ಕುಡಿಯುವ ನೀರಿನ ಸಮಸ್ಯೆ ಯಾರಿಗೆ ಹೇಳ್ಕೋಬೇಕು? ಇಲ್ಲಿದೆ ಶಿವಮೊಗ್ಗ ಜಿಲ್ಲೆಯ ಕಂಟ್ರೋಲ್​ ರೂಂಗಳ ನಂಬರ್!

To whom should the problem of drinking water be told? Here is the number of control rooms in Shivamogga district.

ಕುಡಿಯುವ ನೀರಿನ ಸಮಸ್ಯೆ ಯಾರಿಗೆ ಹೇಳ್ಕೋಬೇಕು? ಇಲ್ಲಿದೆ ಶಿವಮೊಗ್ಗ ಜಿಲ್ಲೆಯ ಕಂಟ್ರೋಲ್​ ರೂಂಗಳ ನಂಬರ್!
control rooms in Shivamogga district

shivamogga Mar 15, 2024  ಕುಡಿಯುವ ನೀರು ಮತ್ತು ಮೇವು ಕೊರತೆ ಸಂಬಂಧ ಶಿವಮೊಗ್ಗ ಜಿಲ್ಲಾಡಳಿತ ವೂ ಎಚ್ಚೆತ್ತುಕೊಂಡಿದೆ. ಈ ಸಂಬಂಧ ಕಂಟ್ರೋಲ್ ರೂಂ ಸ್ಥಾಪನೆ ಮಾಡಿದೆ.   



2023-24 ನೇ ಸಾಲಿಗೆ ಶಿವಮೊಗ್ಗ ಜಿಲ್ಲೆ ಎಲ್ಲಾ ತಾಲೂಕುಗಳನ್ನು ಬರಪೀಡಿತ ಪ್ರದೇಶವೆಂದು ಸರ್ಕಾರದಿಂದ ಘೋಷಣೆಯಾಗಿದೆ. ಮುಂದಿನ ದಿನಗಳಲ್ಲಿ ಬರದಿಂದ ಜನ, ಜಾನುವಾರುಗಳಿಗೆ ಕುಡಿಯುವ ನೀರು ಮತ್ತು ಮೇವು ಕೊರತೆ ಉಂಟಾದಲ್ಲಿ ಸಾರ್ವಜನಿಕರಿಂದ ಹಾಗೂ ಸರ್ಕಾರದಿಂದ ಬರುವ ವರದಿಗಳ ದೂರವಾಣಿ ಕರೆಗಳನ್ನು ಸ್ವೀಕರಿಸಿ ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸುವ ಕಂಟ್ರೋಲ್ ರೂಂ ಸ್ಥಾಪನೆ ಮಾಡಲಾಗಿದೆ.

ಜಿಲ್ಲಾಧಿಕಾರಿಗಳ ಕಚೇರಿ-08182-221010, ಜಿಲ್ಲಾ ಜಲಸೇವಾ ನಿಯಂತ್ರಣ ಕೊಠಡಿ, ಜಿಲ್ಲಾ ಪಂಚಾಯತ್-08182-267226/7353220406, ಉಪನಿರ್ದೇಶಕರು, ಪಶುಪಾಲನಾ ಇಲಾಖೆ, ಶಿವಮೊಗ್ಗ -08182-222969, ತಹಶೀಲ್ದಾರ್ ಶಿವಮೊಗ್ಗ-08182-279311, ಭದ್ರಾವತಿ-08282-263466, ತೀರ್ಥಹಳ್ಳಿ-08181-228239, ಸಾಗರ-08183-226074, ಶಿಕಾರಿಪುರ-08187-222239, ಸೊರಬ-8184272241, ಹೊಸನಗರ-08185-221235 ಗಳನ್ನು ಸಂಪರ್ಕಿಸುವಂತೆ ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.