ಕರ್ನಾಟಕ ವಿವಿಯಲ್ಲಿ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ| ಪೂರ್ತಿ ವಿವರ ಇಲ್ಲಿದೆ

Applications are invited for the recruitment of various posts in Karnataka University ಕರ್ನಾಟಕ ವಿವಿಯಲ್ಲಿ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ

ಕರ್ನಾಟಕ ವಿವಿಯಲ್ಲಿ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ|  ಪೂರ್ತಿ ವಿವರ ಇಲ್ಲಿದೆ

KARNATAKA NEWS/ ONLINE / Malenadu today/ Oct 19, 2023 SHIVAMOGGA NEWS’



ಕರ್ನಾಟಕ ವಿಶ್ವವಿದ್ಯಾಲಯದ ( KARNATAK UNIVERSITY DHARWAD) ಅಡಿಯಲ್ಲಿ ಬರುವ ಮಾಧ್ಯಮಿಕ ಶಾಲೆಯಲ್ಲಿ ಖಾಲಿಯಿರುವ ಸಹಾಯಕ ಶಿಕ್ಷಕರು, ವಿಶೇಷ ಶಿಕ್ಷಕರ ಮತ್ತು ಸಹಾಯಕ ಹೌಸ್ ಮಾಸ್ಟರ್ ಹಾಗೂ ಪ್ರಾಯೋಗಿಕ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಖಾಲಿಯಿರುವ ಸಹಾಯಕ ಶಿಕ್ಷಕರು ಹುದ್ದೆಗಳನ್ನು ನೇರ-ನೇಮಕಾತಿ ಮೂಲಕ ಭರ್ತಿ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಅಹ್ವಾನಿಸಲಾಗಿದೆ. 

ಈ  ಕುರಿತು.ಕರ್ನಾಟಕ ವಿಶ್ವವಿದ್ಯಾಲಯದ ಅಧೀನದಲ್ಲಿ ಒಳಪಡುವ ಮಾಧ್ಯಮಿಕ ಶಾಲೆಯಲ್ಲಿ ಖಾಲಿಯಿರುವ ಸಹಾಯಕ ಶಿಕ್ಷಕರು ಮತ್ತು ವಿಶೇಷ ಶಿಕ್ಷಕರ (ಸಂಗೀತ ಶಿಕ್ಷಕರು, ಸಹಾಯಕ ಹೌಸ್ ಮಾಸ್ಟರ್-ಕಂ-ಸಹಾಯಕ ಶಿಕ್ಷಕರು ಮತ್ತು ಸಹಾಯಕ ಹೌಸ್ ಮಾಸ್ಟರ್) ಹಾಗೂ ವಿಶ್ವವಿದ್ಯಾಲಯದ ಪ್ರಾಯೋಗಿಕ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಖಾಲಿಯಿರುವ ಸಹಾಯಕ ಶಿಕ್ಷಕರು ಹುದ್ದೆಗಳನ್ನು ನೇರ-ನೇಮಕಾತಿ ಮೂಲಕ ಭರ್ತಿ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿ ಪ್ರಕಟಣೆ ನೀಡಲಾಗಿದೆ.

ಯಾವೆಲ್ಲಾ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ ಎಂಬುದರ ವಿವರ ಇಲ್ಲಿದೆ ನೋಡಿ 



ಪೂರ್ಣ ವಿವರಗಳೊಂದಿಗೆ ಭರ್ತಿ ಮಾಡಿದ ಅರ್ಜಿಯನ್ನು 4 ಪ್ರತಿಗಳಲ್ಲಿ ಅಗತ್ಯ ಲಗತ್ತುಗಳೊಂದಿಗೆ ಅರ್ಜಿಗಳನ್ನು ನೊಂದಾಯಿತ ಅಂಚೆಯ ಮೂಲಕ ಪೋಸ್ಟ್ ಅಥವಾ ನೇರವಾಗಿ ವಿಶ್ವವಿದ್ಯಾಲಯಕ್ಕೆ ಬಂದು ಆಡಳಿತ ಕಟ್ಟಡದಲ್ಲಿರುವ ನೆಲಮಹಡಿಯಲ್ಲಿರುವ ಅವಕ/ಜಾವಕ ವಿಭಾಗ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ ಇಲ್ಲಿ ದಿನಾಂಕ: 18.11.2023 ರ ಸಾಯಂಕಾಲ 6.00 ಗಂಟೆಯ ಒಳಗಾಗಿ ಅರ್ಜಿಯನ್ನು ಸಲ್ಲಿಸಬಹುದು. ನಿಗದಿತ ದಿನಾಂಕದ ನಂತರ ಸಲ್ಲಿಸಲಾಗುವ ಅರ್ಜಿಗಳನ್ನು ಯಾವುದೇ ಕಾರಣಕ್ಕೂ ಪರಿಗಣಿಸಲಾಗುವುದಿಲ್ಲ. ಪೋಸ್ಟ್ ಮುಖಾಂತರ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅರ್ಜಿಗಳನ್ನು ಕುಲಸಚಿವರು, ಸಿ.ಆ.ಸು.ವಿಭಾಗ, ಕರ್ನಾಟಕ ವಿಶ್ವವಿದ್ಯಾಲಯ, ಪಾವಟೆನಗರ, ಧಾರವಾಡ-580 003 ಇವರಿಗೆ ದಿನಾಂಕ: 18.11.2023 ರಂದು ಕಚೇರಿ ವೇಳೆಯಲ್ಲಿ ತಲುಪುವಂತೆ ಸಲ್ಲಿಸುವುದು, ಪೋಸ್ಟ್ ಮುಖಾಂತರ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ತಮ್ಮ ಅರ್ಜಿ ಇರಿಸಿದ ಲಕೋಟೆಯ ಮೇಲೆ ಅರ್ಜಿ ಸಲ್ಲಿಸುವ ಹುದ್ದೆಯ ಹೆಸರನ್ನು ಸ್ಪಷ್ಟವಾಗಿ ದಪ್ಪನೆಯ ಅಕ್ಷರಗಳಲ್ಲಿ ನಮೂದಿಸತಕ್ಕದ್ದು. (ಪೋಸ್ಟಲ್ ವಿಳಂಬಕ್ಕೆ ಕರ್ನಾಟಕ ವಿಶ್ವವಿದ್ಯಾಲಯ ಹೊಣೆಯಾಗಿರುವುದಿಲ್ಲ)

