಯಲ್ಲಿ ಸಜೀವವಾಗಿ ದಹನವಾಗುವಷ್ಟು ಕಠಿಣ ನಿರ್ಧಾರ ತಾಳಲು ಕಾರಣವೇನು. ಕುಟುಂಬದಲ್ಲಿ ಎಲ್ಲವೂ ಚೆನ್ನಾಗಿರುವಾಗ..ಆಸ್ತಿ ವಿಚಾರದಲ್ಲಿ ಗೊಂದಲವಿತ್ತೇ. ಅದಕ್ಕಾಗಿ ಮಾನಸಿಕ ಒತ್ತಡವಿತ್ತೇ ಎಂಬ ಅನುಮಾನ ಕಾಡುತ್ತೆ.

ಬೀದಿ ನಾಯಿಗಳು ರಾತ್ರಿಯೆಲ್ಲಾ ಬೊಗಳುತ್ತಿದ್ದದ್ದು ಏಕೆ?/ ಇದೊಂದು ಅನುಮಾನ ಘಟನೆಗೆ ಮತ್ತಷ್ಟು ಬೆಳಕು ಚೆಲ್ಲುತ್ತದೆ. ರಾಘವೇಂದ್ರ ಕುಟುಂಬ ವಾಸವಿರುವ ಒಂಟಿ ಮನೆಯಲ್ಲಿ ಅವರ ಲ್ಯಾಬರ್ ಡಾರ್ ನಾಯಿ ಬಿಟ್ಟರೆ ಸಾಮಾನ್ಯವಾಗಿ ಯಾವ ನಾಯಿ ರಾತ್ರಿ ಹೊತ್ತು ಬೊಗಳುತ್ತಿರಲಿಲ್ಲ. ಈ ದುರ್ಘಟನೆ ಮುಂಜಾನೆ 5.30 ರಿಂದ 6 ಗಂಟೆ ಹೊತ್ತಿಗೆ ನಡೆದಿರಬಹುದು. ಆದರೆ ಅಂದು ಮದ್ಯರಾತ್ರಿಯೆಲ್ಲಾ ಬೀದಿ ನಾಯಿಗಳು ಜೋರಾಗಿ ಬೊಗಳಿದೆ. ರಾತ್ರಿಯೆಲ್ಲಾ ಮನೆಯಲ್ಲಿ ಏನೆಲ್ಲಾ ಸನ್ನಿವೇಶಗಳು ನಡೆದು ಹೋಗಿರಬಹುದು. ರಾತ್ರಿ ಯಾರಾದ್ರೂ ಮನೆಗೆ ಬಂದಿದ್ರಾ..ಮನೆಯಲ್ಲಿ ಸದ್ದು ಜೋರಾಗಿದ್ದಕ್ಕೇನಾದ್ರೂ ಬೀದಿ ನಾಯಿಗಳು ಬೊಗಳುತ್ತಿದ್ದವಾ ಗೊತ್ತಿಲ್ಲ. 

ಇವುಗಳ ಕೂಗು ದೂರದಲ್ಲಿದ್ದ ಮನೆಗಳಿಗೂ ಕೇಳಿದೆ. ಸ್ಥಳೀಯರು ಹೇಳುವ ಪ್ರಕಾರ ಈ ಭಾಗದಲ್ಲಿ ಕಾಡುಕೋಣಗಳು ಬರುತ್ತವಾದ್ದರಿಂದ ಕಾಡುಕೋಣ ನೋಡಿ ನಾಯಿಗಳು ಬೊಗಳುತ್ತಿರಬೇಕು ಎಂದುಕೊಂಡಿದ್ದೆವು. ಆದ್ರೆ ಈ ನಾಯಿ ಬೊಗಳುತ್ತಿದ್ದದ್ದು, ಈ ಮನೆಯಲ್ಲಿ ನಡೆಯುತ್ತಿದ್ದ ಘಟನೆಗೆ ಎಂಬುದು ಗೊತ್ತಾಗಲಿಲ್ಲ ಎಂದು ಘಟನಾ ಸ್ಥಳದಲ್ಲಿದ್ದವರು ಹೇಳುತ್ತಾರೆ. 

ರಾತ್ರಿ ಯಾರದ್ರೂ ಮನೆಗೆ ಬಂದಿದ್ರಾ..ಅವರಿಂದೇನಾದ್ರೂ..ಈ ಕೃತ್ಯ ನಡೆದಿದೆಯಾ ಎಂಬ ಅನುಮಾನ ಮೂಡುವಂತೆ ಮಾಡಿದೆ ಈ ನಾಯಿಗಳ ಕೂಗು ಮನೆಯಲ್ಲಿದ್ದ ಸಾಕುನಾಯಿ ಗೋಳು ನೋಡುವವರಿಲ್ಲ.ಮನೆ ಮಂದಿಗೆಲ್ಲಾ ಅಚ್ಚುಮೆಚ್ಚಾಗಿದ್ದ ಲ್ಯಾಬ್ರಡಾರ್​  ನಾಯಿ ಮಾತ್ರ ಮೌನಕ್ಕೆ ಜಾರಿತ್ತು.  


ಇನ್ನಷ್ಟು ಸುದ್ದಿಗಳು 

  1.  R M MANJUNATH GOWDA ರವರ ಮನೆಗಳ ಮೇಲೆ ED ದಾಳಿಗೆ ಕಾರಣವೇನು? ಏನಿದು ಪ್ರಕರಣ?

  2. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಮೈಸೂರು ಮಹತ್ವದ ಪ್ರಕಟಣೆ! ಶಿವಮೊಗ್ಗದಲ್ಲಿಯೇ ನೋಂದಣಿ ಮಾಡಿಕೊಳ್ಳಿ

  3. ಶಿವಮೊಗ್ಗ ಮತ್ತೆ ಆಗುತ್ತಾ ಪವರ್ ಸೆಂಟರ್! ನವರಾತ್ರಿ ನಂತರ ಏನಾಗುತ್ತೆ? ರಾಜ್ಯ ರಾಜಕಾರಣದ ಕುತೂಹಲದ ಸುದ್ದಿ