ಶಿವಮೊಗ್ಗ ನಗರದಲ್ಲಿ ಆರಂಭವಾಗುತ್ತಿದೆ ಎದೆಹಾಲಿನ ಬ್ಯಾಂಕ್!

Breast milk bank to be set up in Shivamogga

ಶಿವಮೊಗ್ಗ ನಗರದಲ್ಲಿ ಆರಂಭವಾಗುತ್ತಿದೆ ಎದೆಹಾಲಿನ ಬ್ಯಾಂಕ್!

SHIVAMOGGA|  Dec 18, 2023  | ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ಮತ್ತು ಸರ್ಜಿ ಆಸ್ಪತ್ರೆಗಳ ಸಮೂಹದ ಸಹ ಯೋಗದೊಂದಿಗೆ ಶಿವಮೊಗ್ಗದಲ್ಲಿರುವ ಸರ್ಜಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಎದೆಹಾಲಿನ ಬ್ಯಾಂಕ್​ನ್ನ ಓಪನ್ ಮಾಡಲಾಗಿದೆ. ಇದೇ ತಿಂಗಳ 20 ರಂದು ಬೆಳಗ್ಗೆ ಈ ಬ್ಯಾಂಕ್ ಅಧಿಕೃತವಾಗಿ ಓಪನ್ ಆಗಲಿದೆ.  ಈ ಸಂಬಂಧ  ಇವತ್ತು ಡಾ.ಧನಂಜಯ್ ಸರ್ಜಿ ಸುದ್ದಿಗೋಷ್ಟಿ ನಡೆಸಿ ಮಾಹಿತಿ ನೀಡಿದ್ರು.  

ಡಾ.ಧನಂಜಯ್ ಸರ್ಜಿ

ಅಮೃತ ಬಿಂದು ಹೆಸರಿನಲ್ಲಿ ತಾಯಂದಿರ ಎದೆ ಹಾಲಿನ ಬ್ಯಾಂಕ್‌ನ್ನು ಸ್ಥಾಪಿಸಲಾಗುವುದು ಎಂದು ಆಸ್ಪತ್ರೆಯ ವೈದ್ಯ ಡಾ.ಧನಂಜಯ ಸರ್ಜಿ  ತಿಳಿಸಿದ್ದಾರೆ. ಅವಧಿಗೆ ಮುಂಚೆ ಹುಟ್ಟಿದ ಮಗುವಿಗೆ ಮತ್ತು ತೂಕ ಕಡಿಮೆ ಇರುವ ಮಗುವಿಗೆ ಹಾಲಿನ ಅವಶ್ಯಕತೆ ಹೆಚ್ಚಾಗಿರುತ್ತದೆ. ಅನೇಕ ಸಂದರ್ಭಗಳಲ್ಲಿ ಮಗುವಿಗೆ ತಾಯಿಯ ಹಾಲು ಸಿಗುವುದಿಲ್ಲ. ಇಂತಹ ಸಂದರ್ಭದಲ್ಲಿ ಮಗುವಿನ ಬೆಳೆವಣಿಗೆ ಕುಂಠಿತವಾಗುತ್ತದೆ. ಇದನ್ನು ಮನಗಂಡು ಎದೆಹಾಲನ್ನು ಸಂರಕ್ಷಿಸಿ ಪಾಶ್ಚಾತ್ತೀಕರಿಸಿ ಅದನ್ನು ಮಗುವಿಗೆ ನೀಡಿದರೆ, ಮಗುವಿನ ಆರೋಗ್ಯ ದೃಷ್ಠಿಯಿಂದ ಅನುಕೂಲವಾಗುತ್ತದೆ. ಎದೆಹಾಲು ಸೂಕ್ತ ಸಮಯದಲ್ಲಿ ಮಕ್ಕಳಿಗೆ ಸಿಗದೇ ಇರುವುದು ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆ ಅಥವಾ ಮೆದುಳಿನ ಬೆಳವಣಿಗೆ  ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆಗಳಿವೆ. 

READ : ಅಡಿಕೆಯ ಇವತ್ತಿನ ಮಾರುಕಟ್ಟೆ ರೇಟ್ ಏಷ್ಟಿದೆ ಗೊತ್ತಾ? ಕನಿಷ್ಠ , ಗರಿಷ್ಠ ಅಡಿಕೆಧಾರಣೆ ವಿವರ

ಎದೆಹಾಲಿನ ಬ್ಯಾಂಕ್ 

ಈ ಹಿನ್ನೆಲೆಯಲ್ಲಿ ನವಜಾತ ಶಿಶುಗಳಿಗೂ ತಾಯಂದಿರ ಎದೆಹಾಲು ದೊರೆಯಬೇಕೆಂಬ ಸದುದ್ದೇಶದೊಂದಿಗೆ ಎದೆಹಾಲಿನ ಬ್ಯಾಂಕ್‌ನ್ನು ಪ್ರಪಂಚಾದ್ಯಂತ ಸ್ಥಾಪನೆ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ರು . ಎದೆ ಹಾಲಿನ ಸೇವನೆಯು ಶಿಶುಗಳಿಗೆ ದೇಹದಲ್ಲಿ ವಿವಿಧ ಸೋಂಕು ಮತ್ತು ರೋಗಗಳಿಂದ ರಕ್ಷಿಸುವ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ  ಎಂದು ತಿಳಿಸಿದ ಡಾ.ಧನಂಜಯ್ ಸರ್ಜಿ, ಅಮೃತ ಬಿಂದು ಹೆಸರಿನಲ್ಲಿ ಆರಂಭವಾಗುತ್ತಿರುವ ಎದೆಹಾಲಿನ ಬ್ಯಾಂಕ್​ ಉದ್ಘಾಟನಾ ಕಾರ್ಯಕ್ರಮದ ವಿವರ ನೀಡಿದ್ರು.