Balebare ghat : 2 ತಿಂಗಳ ಕಾಲ ಬಂದ್ ಆಗಲಿದೆ ಬಾಳೆಬರೆ ಘಾಟಿ ಸಂಚಾರ? ಕಾರಣವೇನು ಗೊತ್ತಾ?

Malenadu Today

ಶಿವಮೊಗ್ಗ ಜಿಲ್ಲೆಯ ಪ್ರಮುಖ ಘಾಟಿ ತೀರ್ಥಹಳ್ಳಿ-ಕುಂದಾಪುರ ರಾಜ್ಯ ಹೆದ್ದಾರಿ -52 ರ ಬಾಳೆಬರೆ ಘಾಟ್ (Balebare ghat) 36.00 ರಿಂದ 38.00 ಕಿ.ಮೀ ಹಾಗೂ 40.50 ರಿಂದ 41.60 ಕಿ.ಮೀ ರಲ್ಲಿ ಎರಡು ಭಾಗಗಳಲ್ಲಿ1490 ಮೀ 1080 ಮೀ ಒಟ್ಟು 2570.00 ಮೀಟರ್ ಉದ್ದದ ಕಾಂಕ್ರೀಟ್ ಪೇವ್ ಮೆಂಟ್ ನಿರ್ಮಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಎರಡು ತಿಂಗಳ ಕಾಲ ಹೆದ್ದಾರಿ ಬಂದ್ ಆಗುವ ಸಾಧ್ಯತೆ ಇದೆ. ಈ ಸಂಬಂಧ ಪರ್ಯಾಯ ಮಾರ್ಗ ಹಾಗೂ ಸಂಚಾರ ನಿಲುಗಡೆಯ ಬಗ್ಗೆ ಜಿಲ್ಲಾಡಳಿತ ಮತ್ತು ಎಸ್​ಪಿ ಕಚೇರಿ ಮತ್ತು ಸಾರಿಗೆ ಕಚೇರಿಯ ನಡುವೆ ಪತ್ರ ವ್ಯವಹಾರ ನಡೆಯುತ್ತಿದೆ. 

ನಿರೀಕ್ಷೆಯಂತೆ  ಈ ಕಾಮಗಾರಿ ಇದೇ ಫೆಬ್ರವರಿ ತಿಂಗಳಿನಲ್ಲಿ ಆರಂಭವಾಗುವ ಸಾಧ್ಯತೆ ಇದ್ದು, ಈ ಸಂಬಂಧ ಜಿಲ್ಲಾಡಳಿತ ಘಾಟಿ ರಸ್ತೆಯಲ್ಲಿ ಸಂಚಾರ ನಿರ್ಬಂಧ ಹೇರುವ ಕುರಿತಾಗಿ ಪತ್ರವಹಿವಾಟು ನಡೆಸಿದೆ. ಪ್ರಮುಖವಾಗಿ ಕಾಂಕ್ರೀಟ್ ಪೇವ್ ಮೆಂಟ್ ನಿರ್ಮಾಣ ಕೆಲಸವನ್ನು ನಿರ್ದಿಷ್ಟ ಪಡಿಸಿದ 02 ತಿಂಗಳ ಸಮಯದೊಳಗೆ ಪೂರ್ಣಗೂಳಿಸಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗುವುದೆಂದು ಸಹಾಯಕ ಕಾರ್ಯಪಾಲಕ ಇಂಜನಿಯರ್ ಉಪವಿಭಾಗ ಹೊಸನಗರ ಇವರು ಜಿಲ್ಲಾಡಳಿತವನ್ನು ಕೋರಿದ್ಧಾರೆ. ಅಲ್ಲದೆ, ಈ ಸಂಬಂಧ ಜಿಲ್ಲಾಡಳಿತದಿಂದ ಶಿವಮೊಗ್ಗ ಎಸ್​ಪಿ ಕಚೇರಿಗೆ ಹಾಗೂ ಪ್ರಾದೇಶಿಕ ಸಾರಿಗೆ ಆಯುಕ್ತರಿಗೆ ಅಭಿಪ್ರಾಯ ಕೇಳಿ ಪತ್ರ ಬರೆಯಲಾಗಿದೆ.  

ಇನ್ನೂ ಕಾಂಕ್ರಿಂಟ್​ ಪೇವ್​ಮೆಂಟ್​  ಕಾಮಗಾರಿ ಹಿನ್ನೆಲೆಯಲ್ಲಿ ಘಾಟಿ ರಸ್ತೆಯಲ್ಲಿ 2 ತಿಂಗಳ ಕಾಲ ಸಂಚಾರ ನಿರ್ಬಂಧ ಹೇರುವ ಸಾಧ್ಯತೆ ಇದೆ.  ಇನ್ನೂ ಹೆದ್ಧಾರಿ ಬಂದ್ ಆದರೆ, ತೀರ್ಥಹಳ್ಳಿ ಮೂಲಕ ಕುಂದಾಪುರ ಕಡೆಗೆ ಹೋಗುವ ಹಾಗೂ ಉಡುಪಿಗೆ ಹೋಗುವ ವಾಹನಗಳು ಪರ್ಯಾಯ ಮಾರ್ಗವನ್ನು ಬಳಸಬೇಕಾಗುತ್ತದೆ. ಅಂದರೆ ಆಗುಂಬೆ ಘಾಟಿ ಮೂಲಕ ಸಾಗಬೇಕಾಗುತ್ತದೆ. ಇನ್ನೂ ಭಾರೀ ವಾಹನಗಳು ಕೊಲ್ಲೂರು ಘಾಟಿಯನ್ನು ಬಳಸಬೇಕಾಗುವ ಸಾಧ್ಯತೆ ಎದುರಾಗಬಹುದು. 

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com

Share This Article