ಅರ್ಜಿ ಸಲ್ಲಿಸಲು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಅರ್ಜಿ ನಮೂನೆಗಳನ್ನು ವಿಶ್ವವಿದ್ಯಾಲಯದ ಅಂತರ್ಜಾಲ www.kud.ac.in ನ ನೋಟಿಫಿಕೇಷನ್ ಸೆಗ್ಮೆಂಟ್​ನಿಂದ ಡೌನಲೋಡ್ ಮಾಡಿಕೊಳ್ಳುವುದು. ಹೆಚ್ಚಿನ ಮಾಹಿತಿಯನ್ನು ದೂರವಾಣಿ ಸಂಖ್ಯೆ 0836 2215349 ಕ್ಕೆ ಕಚೇರಿ ವೇಳೆಯಲ್ಲಿ ಕರೆ ಮಾಡಿ ಪಡೆದುಕೊಳ್ಳಬಹುದಾಗಿರುತ್ತದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ತಮ್ಮ ಅರ್ಜಿ ಮೊತ್ತ ಹಾಗೂ ಸಂಸ್ಕರಣಾ ಶುಲ್ಕನೊಳಗೊಂಡು ಅರ್ಜಿಯೊಂದಿಗೆ ರಾಷ್ಟ್ರೀಕೃತ ಬ್ಯಾಂಕ್‌ನಿಂದ ಪಡೆದುಕೊಂಡ ಅರ್ಜಿ ಮೊತ್ತ ಹಾಗೂ (Application Fee and Processing Fee)den Balgow we (8.8.) Finance Officer, K.U. Dharwad ಇವರ ಹೆಸರಿನಲ್ಲಿ ಪಡೆದುಕೊಂಡು ಸಲ್ಲಿಸಬೇಕು. ಅಥವಾ ವಿಶ್ವವಿದ್ಯಾಲಯದ ವೆಬ್‌ಸೈಟ್ www.kud.ac.in ಕ್ಕೆ Ben Online Fee Payment or donosios en Karnatak University Fee (State Bank of India) ಅನ್ನು ಕ್ಲಿಕಿಸಿ Educational Institutions ಅನ್ನು ಕ್ಲಿಕ್ ಮಾಡಿ ಅದರಲ್ಲಿ ಕರ್ನಾಟಕ ರಾಜ್ಯವನ್ನು ಆಯ್ಕೆ ಮಾಡಿ ಅದರಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ಅನ್ನು ಕ್ಲಿಕ್ ಮಾಡಿ 417 - Miscellaneous Receipt-General eat ಮಾಡಿ ಅದರಲ್ಲಿ ಅಭ್ಯರ್ಥಿಯ ಅಗತ್ಯ ವಿವರಗಳನ್ನು ನಮೂದಿಸಿದ ನಂತರ ಸದರ ವೇತನ ಪಾವತಿಯನ್ನು ಪೂರ್ಣಗೊಳಿಸಿ ಅದರ ಪ್ರತಿಯನ್ನು ಪ್ರಿಂಟ್ ಪಡೆದುಕೊಂಡು ಅರ್ಜಿಯೊಂದಿಗೆ ಸಲ್ಲಿಸಬಹುದಾಗಿದೆ. 

ಈ ಸಂಬಂಧ ಹೆಚ್ಚಿನ ಮಾಹಿತಿ ಪಡೆಯಲು ಪಿಡಿಎಫ್​ ಮಾಹಿತಿಯನ್ನು ಓದ ಬಹುದು. 


ಇನ್ನಷ್ಟು ಸುದ್ದಿಗಳು 

ಶೇ...ಹಾವು ಕಚ್ಚಿತು | ಮನೆ ಬಳಿ ಬಂದ ನಾಗರವನ್ನು ಹಿಡಿಯಲು ಹೋದವರ ಸ್ಥಿತಿ ಗಂಭೀರ | VIDEO VIRAL

ಪ್ರಯಾಣಿಕರ ಗಮನಕ್ಕೆ: ನೈಋತ್ಯ ರೈಲ್ವೆಯಿಂದ ದಸರಾ ಹಬ್ಬದ ಪ್ರಯುಕ್ತ ವಿಶೇಷ ರೈಲುಗಳ ಸಂಚಾರ | ಪೂರ್ತಿ ವಿವರ ಇಲ್ಲಿದೆ

ಶಿವಮೊಗ್ಗ ದಸರಾಕ್ಕೆ ಚಾಲನೆ | ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದ ಪಾಲಿಕೆ ಸದಸ್ಯರು | ಕುಣಿದು ಸಂಭ್ರಮಿಸಿದ ಶಾಸಕ ಎಸ್​.ಎನ್​. ಚನ್ನಬಸಪ್ಪ


 



Files