ಹೊಸನಗರ ತಾಲ್ಲೂಕು ಭಾಗದಲ್ಲಿ ಪವರ್ ಕಟ್! ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯ? ಇಲ್ಲಿದೆ ವಿವರ
Power cut in Hosanagar taluk tomorrow! Where is the power cut? Here is the detail
Shivamogga Apr 4, 2024 ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನ ಆಯ್ದ ಭಾಗಗಳಲ್ಲಿ ನಾಳೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ತಿಳಿಸಿದೆ. ಈ ಸಂಬಂಧ ಮೆಸ್ಕಾಂ ವಿಭಾಗ ಪ್ರಕಟಣೆ ನೀಡಿದೆ.
ರಾಷ್ಟ್ರೀಯ ಹೆದ್ದಾರಿಯಗಲೀಕರಣ ಕಾಮಗಾರಿ ಹಾಗೂ 33 ಕೆವಿ ವಿದ್ಯುತ್ಲೇನಿನ ದುರಸ್ತಿ ಕಾಮಗಾರಿ ಪ್ರಯುಕ್ತ ಏಪ್ರಿಲ್ 5ರ ಶುಕ್ರವಾರ ಬೆಳಗ್ಗೆ 10 ಗಂಟೆಯಿಂದ ಸಂಜೆ 5:00 ವರೆಗೆ ವಿದ್ಯುತ್ ಪ್ರಸರಣದಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ
ಸಾಗರ ಹೊಸನಗರ ಮಾರ್ಗ ನಿರ್ವಹಣೆ ಹಾಗೂ ಉಪ ವಿದ್ಯುತ್ ವಿತರಣಾ ಕೇಂದ್ರದ ನಿರ್ವಹಣೆ ಪ್ರಯುಕ್ತ ಸಾಗರ ಹೊಸನಗರ ವಿದ್ಯುತ್ ಮಾರ್ಗದ ಜೇನಿ ಮಾರುತಿಪುರ ರಾಮಚಂದ್ರಪುರ ಮೇಲಿನ ಬೆಸಿಗೆ ಸೊನಲೆ ಗ್ರಾಮ ಪಂಚಾಯತಿ ವ್ಯಾಪ್ತಿ ಹಾಗೂ ಹೊಸನಗರ ಪಟ್ಟಣ ವ್ಯಾಪ್ತಿಯಲ್ಲಿ ವಿದ್ಯುತ್ ಪ್ರಸರಣದಲ್ಲಿ ಅಡಚಣೆ ಉಂಟಾಗಲಿದೆ ಈ ಸಂಬಂಧ ಗ್ರಾಹಕರು ಸಹಕರಿಸಬೇಕೆಂದು ಮೆಸ್ಕಾಂ ಹೊಸನಗರ ಉಪ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರು ತಿಳಿಸಿ ದ್ದಾರೆ