ರೈಲ್ವೆ ಪ್ರಯಾಣಿಕರ ಗಮನಕ್ಕೆ/ ಡಿಸೆಂಬರ್ 5 &6 ರಂದು ಬೆಂಗಳೂರು/ಶಿವಮೊಗ್ಗ ಜನ ಶತಾಬ್ದಿ ಸೇರಿ ಹಲವು ಟ್ರೈನ್​ಗಳ ಸಂಚಾರದಲ್ಲಿ ಬದಲಾವಣೆ

ರೈಲ್ವೆ ಪ್ರಯಾಣಿಕರ ಗಮನಕ್ಕೆ/ ಡಿಸೆಂಬರ್​ 5 & 6 ಆಯ್ದ ಟ್ರೈನ್​ಗಳ ಸಂಚಾರದಲ್ಲಿ ವ್ಯತ್ಯಯವಾಗಲಿದೆ, ಕೆಲವೊಂದು ಟ್ರೈನ್​ಗಳನ್ನು ಬಾಗಶಃ ರದ್ದು ಮಾಡಲಾಗಿದೆ ಮತ್ತೆ ಕೆಲವು ಟ್ರೈನ್​ಗಳ ಸಂಚಾರವನ್ನು ರಿಷೆಡ್ಯೂಲ್ ಮಾಡಲಾಗಿದೆ

ರೈಲ್ವೆ ಪ್ರಯಾಣಿಕರ ಗಮನಕ್ಕೆ/ ಡಿಸೆಂಬರ್ 5 &6 ರಂದು ಬೆಂಗಳೂರು/ಶಿವಮೊಗ್ಗ ಜನ ಶತಾಬ್ದಿ ಸೇರಿ ಹಲವು ಟ್ರೈನ್​ಗಳ ಸಂಚಾರದಲ್ಲಿ ಬದಲಾವಣೆ

ನೈಋತ್ಯ ರೈಲ್ವೆ ರೈಲ್ವೆ ಇಲಾಖೆಯು ಎರಡು ದಿನಗಳ ಮಟ್ಟಿಗೆ ವಿವಿಧ ರೈಲುಗಳ ಸಂಚಾರಕ್ಕೆ ಸಂಬಂಧಿಸಿದಂತೆ ಕೆಲವೊಂದು ಬದಲಾವಣೆ ಮಾಡಿದೆ. ಕೆಲವು ರೈಲುಗಳ ಸಂಚಾರ ಸಮಯವನ್ನು ರಿಷೆಡ್ಯೂಲ್​ ಮಾಡಲಾಗಿದೆ. ಮತ್ತೆ ಕೆಲವು ರೈಲುಗಳ ಸಂಚಾರವನ್ನು ಭಾಗಶಃ ರದ್ದುಗೊಳಿಸಲಾಗಿದೆ.

ಗುಡ್ ನ್ಯೂಸ್​ : ಕಾಶಿಪುರ ರೈಲ್ವೆ ಅಂಡರ್​ ಪಾಸ್​ ಕಾಮಗಾರಿ ಮುಕ್ತಾಯ ಹಂತಕ್ಕೆ

ಇನ್ನೂ ಕೆಲವು ರೈಲುಗಳ ಸಂಚಾರವನ್ನು ರೆಗ್ಯಲೆಟ್ ಮಾಡಲಾಗಿದೆ. ಕಡೂರು ರೈಲ್ವೆ ನಿಲ್ದಾಣದಲ್ಲಿ ಡ್ಯುಯಲ್​ ವಿಡಿಯು ಸಿಸ್ಟಮ್​ನ್ನು ಅಳವಡಿಸಲಾಗುತ್ತಿದೆ. (hot standby Dual VDU system at Kadur station) ರೈಲ್ವೆ ಇಲಾಖೆಯ  non-Interlocking worksನ ಕಾರಣದಿಂದಾಗಿ ಇದೇ ಡಿಸೆಂಬರ್​  ಡಿಸೆಂಬರ್ 5 ಮತ್ತು 6 ರಂದು 2 ದಿನಗಳ ಕಾಲ ನಿಗದಿತ ರೈಲುಗಳ ಸಂಚಾರದಲ್ಲಿ ವ್ಯತ್ಯಾಸವಾಗಲಿದೆ.ಯಾವ್ಯಾವ ರೈಲುಗಳ ಸಂಚಾರದಲ್ಲಿ ಏನೇನು ವತ್ಯಾಸ ಎಂಬುದರ ವಿವರ ಈ ಕೆಳಕಂಡಂತೆ ಇದೆ.

