ಶ್ರೀರಾಮುಲು ಕನಸು ಶಿವಮೊಗ್ಗದಲ್ಲಿ ನನಸ್ಸಾಯ್ತು! ಬಳ್ಳಾರಿಗೆ ಹೊರಟ 23 ಅಡಿ ಎತ್ತರದ ಪುನೀತ್ ಪ್ರತಿಮೆಯ ವಿಶೇಷತೆ ಗೊತ್ತಾ

ಅಪ್ಪುರವರು ಅಗಲಿದ್ದರೂ ಅವರ ಮೇಲಿನ ಅಭಿಮಾನವೂ ದಿನಕ್ಕೊಂದು ರೀತಿಯಲ್ಲಿ ವ್ಯಕ್ತವಾಗುತ್ತಿದೆ. ಇದಕ್ಕೆ ಸಾಕ್ಷಿಯಾಗಿ ಶಿವಮೊಗ್ಗ  ನಿದಿಗೆಯಲ್ಲಿ ಯುವರತ್ನ ಪುನೀತ್ ರಾಜಕುಮಾರ್  (Puneeth Rajkumar‌) ಪ್ರತಿಮೆಯೊಂದು ನಿರ್ಮಾಣವಾಗ್ತಿದೆ.  23 ಅಡಿ ಎತ್ತರ, 3 ಟನ್ ತೂಕದ ಪುನೀತ್ ರಾಜಕುಮಾರರ ಪ್ರತಿಮೆಯನ್ನು  ಜೀವನ್ ಶಿಲ್ಪಿ ಮತ್ತು ತಂಡದವರು ನಿರ್ಮಿಸಿದ್ದಾರೆ.  

ಬಳ್ಳಾರಿ ಜಿಲ್ಲಾ ಕ್ರೀಡಾಂಗಣದಲ್ಲಿ ಇದೇ  21ರಂದು ನಡೆಯುವ ಬಳ್ಳಾರಿ ಉತ್ಸವದಲ್ಲಿ ಈ ಪ್ರತಿಮೆ ಲೋಕಾರ್ಪಣೆಗೊಳ್ಳಲಿದೆ. 16 ಜನರ ತಂಡ  3 ತಿಂಗಳುಗಳ ಕಾಲ ಶ್ರಮವಹಿಸಿ ಈ  ಪ್ರತಿಮೆ  ನಿರ್ಮಿಸಲಾಗಿದೆ.  ಪ್ರತಿಮೆಯನ್ನು ಸಾಗಿಸಲು 40 ಅಡಿ ಉದ್ದದ ಹಾಗೂ 20 ಚಕ್ರದ ಲಾರಿ ಬಂದಿದೆ . ಬೃಹತ್ ಕ್ರೇನ್‌ಗಳನ್ನು ಬಳಸಿ ಲಾರಿಗೆ ಪ್ರತಿಮೆಯನ್ನ ಇರಿಸಿ ಬಳ್ಳಾರಿಗೆ ತಗೆದುಕೊಂಡು ಹೋಗಲಾಗುತ್ತಿದೆ..3 ಸಾವಿರ ಕೆ.ಜಿ. ತೂಕದ ಈ ಪ್ರತಿಮೆಗೆ ಕಬ್ಬಿಣವೇ 1 ಸಾವಿರ ಕೆ.ಜಿ. ಇದೆ.  ಈಗಾಗಲೇ ನಿರ್ಮಾಣಗೊಂಡಿರುವ ಅಪ್ಪು ಪ್ರತಿಮೆಗಳಿಗಿಂತ ದೊಡ್ಡ ಪ್ರತಿಮೆಯೊಂದನ್ನು ನಿರ್ಮಿಸಬೇಕೆಂಬುದು ಸಚಿವ ಶ್ರೀರಾಮುಲು ಅವರ ಅಪೇಕ್ಷೆಯಾಗಿತ್ತಂತೆ. ಸದ್ಯ ಶಿವಮೊಗ್ಗದಿಂದ ಈ ಪ್ರತಿಮೆ ಬಳ್ಳಾರಿಗೆ ತೆರಳುತ್ತಿದೆ. 

ಸಾಗರ ಟೌನ್​ನಲ್ಲಿ ಹಲ್ಲೆಗೆ ಯತ್ನ ಕೇಸ್​/ ಆರೋಪಿಗಳ ಬಂಧನ/ ಶಾಸಕ ಹರತಾಳು ಹಾಲಪ್ಪ ಹೇಳಿದ್ದೇನು? ಇಲ್ಲಿದೆ ವಿಡಿಯೋ ವರದಿ

ಇನ್ನೂ ಬಳ್ಳಾರಿಯಲ್ಲಿ ಈ ಪ್ರತಿಮೆ ಅನಾವರಣಗೊಳ್ಳಲಿದ್ದು. ಪ್ರತಿಮೆ ಉದ್ಘಾಟನೆ ದೊಡ್ಮನೆಯ ಕುಟುಂಬಸ್ಥರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಇದರ ಜೊತೆಯಲ್ಲಿ ಬಳ್ಳಾರಿ ಜಿಲ್ಲಾ ಕ್ರೀಡಾಂಗಣದ ಆವರಣದ ಬಳಿ ಇರುವ ಕೆರೆ ಹಾಗು ಪಾರ್ಕ್​ ಅಪ್ಪುರವರ ಹೆಸರನ್ನು ಇಡಲು ತೀರ್ಮಾನಿಸಲಾಗಿದೆ. 

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com

Leave a Comment