ಕಳೆದು ಹೋಗಿದ್ದು ಮೊಬೈಲ್, ಖಾಲಿಯಾಗಿದ್ದು ಬ್ಯಾಂಕ್ ಅಕೌಂಟ್! 1,90,000 ರೂಪಾಯಿ ಎಗರಿಸಿದ್ದು ಹೇಗೆ?

An FIR has been lodged at CEN station in connection with the transfer of Rs 1,90,000 from the account of a man who lost his mobile phone.

ಕಳೆದು ಹೋಗಿದ್ದು ಮೊಬೈಲ್, ಖಾಲಿಯಾಗಿದ್ದು ಬ್ಯಾಂಕ್ ಅಕೌಂಟ್! 1,90,000 ರೂಪಾಯಿ ಎಗರಿಸಿದ್ದು ಹೇಗೆ?

 MALENADUTODAY.COM | SHIVAMOGGA  | #KANNADANEWSWEB

ಶಿವಮೊಗ್ಗ ಬಸ್​ಸ್ಯಾಂಡ್​ನಲ್ಲಿ ಕಳೆದು ಹೋದ ಮೊಬೈಲ್​ ಬಳಸಿ ಅಂದಾಜು ಒಂದು ಲಕ್ಷದ ತೊಂಬತ್ತು ಸಾವಿರ ರೂಪಾಯಿ ಅಕೌಂಟ್​ನಿಂದ ಕದ್ದ ಘಟನೆ ಬಗ್ಗೆ ಶಿವಮೊಗ್ಗ ಸಿಇಎನ್ ಪೊಲೀಸ್ ಸ್ಟೇಷನ್​ನಲ್ಲಿ (shivamogga cen police station) ಕೇಸ್ ಆಗಿದೆ

ನಡೆದಿದ್ದೇನು?

ದಿನಾಂಕ-20-02-2023 ರಂದು ಬೆಳಗ್ಗೆ ಶಿವಮೊಗ್ಗದ ಖಾಸಗಿ ಬಸ್ ನಿಲ್ದಾಣದಲ್ಲಿ ಇಲ್ಲಿಯ ನಿವಾಸಿಯೊಬ್ಬರು ತಮ್ಮ ಮೊಬೈಲ್ ಕಳೆದುಕೊಂಡಿದ್ದಾರೆ. ಈ ಬಗ್ಗೆ ಗೊತ್ತಾಗಿ ಕೆ.ಎಸ್.ಪಿ ಇಲಾಸ್ಟ್ ನಲ್ಲಿ ದೂರು ನಮೂದಿಸಿ, ಅದೇ ದಿನ ಸಂಜೆ ಬೇರೆ ಸಿಮ್​ ತೆಗೆದುಕೊಂಡಿದ್ದಾರೆ,  ಆದರೆ ಬ್ಯಾಂಕ್ ಗೆ ಲಿಂಕ್ ಮಾಡಿಕೊಂಡಿದ್ದ  ಸಿಮ್ ಆಕ್ಟಿವೇಟ್ ಮಾಡಿ ಬಳಸಲು ಆರಂಭಿಸಿದ್ದಾರೆ. 

ಇದರ ನಡುವೆ  ದಿನಾಂಕ-21-02-2023 ರಿಂದ ದಿನಾಂಕ-22-02-2023 ರ ವರೆಗೆ ಯಾರೋ ಅಪರಿಚಿತರು ಪಿರ್ಯಾದುದಾರರ ಮೊಬೈಲ್ ಮತ್ತು ಮೊಬೈಲ್‌ ನಂಬರ್ ದುರ್ಬಬಳಕೆ ಮಾಡಿಕೊಂಡು ದೂರುಕೊಟ್ಟವರ ಬ್ಯಾಂಕ್‌ ಖಾತೆಯಿಂದ ಹಂತ ಹಂತವಾಗಿ 1,90,900/- ರೂ. ಹಣವನ್ನು ವರ್ಗಾವಣೆ ಮಾಡಿಕೊಂಡಿದ್ದಾರೆ.