ಇದನ್ನು ಸಹ ಓದಿ : BREAKING NEWS : ಚುನಾವಣಾ ಕಣದಿಂದ ಹಿಂದೇ ಸರಿದರಾ ಡಾ.ಧನಂಜಯ್​ ಸರ್ಜಿ/ ಸದ್ಯದಲ್ಲಿಯೇ ಬಿಜೆಪಿಗೆ

 ಭಾಗಶಃ ರದ್ದತಿ:

1. ಯಶವಂತಪುರದಿಂದ ಹೊರಡುವ  ರೈಲು ಸಂಖ್ಯೆ 16240 ಯಶವಂತಪುರ - ಚಿಕ್ಕಮಗಳೂರು ಡೈಲಿ ಎಕ್ಸ್ಪ್ರೆಸ್ ನ ಸಂಚಾರವನ್ನು  06.12.2022 ರಂದು ಕಡೂರು-ಚಿಕ್ಕಮಗಳೂರು ನಡುವೆ ಭಾಗಶಃ ರದ್ದುಗೊಳಿಸಲಾಗುವುದು ಮತ್ತು ರೈಲು ಕಡೂರಿನಲ್ಲಿ  ನಿಲುಗಡೆಯಾಗಲಿದೆ.

2. ಶಿವಮೊಗ್ಗ ನಗರದಿಂದ ಹೊರಡುವ  ರೈಲು ಸಂಖ್ಯೆ 07365 ಶಿವಮೊಗ್ಗ ಟೌನ್ - ಚಿಕ್ಕಮಗಳೂರು ಡೈಲಿ ಪ್ಯಾಸೆಂಜರ್ ಸ್ಪೆಷಲ್ ಟ್ರೈನ್​ ಸಂಚಾರವೂ 06.12.2022 ರಂದು  ಬೀರೂರು-ಚಿಕ್ಕಮಗಳೂರು ನಡುವೆ ಭಾಗಶಃ ರದ್ದಾಗಲಿದೆ ಮತ್ತು ಟ್ರೈನ್​ ಬೀರೂರಿನಲ್ಲಿ ನಿಲ್ಲಲಿದೆ.

ದಿವಂಗತ ಸಾರೆಕೊಪ್ಪ ಬಂಗಾರಪ್ಪರವರ ಅಪರೂಪದ ವಿಡಿಯೋ ನೋಡಿ

ನಿಯಂತ್ರಣ:

  1. ರೈಲು ಸಂಖ್ಯೆ 12782 ಹಜರತ್ ನಿಜಾಮುದ್ದೀನ್ - ಮೈಸೂರು ಸಾಪ್ತಾಹಿಕ ಸೂಪರ್​ ಫಾಸ್ಟ್​  ಎಕ್ಸ್ಪ್ರೆಸ್ ನ ಸಂಚಾರ 05.12.2022  ರಂದು ಒಟ್ಟಾರೆ  30 ನಿಮಿಷಗಳ ಕಾಲ ವಿಳಂಭವಾಗಲಿದೆ
  2. 06.12.2022 ರಂದು ತುಮಕೂರಿನಿಂದ ಹೊರಡುವ ರೈಲು ಸಂಖ್ಯೆ 16567 ತುಮಕೂರು - ಶಿವಮೊಗ್ಗ ಟೌನ್ ಡೈಲಿ ಎಕ್ಸ್ಪ್ರೆಸ್ ಸಂಚಾರವು ಸಹ  30 ನಿಮಿಷಗಳ ಕಾಲ ವಿಳಂಭವಾಗಲಿದೆ
  3. ಮೈಸೂರಿನಿಂದ ಹೊರಡುವ  ರೈಲು ಸಂಖ್ಯೆ 16535 ಮೈಸೂರು - ಸೋಲಾಪುರ ಡೈಲಿ ಗೋಲ್​ಗುಂಬಜ್​  ಎಕ್ಸ್ಪ್ರೆಸ್ ನ ಸಂಚಾರದ ಒಟ್ಟಾರೆ ಸಮಯದಲ್ಲಿ ಸಹ 06.12.2022 ರಂದು  ಒಟ್ಟಾರೆ 30 ನಿಮಿಷಗಳ ಕಾಲ ವಿಳಂಬವಾಗಲಿದೆ
  4. ಮಂಗಳೂರು ಜಂಕ್ಷನ್ನಿಂದ  ಹೊರಡುವ ರೈಲು ಸಂಖ್ಯೆ 07378 ಮಂಗಳೂರು ಜಂಕ್ಷನ್ - ವಿಜಯಪುರ ಡೈಲಿ ಎಕ್ಸ್ಪ್ರೆಸ್ ಸಂಚಾರದ ಒಟ್ಟಾರೆ ಸಮಯದಲ್ಲಿ ದಿನಾಂಕ 06.12.2022 ರಂದು  30 ನಿಮಿಷಗಳ ಕಾಲ ವಿಳಂಬವಾಗಲಿದೆ.

