ಶಿವಮೊಗ್ಗದಲ್ಲಿ ಅಬ್ಬರಿಸಿದ ಮಾಜಿ ಸಿಎಂ ಕುಮಾರಸ್ವಾಮಿ! ಜೆಡಿಎಸ್​ ಪಂಚರತ್ನ ಯಾತ್ರೆ ಯಶಸ್ವಿ! ಅಡಿಕೆ, ಅಕ್ಷರ, ಆಧಾರರ ಭರವಸೆ! ಪೂರ್ತಿ ಬಹುಮತಕ್ಕೆ ಕೋರಿಕೆ

 MALENADUTODAY.COM | SHIVAMOGGA  | #KANNADANEWSWEB

ಶಿವಮೊಗ್ಗದಲ್ಲಿ ಜೆಡಿಎಸ್​ ಪಂಚರತ್ನ ಯಾತ್ರೆ ಯಶಸ್ವಿ ಕಂಡಿದೆ, ನಿನ್ನೆ ಶಿವಮೊಗ್ಗ ಜಿಲ್ಲೆಯಲ್ಲಿ 4 ನೇ ದಿನಕ್ಕೆ ಕಾಲಿಟ್ಟ ಜೆಡಿಎಸ್ ಪಂಚರತ್ನ ರಥಯಾತ್ರೆ (Pancharatna rathayatre)   ತೀರ್ಥಹಳ್ಳಿ ವಿಧಾನಸಭಾ ಕ್ಷೆತ್ರವನ್ನು (Assembly Constituency) ಸುತ್ತಾಡಿದೆ.  ಹುಂಚದಕಟ್ಟೆಯಿಂದ ಆರಂಭವಾದ ಯಾತ್ರೆಯಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ,  ಜೆಡಿಎಸ್ ಅಭ್ಯರ್ಥಿ ಯಡೂರು ರಾಜಾರಾಮ್ ಪರ ಮತಯಾಚನೆ ಮಾಡಿದ್ರು. 

ನಾರಾಯಣ ಗುರುಪೀಠದಲ್ಲಿ ಜನರೊಂದಿಗೆ ಸಂವಾದ ನಡೆಸಿದ ಹೆಚ್ ಡಿಕೆ,  ಹುಂಚ ಪದ್ಮಾವತಿ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ್ರು. ನಂತರ ಆರಗದಲ್ಲಿ ಸಭೆ, ತೀರ್ಥಹಳ್ಳಿ ಸುವರ್ಣ ಸಹಕಾರ ಭವನದಲ್ಲಿ ಸಮಾವೇಶ ಮುಗಿಸಿಕೊಂಡು, ಭೀಮನಕಟ್ಟೆ ಮಠಕ್ಕೆ ತೆರಳಿದ್ರು. ಅಲ್ಲಿಂದ ಮೇಗರವಳ್ಳಿಯಲ್ಲಿ ರೈತರ ಸಂಕಷ್ಟ ಆಲಿಸಿ, ಕಮ್ಮರಡಿಯಲ್ಲಿ ಸಭೆ ನಡೆಸಿದ್ರು. ನಂತರ ಶೃಂಗೇರಿಗೆ ತೆರಳಿದ್ರು. ಇದರ ನಡುವೆ ಅಡಿಕೆ ಬೆಳೆಗಾರರ ಅಹವಾಲು ಆಲಿಸಿದ್ರು. 

