ಭದ್ರಾವತಿಯ ಪ್ರಮುಖ ಭಾಗಗಳಲ್ಲಿ ನಾಳೆ ಪವರ್​ ಕಟ್! ವಿವರ ಇಲ್ಲಿದೆ

ನಾಳೆ ಭದ್ರಾವತಿ ತಾಲ್ಲೂಕಿನ ಪ್ರಮುಖ ಭಾಗಗಳಲ್ಲಿ ಪವರ್​ ಕಟ್ (Power cut) ಇರಲಿದೆ ಎಂದು ಮೆಸ್ಕಾಂ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. /Power cut in major parts of Bhadravathi tomorrow! Here's the details

ಭದ್ರಾವತಿಯ ಪ್ರಮುಖ ಭಾಗಗಳಲ್ಲಿ ನಾಳೆ ಪವರ್​ ಕಟ್! ವಿವರ ಇಲ್ಲಿದೆ

KARNATAKA NEWS/ ONLINE / Malenadu today/ May 27, 2023 SHIVAMOGGA NEWS

ಭದ್ರಾವತಿ ನಗರದ ಮೆಸ್ಕಾಂ ಉಪ ವಿಭಾಗ ಘಟಕ-3 ಮತ್ತು ನಗರಸಭೆ ಸ್ವಯಂ ಆರ್ಥಿಕ ಯೋಜನೆಯಡಿ ಹೊಸ ಸೇತುವೆ ಕಾಮಗಾರಿ ನಿರ್ವಹಿಸುವಲ್ಲಿ ಮಾರ್ಗ ಬದಲಾವಣೆ ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಮೇ 28ರಂದು ಬೆಳಗ್ಗೆ 10ರಿಂದ ಸಂಜೆ 6ರ ವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. 

ಎಲ್ಲೆಲ್ಲಿ?

ನಗರದ ಬಿಎಚ್‌ ರಸ್ತೆ, ಮೀನುಗಾರರ ಬೀದಿ, ಲೋಯರ್ ಹುತ್ತಾ, ಲಿಂಗಾಯತರ ಬೀದಿ, ಹೆಬ್ಬಂಡಿ, ಲಕ್ಷ್ಮೀಪುರ, ಐಟಿಐ, ಕಡದಕಟ್ಟೆ, ಹೆಬ್ಬಂಡಿ ತಾಂಡಾ, ವಿಶಾಲ್ ಮಾರ್ಕೆಟ್ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ಇರುವುದಿಲ್ಲ, ಗ್ರಾಹಕರು ಸಹಕರಿಸುವಂತೆ ಮೆಸ್ಕಾಂ ಎಂಇ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಭದ್ರಾವತಿಯಲ್ಲಿ ಜನ ಸಂಪರ್ಕ ಸಭೆ

ಭದ್ರಾವತಿ/  ನಗರದ ಉಂಬ್ಳೆ ಬೈಲ್​  ರಸ್ತೆಯ ಮೆಸ್ಕಾಂ ನಗರ ಉಪ ವಿಭಾಗದ ಕಚೇರಿಯಲ್ಲಿ ಮೇ 30 ರಂದು ಬೆಳಗ್ಗೆ 11ಕ್ಕೆ ವಿದ್ಯುತ್‌ ಸಂಬಂಧಿತ ಜನ ಸಂಪರ್ಕ ಸಭೆ ಹಮ್ಮಿಕೊಳ್ಳಲಾಗಿದೆ.  ನಗರ ಪ್ರದೇಶದ ವಿದ್ಯುತ್ ಗ್ರಾಹಕರು ಭಾಗವಹಿಸಿ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದಾಗಿದೆ ಎಂದು ನಗರ ಉಪ ಎಭಾಗದ ಎಇಇ ಪ್ರಕಟಣೆ ತಿಳಿಸಿದ್ದಾರೆ