ಮೊದಲು 12 ನಂತರ 4 ಆನೆಗಳು ಉತ್ತರ ಭಾರತಕ್ಕೆ ಶಿಫ್ಟ್​, ಈಗ 14 ಆನೆ ಮಧ್ಯಪ್ರದೇಶಕ್ಕೆ ರವಾನಿಸಲು ಸಿದ್ಧತೆ! ಸಾಕಾನೆ ಸ್ಥಳಾಂತರದ ಹಿಂದಿರೋ ಮಸಲತ್ತು ಆದರೂ ಏನು?

 ಮರುನಿಗದಿ 

  •  1. ಕೆಎಸ್ಆರ್ ಬೆಂಗಳೂರಿನಿಂದ ಹೊರಡುವ  ರೈಲು ಸಂಖ್ಯೆ 12089 ಕೆಎಸ್ಆರ್ ಬೆಂಗಳೂರು - ಶಿವಮೊಗ್ಗ ಟೌನ್ ಡೈಲಿ ಜನ್ ಶತಾಬ್ದಿ ಸಂಚಾರದ ಅವಧಿಯನ್ನು ಎಕ್ಸ್ಪ್ರೆಸ್ ದಿನಾಂಕ 06.12.2022 ರಂದು  120 ನಿಮಿಷಗಳ ಕಾಲ ಮರುನಿಗದಿಪಡಿಸಲಾಗಿದೆ
  •  2. ಎಸ್ಎಸ್ಎಸ್ ಹುಬ್ಬಳ್ಳಿಯಿಂದ ಹೊರಡುವ  ರೈಲು ಸಂಖ್ಯೆ 16214 ಎಸ್ಎಸ್ಎಸ್ ಹುಬ್ಬಳ್ಳಿ - ಅರಸೀಕೆರೆ ಡೈಲಿ ಎಕ್ಸ್ಪ್ರೆಸ್​ನ ಸಂಚಾರದ ಅವಧಿಯನ್ನು 06.12.2022 ರಂದು  90 ನಿಮಿಷಗಳ ಕಾಲ ಮರುಹೊಂದಿಸಲಾಗುವುದು.

|King Cobra new research update | ಸರ್ಪರಾಜನ ಬಗ್ಗೆ ಹೊರಬಿತ್ತು ರಣರೋಚಕ ಸಂಶೋಧನೆ

 II. ರೈಲುಗಳ ಮರುನಿಗದಿಪಡಿಸುವಿಕೆ

ಅರಸೀಕೆರೆ ಮತ್ತು ಬಾಣಾವರ ನಡುವೆ ನಡೆಯಲಿರುವ ಕಾಮಗಾರಿ ಹಿನ್ನೆಲೆ ಲೈನ್​ ಬ್ಲಾಕ್​ ಆಗುತ್ತಿರುವ ಕಾರಣಕ್ಕಾಗಿ ಈ ಕೆಳಗಿನ ರೈಲುಗಳನ್ನು ಮರುನಿಗದಿಗೊಳಿಸಲಾಗಿದೆ.

 1. ಅರಸೀಕೆರೆಯಿಂದ ಹೊರಡುವ  ರೈಲು ಸಂಖ್ಯೆ 16213 ಅರಸೀಕೆರೆ - ಎಸ್ಎಸ್ಎಸ್ ಹುಬ್ಬಳ್ಳಿ ಎಕ್ಸ್ಪ್ರೆಸ್ ರೈಲಿನ ಸಂಚಾರದ ಅವಧಿಯನ್ನು 04.12.2022 ಮತ್ತು 11.12.2022 ರಂದು  30 ನಿಮಿಷಗಳ ಕಾಲ  ರಿಷೆಡ್ಯೂಲ್​ ಮಾಡಲಾಗಿದೆ.
 2. 05.12.2022 ಮತ್ತು 12.12.2022 ರಂದು ಎಸ್ಎಸ್ಎಸ್ ಹುಬ್ಬಳ್ಳಿಯಿಂದ ಹೊರಡುವ ರೈಲು ಸಂಖ್ಯೆ 16214 ಎಸ್ಎಸ್ಎಸ್ ಹುಬ್ಬಳ್ಳಿ - ಅರಸೀಕೆರೆ ಎಕ್ಸ್ಪ್ರೆಸ್ ರೈಲನ್ನು 60 ನಿಮಿಷಗಳ ಕಾಲ ರಿಷೆಡ್ಯೂಲ್​ ಮಾಡಲಾಗುತ್ತಿದೆ.
ಇನ್ನಷ್ಟು ಸುದ್ದಿಗಳಿಗಾಗಿ : ನಮ್ಮ ವಾಟ್ಸ್ಯಾಪ್ ಗ್ರೂಪ್​ಗೆ ಕ್ಲಿಕ್ ಮಾಡಿ  : Whatsapp link