Hybrid Kannada songs : ಮಲ್ನಾಡ್ ಹುಡುಗರ ಹೈಬ್ರೀಡ್ ಸಾಂಗ್ ಕೇಳಿದ್ರಾ?! ವೈರಲ್ ಆಗ್ತಿದೆ ಕಾಫಿನಾಡು ಚಂದು ಸ್ಟೈಲ್​ನ ಈ ವಿಡಿಯೋ

Hybrid Kannada Songs : Have you heard the hybrid song of Malnad boys?! This video of the coffee nadu chandu style is going viral

ಸೋಶಿಯಲ್​ ಮೀಡಿಯಾದ ದುನಿಯಾದಲ್ಲಿ ಟ್ಯಾಲೆಂಟ್​ಗಳಿಗೇ ತಮ್ಮ ಪ್ರತಿಭೆ ಅನಾವರಣಗೊಳಿಸಲು ಹೊಸ ಹೊಸ ವೇದಿಕೆ ಸಿಗುತ್ತಿದೆ. ಹಾಗಾಗಿಯೇ ಅದ್ಭುತ ಪ್ರತಿಭೆಗಳು ಸಖತ್​ ಸುದ್ದಿಯಾಗುತ್ತಿದ್ದಾರೆ. ಸದ್ಯ ಈ ಸಾಲಿಗೆ ಶಿವಮೊಗ್ಗ -ಭದ್ರಾವತಿಯ ಹುಡುಗರು ಸೇರಿದ್ಧಾರೆ. ಇಷ್ಟಕ್ಕೂ ವಿಷಯ ಏನಂದರೆ. ಮಲೆನಾಡಿನ ಹುಡುಗರು ಕಾಫಿನಾಡು ಚಂದುವಿನ ಸ್ಟೈಲ್​ನಲ್ಲಿಯೇ ಹೈಬ್ರೀಡ್​ ಸಾಂಗ್ ವೊಂದನ್ನ ರೆಡಿಮಾಡಿದ್ದಾರೆ. ಸದ್ಯ ಈ ಹಾಡು ವೈರಲ್ ಆಗುತ್ತಿದೆ. ಹಾಡಿನ ತುಣುಕುಗಳು ರೀಲ್ಸ್​ಗಳಲ್ಲಿ ಮೆಚ್ಚುಗೆ ಪಡೆದುಕೊಳ್ತಿದೆ.  ಕೌತುಕ... ಕೌತುಕ.. ಅಂತಾ ಶುರುವಾಗುವ ಹಾಡಿನ ಇಂಟ್ರಡಕ್ಷನ್​ನಲ್ಲಿಯೇ ಸಖತ್ ಕೌಂಟರ್​ ಡೈಲಾಗ್​ ಇದ್ದು ಮಜಾ ಕೊಡ್ತಿದೆ. 

Shivamogga district : ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಭೀಮನ ಕೋಣೆಯ ಕೆರೆಯಲ್ಲಿ ಈಜಲು ಹೋಗಿದ್ದ ಮೂವರು ಯುವಕರ ಪೈಕಿ ಓರ್ವ ನೀರುಪಾಲು

ಆನಂತರ ಆರಂಭವಾಗುವ ಐ ಲವ್ ಯು ಒಂದ್ಸಲ ಹಾಡನ್ನು ಥೇಟು ಕಾಫಿನಾಡು ಚಂದುವಿನ  ಸಿಂಗಿಂಗ್​ ಸ್ಟೈಲ್​ನಲ್ಲಿ ಬರೆಯಲಾಗಿದೆ. ಹೈಬ್ರೀಡ್ ಕನ್ನಡ ಸಾಂಗ್ಸ್ ಸಂಸ್ಥೆ ತನ್ನ ಮೊದಲ ಪ್ರಯತ್ನದಲ್ಲಿಯೇ ಸಕ್ಸಸ್ ಕಂಡಿದ್ದು, ಹಾಡು ಹಿಟ್ ಆಗ್ತಿದೆ.  ಹಾಡು  ಹೈಬ್ರೀಡ್​ ಕನ್ನಡ ಸಾಂಗ್ಸ್ ಯೂಟ್ಯೂಬ್ ಚಾನೆಲ್ ನಲ್ಲಿ ಪ್ಲೇ ಆಗ್ತಿದೆ.  ಭದ್ರಾವತಿಯ ಸಿದ್ದೇಶ್ , ನನ್​ ಮನಸ್ಸು ನಿನ್​ ಮ್ಯಾಲೆ ಅಂತಾ ಸಾಹಿತ್ಯ ಬರೆದಿದ್ಧಾರೆ. ಈ ಸಾಲುಗಳನ್ನು ಸಿಂಗರ್ ಜಾನ್ ಭಾರತ್ ಸೂಪರ್ ಹಾಡಿದ್ದಾರೆ.  ಡಿ ಮ್ಯೂಸಿಕ್ ನ ಗೋಪಿ ಆಚಾರ್ ಈ ಗೀತೆಗೆ ಮ್ಯೂಸಿಕ್​ ಕಂಪೋಸ್ ಮಾಡಿದ್ದು, ಹಾಡಂತು ಸಖತ್​  ಹಿಟ್ ಆಗ್ತಿದೆ. 

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com