ಆಕಾಶವಾಣಿಯಲ್ಲಿ ಫೋನ್​ ಇನ್ ಕಾರ್ಯಕ್ರಮ 

ಶಿವಮೊಗ್ಗ: ಕರ್ನಾಟಕ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ಗ್ರಾಹಕ ಸಂರಕ್ಷಣಾ ಕಾಯಿದೆ 2019ರ ಕುರಿತು ಗ್ರಾಹಕರಲ್ಲಿ ಜಾಗೃತಿ ಮೂಡಿಸಲು ಜೂನ್ 1ರಂದು ರಾತ್ರಿ 8 ರಿಂದ 8.30ರ ವರೆಗೆ ಆಕಾಶವಾಣಿಯಲ್ಲಿ ಫೋನ್-ಇನ್ ನೇರ ಪ್ರಸಾರ ಕಾರ್ಯಕ್ರಮ ಹಮ್ಮಿಕೊಂಡಿದೆ. ಗ್ರಾಹಕರು ಯಾವುದೇ ಪ್ರಶ್ನೆಗಳಿದ್ದಲ್ಲಿ ಅಂದು ದೂ.080-22370477 /22370488/223704997  ಕರೆ ಮಾಡಿ ಮಾಹಿತಿ ಪಡೆಯಬಹುದು. ಗ್ರಾಹಕರು ತಮ್ಮ ಪ್ರಶ್ನೆಗಳನ್ನು con- sumergrievances.queries@gmail.com ಇಮೇಲ್ ಮೂಲಕ ಮೇ 31ರ ಒಳಗೆ ಕಳುಹಿಸಬಹುದು.

ಶಿವಮೊಗ್ಗ ಮೂಲದ ಶುಭಾ ಉಡುಪಿಯಿಂದ ನಾಪತ್ತೆ! ಬೆಂಗಳೂರಿಗೆ ಹೋಗುತ್ತೇನೆ ಎಂದು ಹೊರಟವರು ಕಾಣೆ!

ಉಡುಪಿ/  ಶಿವಮೊಗ್ಗ ಮೂಲದ ಕೆ.ಶುಭಾ ಎಂಬವರು, ಉಡುಪಿಯಿಂದ ಬೆಂಗಳೂರಿಗೆ ಹೋಗುತ್ತೇನೆ ಎಂದು ಹೇಳಿ ಹೋದವರು ನಾಪತ್ತೆಯಾಗಿದ್ದಾರೆ.  ಈಕೆ ಬಹರೈನ್‌ನಲ್ಲಿ ಕೆಲಸ ಮಾಡಿಕೊಂಡಿದ್ದರು. ಅಲ್ಲಿಂದ ತಮ್ಮ ಗಂಡನ ಮನೆ ಇರುವ ಉಡುಪಿ ಗೋಪಾಲಪುರಕ್ಕೆ ಬಂದಿದ್ದರು. ಆನಂತರ ಬೆಂಗಳೂರಿಗೆ ಹೋಗುವುದಾಗಿ ಹೇಳಿ ಹೋಗಿದ್ದಾರೆ. ಬಳಿಕ ನಾಪತ್ತೆಯಾಗಿದ್ದಾರೆ. 

ಇವರ ಗುರುತು 5 ಅಡಿ ಎತ್ತರ, ಸಪೂರ ಶರೀರ, ಎಣ್ಣೆಗಪ್ಪು ಮೈಬಣ್ಣ, ಕೋಲು ಮುಖ ಹೊಂದಿದ್ದು ಕನ್ನಡ, ಮರಾಠಿ, ಇಂಗ್ಲಿಷ್ ಹಾಗೂ ಹಿಂದಿ ಭಾಷೆ ಮಾತ ನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಉಡುಪಿ ನಗರ ಪೊಲೀಸ್ ಠಾಣಾಧಿಕಾರಿ ಸಂಪರ್ಕಿಸಲು ಸೂಚಿಸಲಾಗಿದೆ.