Malenadu Today

ತೀರ್ಥಹಳ್ಳಿಯಲ್ಲಿ ಹೆಚ್​.ಡಿ ಕುಮಾರಸ್ವಾಮಿಯವರ (@hd_kumaraswamy)ಮಾತುಗಳು 

  • ಮುಂಗಾರಿನಲ್ಲಿ ಬಿತ್ತನೆಗೆ ಪ್ರತಿ ಎಕೆರೆಗೆ 10 ಸಾವಿರ 10 ಎಕೆರೆ ವರೆಗೆ ಉಚಿತವಾಗಿ ಧನ ಸಹಾಯ ಮಾಡುವೆ , ಅರ್ಜಿ ಹಾಕುವ ಅಗತ್ಯವಿಲ್ಲ ನೇರವಾಗಿ ನಿಮ್ಮ ಖಾತೆಗೆ ಹಣ ಬರುತ್ತದೆ ,ಸಣ್ಣ ಸಣ್ಣ ಉದ್ಯೋಗ ಮಾಡುವ ಯುವಕರಿಗೆ ಹೆಣ್ಣು ಮಕ್ಕಳಿಗೆ ಶೇ. ರಷ್ಟು 75 ಸಾವಿರ ಸಬ್ಸಿಡಿ ಹಣ ನೀಡುವೆ ಇದರಿಂದ ಸ್ವಾಭಿಮಾನ ಬದುಕನ್ನ ನಡೆಸಬಹುದು
  • ಎಲ್‌ಕೆಜಿಯಿಂದ 12ನೇ ತರಗತಿವರೆಗೆ ಉಚಿತ ಶಿಕ್ಷಣ, 40 ಲಕ್ಷವರೆಗೆ ಉಚಿತ ಆರೋಗ್ಯ ಚಿಕಿ​ತ್ಸೆ, ಯುವಕರ ಉದ್ಯೋಗಕ್ಕೆ ಶೇ.75 ಸಬ್ಸಿಡಿ ಸಾಲ, ಸೂರಿಲ್ಲದವರಿಗೆ ಉಚಿತ ಮನೆ, 65 ವರ್ಷ ದಾಟಿದವರಿಗೆ ಮಾಸಿಕ .5 ಸಾವಿರ ಹಾಗೂ .2500 ವಿಧವಾವೇತನ ನೀಡುವುದಲ್ಲದೇ ಕೇವಲ ಮೂರು ತಿಂಗಳಲ್ಲಿ ರೈತರ ಬಗರ್‌ಹುಕುಂ ಮತ್ತು ಮುಳುಗಡೆ ಸಂತ್ರಸ್ಥರ ಸಮಸ್ಯೆಯನ್ನೂ ಬಗೆಹರಿಸುತ್ತೇವೆ
  • ಮನೆ ಇಲ್ಲದವರಿಗೆ ಉತ್ತಮ ಮನೆಗಳನ್ನ ಕಟ್ಟಿಕೊಡುವೆ ಬಡಾವಣೆ ನಿರ್ಮಿಸಿ ನೆರವಾಗುವೆ, ಶರಾವತಿ ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡಬೇಕಿದೆ, ತರಕಾರಿ ತೆದುಕೊಳ್ಳುವಾಗ ಹಲವು ಭಾರೀ ಯೋಚನೆ ಮಾಡುತ್ತೀರಾ ಹಾಗೆ ಶಾಸಕರನ್ನ ಯೋಚನೆ ಮಾಡಿ ಆಯ್ಕೆ ಮಾಡಿ 
  • ಅಡಿಕೆ ಬೆಳೆಗೆ ಎಲೆ ಚುಕ್ಕೆ ರೋಗ ಸೇರಿದಂತೆ ಉತ್ತಮ ಬೆಳೆ ಬೆಳೆಯಲು ಯೋಜನೆ ರೂಪಿಸಿರುವೆ, ಬಿಜೆಪಿಯಿಂದ ಅಡಿಕೆ ಬೆಳೆಗಾರರನ್ನ ಮುಗಿಸಲು ಪ್ರಯತ್ನ ನಡೆಯುತ್ತಿದ, ಭೂತಾನ್​ ನಿಂದ ಅಡಿಕೆ ಅಮದು ಮಾಡಿಕೊಂಡು ನಮ್ಮ ರಾಜ್ಯದ ಅಡಿಕೆ ಬೆಳೆಗಾರರಿಗೆ ಅನ್ಯಾಯ ಮಾಡಲಾಗುತ್ತಿದೆ, ಅಡಿಕೆ ಬೆಳೆ ರೀಸರ್ಚ್ ಸೆಂಟರ್ ಗೆಸ್ಟ್  ಹೌಸ್ ರೀತಿ ಮಾಡಿದ್ದಾರೆ,  ಪ್ರಜ್ಞಾವಂತರು ಇರುವ ತಾಲ್ಲೂಕು ಇದು ಪ್ರಾಮಾಣಿಕರಿಗೆ ಬೆಂಬಲಿಸಿ,
  • ಭ್ರಷ್ಟಾಚಾರ ಮುಕ್ತ ಮಾಡುತ್ತೇವೆ ಎಂದಿದ್ದಾರೆ ಅಮಿತ್ ಷಾ, ಆಡಳಿತ ನಡೆಸುತ್ತಿರುವುದು ಬಿಜೆಪಿ ಹಾಗಾದರೇ ಭ್ರಷ್ಟಾಚಾರ ಬಿಜೆಪಿ ಮುಕ್ತಾ ಮಾಡುತ್ತಾರಾ? ಸ್ಯಾಂಟ್ರೋ ರವಿ ಇಂದು ಅರಾಮಾಗಿದ್ದಾನೆ ಇಂಥ ಮಧ್ಯವರ್ತಿ ಬೆಂಬಲಕ್ಕೆ ಬಿಜೆಪಿ ನಿಂತಿದೆ 
  • ಈ ಮೊದಲು ಬಿಜೆಪಿಯವರು ನರೇಂದ್ರ ಮೋದಿ(Narendra Modi), ಅಮಿತ್‌ ಶಾ(Amit shah) ನೋಡಿ ಮತ ಕೊಡಿ ಎನ್ನುತ್ತಿದ್ದರು ಈಗ ಯಡಿಯೂರಪ್ಪರಿಗೆ ರಾಜಕೀಯದಿಂದ ನಿವೃತ್ತಿ ಕೊಡಿಸಿ,  ಅವರ ಮುಖ ನೋಡಿ ಮತ ಹಾಕಿ ಎನ್ನುತ್ತಿದ್ದಾರೆ  
  • ದೇವೇಗೌಡರ ಕುಟುಂಬದವರು ಎಲ್ಲರೂ ರಾಜಕೀಯ ಮಾಡುವುದಾದರೆ ಮನೆ ಕೆಲಸ ಮಾಡುವವರು ಯಾರು ಎಂದು ಅಮಿತ್ ಶಾ ಕೇಳ್ತಾರೆ,  ಪ್ರಶ್ನೆ ಯಡಿಯೂರಪ್ಪ ಅವರ ಇಬ್ಬರು ಮಕ್ಕಳು ರಾಜಕೀಯಕ್ಕೆ ಬಂದಿದ್ದಾರೆ. ಅವರ ಮನೆಯ ಕೆಲಸವನ್ನು ಯಾರು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದ್ರು
  • ಬಿಜೆಪಿಯವರು ಸಿದ್ಧರಾಮಯ್ಯ ಆಡಳಿತಾವಧಿಯಲ್ಲಿ 800 ಕೋಟಿ ಭ್ರಷ್ಟಾಚಾರ ಆಗಿದೆ ಎನ್ನುತ್ತಾರೆ ಮೊದಲೇ ಈ ಬಗ್ಗೆ ತನಿಖೆ ಮಾಡಬಹುದಿತ್ತು, ಆದರೆ ಮಾಡಲಿಲ್ಲ , ಭ್ರಷ್ಟಾಚಾರ ಮುಕ್ತ ರಾಜ್ಯ ಮಾಡ್ತೀವಿ ಎಂದು ಹೇಳುವ ಬಿಜೆಪಿಯವರು ಸ್ಯಾಂಟ್ರೂ ರವಿಯನ್ನು ಬಂಧಿಸಿ ರಾಜಾತೀತ್ಯ ನೀಡುತ್ತಿದ್ದಾರೆ ಎಂದೂ ಟೀಕಿಸಿದರು.
  • ಸಿಟಿ ರವಿ ನನಗೆ ಲಾಟರಿ ಎಂದಿದ್ದಾರೆ ಹೌದು ನಾನು ಲಾಟರಿ ಆದರೆ ಲೂಟಿ ರಾಜಕಾರಣಿ ಅಲ್ಲಾ, ಪೂರ್ಣ ಬಹುಮತದೊಂದಿಗೆ ಈ ಬಾರಿ ನನಗೆ ಒಂದು ಅವಧಿಗೆ ಅವಕಾಶ ಕೊಡಿ. ಜನಪರವಾಗಿ ಹೇಗೆ ಕೆಲಸ ಮಾಡಬಹುದು ಎಂಬುದನ್ನು ಮಾಡಿ ತೋರಿಸುತ್ತೇನೆ.
  • ಬೇರೆ ಪಕ್ಷದ ಜೊತೆ ಸೇರಿ 10, 20 ತಿಂಗಳು ಸಿಗುವ ಅಧಿಕಾರದಲ್ಲಿ ಏನೂ ಮಾಡಲು ಸಾಧ್ಯವಿಲ್ಲ, ಪಕ್ಷದ ಪ್ರಾಮಾಣಿಕ ಅಭ್ಯರ್ಥಿ ಯಡೂರು ರಾಜಾರಾಂ(Yadooru rajaram)  ರನ್ನು ಗೆಲ್ಲಿಸಿಕೊಡಿ

Malenadu Today

Malenadu Today
Malenadu Today

Leave a Comment

ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು