ಬೆಂಗಳೂರಿನ ಪ್ರತಿಷ್ಟಿತ ಹೋಟೆಲ್​ ಗಳಲ್ಲಿ ಉದ್ಯೋಗವಕಾಶ! ಇಲ್ಲಿದೆ ಪೂರ್ಣ ಮಾಹಿತಿ!

Job opportunities in reputed hotels in Bengaluru! Here's the full information!

ಬೆಂಗಳೂರಿನ ಪ್ರತಿಷ್ಟಿತ ಹೋಟೆಲ್​ ಗಳಲ್ಲಿ ಉದ್ಯೋಗವಕಾಶ!  ಇಲ್ಲಿದೆ ಪೂರ್ಣ ಮಾಹಿತಿ!

KARNATAKA NEWS/ ONLINE / Malenadu today/ Jun 13, 2023 SHIVAMOGGA NEWS

ಶಿವಮೊಗ್ಗ,   ಕರ್ನಾಟಕ ಕೌಶಲ್ಯಾಭಿವದ್ದಿ ನಿಗಮ ಹಾಗೂ ಬೆಂಗಳೂರು ಹೋಟೆಲ್ ಅಸೋಸಿಯೇಷನ್ ಇವರ ಸಹಯೋಗದಲ್ಲಿ ಜೂನ್ 15 ರಂದು ಕರ್ನಾಟಕ ಕೌಶಲ್ಯ ಅಭಿವೃದ್ದಿ ನಿಗಮ, ಕೌಶಲ್ಯ ಮಿಷನ್, ಕೌಶಲ್ಯ ಭವನ, ಬನ್ನೇರುಘಟ್ಟ ರಸ್ತೆ, ಡೈರಿ ವೃತ್ತ ಬೆಂಗಳೂರು-29 ಇಲ್ಲಿ ಉದ್ಯೋಗ ಮೇಳ ಆಯೋಜಿಸಲಾಗಿದೆ.

ಬೆಂಗಳೂರಿನ ಪ್ರತಿಷ್ಟಿತ ಹೋಟೆಲ್‍ಗಳಲ್ಲಿ ಸ್ವೀವರ್ಡ್, ಕ್ಯಾಪ್ಟನ್, ಅಡುಗೆ ಸಹಾಯಕ, ಮಾಣಿ, ಮೇಲ್ವಿಚಾರಕ, ಬಾಣಸಿಗ ಹಾಗೂ ಇತರೆ ಕೆಲಸಗಾರರ ವಿಭಾಗಗಳಲ್ಲಿ ಕೆಲಸ ನಿರ್ವಹಿಸಲು ಉದ್ಯೋಗಾವಕಾಶವಿದೆ.

ಆಸಕ್ತ ಅಭ್ಯರ್ಥಿಗಳು ಜಾಲತಾಣ https://tinyurl.com/ksdcjobdriveಇಲ್ಲಿ ನೊಂದಾಯಿಸಿಕೊಂಡು ಅಥವಾ ಜೂನ್ 15 ರಂದು ಅಗತ್ಯ ದಾಖಲೆಗಳೊಂದಿಗೆ ನೇರವಾಗಿ ಮೇಳದಲ್ಲಿ ಭಾಗವಹಿಸಬಹುದು. ಹೆಚ್ಚಿನ ಮಾಹಿತಿಗಾಗಿ ದೂ.ಸಂ: 08182-255294/9019485688 ನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಕೌಶಲ್ಯಾಭಿವೃದ್ದಿ ಅಧಿಕಾರಿ ಹೆಚ್.ಎಂ.ಸುರೇಶ್ ತಿಳಿಸಿದ್ದಾರೆ.


ಶಿವಮೊಗ್ಗ-ಬೆಂಗಳೂರು ವಿಮಾನದ ಟೈಮಿಂಗ್ಸ್​ ಏನು!? ಟಿಕೆಟ್ ದರ ಎಷ್ಟು? ಬುಕ್ಕಿಂಗ್ ಯಾವಾಗಿನಿಂದ ಪ್ರಾರಂಭ!? ಪೂರ್ತಿ ವಿವರ

Shivamogga airport / ಶಿವಮೊಗ್ಗ ವಿಮಾನ ನಿಲ್ದಾಣದಿಂದ ವಿಮಾನಗಳ ಹಾರಾಟದ ದಿನಾಂಕ ನಿಕ್ಕಿಯಾಗಿದೆ. ಇದೇ ಆಗಸ್ಟ್​ 11 ರಂದು ವಿಮಾನದ ಹಾರಾಟ ಶಿವಮೊಗ್ಗದಿಂದ ಆರಂಭಗೊಳ್ಳಲಿದೆ. ಆ ಕ್ಷಣಕ್ಕಾಗಿ ಶಿವಮೊಗ್ಗ ಜಿಲ್ಲೆ ಜನ ಇನ್ನಿಲ್ಲದ ನಿರೀಕ್ಷೆಯಿಂದಲೇ ಕಾಯುತ್ತಿದ್ರು. ಅದರಲ್ಲಿಯು ವಿಮಾನ ನಿಲ್ದಾಣ ವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ ದಿನದಿಂದ, ಅಂದರೆ ಫೆಬ್ರವರಿ 27 ರಿಂದ ಇಲ್ಲಿವರೆಗೂ ಕಾಯುವಿಕೆಯಲ್ಲಿ ಕಳೇದ ಮೂರು ತಿಂಗಳು ಜನಮಾನಸದಲ್ಲಿ ನಿರಾಸೆ ಮೂಡಿಸಿತ್ತು. ಆದರೆ ಇದೀಗ ಮತ್ತೆ ಆಕಾಶದಲ್ಲಿ ಹಾರುವ ಕನಸು ಚಿಗುರೊಡೆದಿದ್ದು, ಜನರು ಒಂದು ಸಲ ವಿಮಾನದಲ್ಲಿ ಹೋಗಿ ಬರೋಣ ಅಂತಾ ಸಿದ್ಧರಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಸೋಗಾನೆ ವಿಮಾನ ನಿಲ್ದಾಣದಿಂದ ಹಾರುವ ವಿಮಾನದ ಬಗ್ಗೆ ಒಂದಿಷ್ಟು ಮಾಹಿತಿಯನ್ನ ಗಮನಿಸೋಣ

ಯಾವ ವಿಮಾನ ಹಾರಾಟ ನಡೆಸಲಿದೆ

ಸದ್ಯ ಪ್ರಾಥಮಿಕ ಹಂತದಲ್ಲಿ ಆಗಿರುವ ಒಪ್ಪಂದದ ಪ್ರಕಾರ, ಶಿವಮೊಗ್ಗ ವಿಮಾನ ನಿಲ್ದಾಣದಿಂದ ಇದೇ 

ಆಗಸ್ಟ್ 11ರಂದು ಇಂಡಿಗೋ ಸಂಸ್ಥೆಯ ವಿಮಾನ ಹಾರಾಟ ನಡೆಸಲಿದೆ. ಇಂಡಿಗೋ ಸಂಸ್ಥೆಯ ಎಟಿಆರ್‌ 72 ಮಾದರಿಯ 78 ಆಸನಗಳ ವಿಮಾನ ಹಾರಾಟ ನಡೆಸಲಿದೆ.

ಎಲ್ಲಿಂದ ಎಲ್ಲಿಗೆ ? ಬುಕ್ಕಿಂಗ್ ಯಾವಾಗ?

ಬೆಂಗಳೂರು-ಶಿವಮೊಗ್ಗ ನಡುವೆ ಇಂಡಿಗೋ ಸಂಸ್ಥೆಯ ವಿಮಾನ ಹಾರಾಟ ಆರಂಭಿಸಲಿದೆ. ಕೆಲವೇ ದಿನಗಳಲ್ಲಿ ಬುಕ್ಕಿಂಗ್ ಸಹ ಆರಂಭವಾಗಲಿದೆ ಎಂದು ಹೇಳಲಾಗಿದ್ದು, ಈ ಬಗ್ಗೆ ಅಧಿಕೃತವಾದ ದಿನಾಂಕ ಹೊರಬಿದ್ದಿಲ್ಲ.  ಇಂಡಿಗೋ ವೆಬ್‌ಸೈಟ್ ಮೂಲಕ ಟಿಕೆಟ್ ಬುಕ್ ಕೂಡ ಮಾಡಬಹುದು

ಕುವೆಂಪುರವರ ಹೆಸರು ಖಾತರಿಯೇ?

ಶಿವಮೊಗ್ಗ ವಿಮಾನ ನಿಲ್ದಾಣ ವನ್ನು ರಾಷ್ಟ್ರಕವಿ ಕುವೆಂಪು ವಿಮಾನ ನಿಲ್ದಾಣ (kuvempu airport shivamogga) ಎಂದೇ ಕರೆಯುವ ಸಲುವಾಗಿ, ಆ ಸಂಬಂಧ ಹೆಸರಿನ ಪ್ರಸ್ತಾವನೆಯನ್ನ ಕೇಂದ್ರ ಸರ್ಕಾರಕ್ಕೂ ಕಳುಹಿಸಿಕೊಡಲಾಗಿದೆ. ಆದರೆ ಈ ಬಗ್ಗೆ ಅಧಿಕೃತ ಪ್ರಕಟಣೆ ಇನ್ನೂ ಹೊರಬಿದ್ದಿಲ್ಲ. 

ವಿಮಾನ ಹಾರಾಟದ ಟೈಮಿಂಗ್ಸ್ ಏನು?

ಆಗಸ್ಟ್ 11 ರಂದು ನಿರ್ಧಾರವಾದಂತೆ ವಿಮಾನ ಹಾರಾಟ ಆರಂಭವಾದರೆ, ಅಂದಿನಿಂದ ಪ್ರತಿ ದಿನ ಬೆಳಗ್ಗೆ 9 ಗಂಟೆಗೆ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿಮಾನವೊಂದು ಹೊರಟು ಶಿವಮೊಗ್ಗಕ್ಕೆ 10.30ಕ್ಕೆ ತಲುಪಲಿದೆ. 

ಮಧ್ಯಾಹ್ನ 12 ಗಂಟೆಗೆ ಶಿವಮೊಗ್ಗದಿಂದ ಹೊರಡುವ ವಿಮಾನ 1.30ಕ್ಕೆ ಬೆಂಗಳೂರು ತಲುಪಲಿದೆ. 

ಟಿಕೆಟ್ ದರ ಎಷ್ಟು?

ಬೆಂಗಳೂರು- ಶಿವಮೊಗ್ಗ ಮಾರ್ಗಕ್ಕೆ ಅಂದಾಜು ತಲಾ ಒಬ್ಬರಿಗೆ  2,500ರಿಂದ 3,500 ರೂ. ತನಕ ದರ ನಿಗದಿ ಆಗುವ ನಿರೀಕ್ಷೆ ಇದೆ. ಇದು ಸರ್ಕಾರ ಪ್ರತಿ ಟಿಕೆಟ್ ಮೇಲೆ ನೀಡುವ 500 ರೂಪಾಯಿ ರಿಯಾಯಿತಿಯನ್ನ ಸಹ ಒಳಗೊಂಡಿರುತ್ತದೆ. 


ದೇವಸ್ಥಾನದಲ್ಲಿ ನಿಂತಿದ್ದಾಗ ಬಡಿದ ಸಿಡಿಲು! ಓರ್ವನ ಸಾವು! ನಾಲ್ವರಿಗೆ ಗಾಯ!

ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಯಗಟಿಪುರದಲ್ಲಿ ಸಿಡಿಲು ಬಡಿದು ಓರ್ವ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ನಾಲ್ವರಿಗೆ ಗಾಯಗಳಾಗಿವೆ. ಭಾನುವಾರ ಈ ಘಟನೆ ಸಂಭವಿಸಿದ್ದು, ಇಲ್ಲಿನ ಗಂಜೀಗೆರೆ ಮೂಲದ ಮುಖೇಶ್ ಸಾವನ್ನಪ್ಪಿದ್ದಾರೆ. 

ತರೀಕೆರೆ ತಾಲೂಕಿನ ಬಾವಿಕೆರೆಯ ಮುಖೇಶ್​ ದೇವಸ್ಥಾನಕ್ಕೆ ತೆರಳಿದ್ದರು, ಅಲ್ಲಿ ದೇವಾಲಯದ ಹೊರಾಂಗಣದಲ್ಲಿ ನಿಂತಿದ್ದಾಗ ಸಿಡಿಲು ಬಡಿದಿದೆ. ಇದೇ ವೇಳೆ ಅಲ್ಲಿದ್ದ ನಾಲ್ವರಿಗ ಗಾಯಗಳಾಗಿವೆ. 

ಅವರಿಗೆ  ಕಡೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. 


ಭದ್ರಾವತಿಯಲ್ಲಿಂದು ವಿದ್ಯುತ್ ವ್ಯತ್ಯಯ

ಭದ್ರಾವತಿ/ ತಾಲೂಕಿನ ಮೆಸ್ಕಾಂ ಲಕ್ಕವಳ್ಳಿ66/11 ಕೆವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ ಕಾರ್ಯ ಹಮ್ಮಿಕೊಳ್ಳಲಾಗಿದೆ. ಹೀಗಾಗಿ ಇವತ್ತು ಅಂದರೆ,   ಜೂ.13ರಂದು ಬೆಳಿಗ್ಗೆ 9ಗಂಟೆಯಿಂದ ಸಂಜೆ 6 ಗಂಟೆವರೆಗೆ  ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯ

ಗೋಣಿಬೀಡು, ಸಿಂಗನಮನೆ, ಗ್ಯಾರೇಜ್ ಕ್ಯಾಂಪ್, ಶಾಂತಿನಗರ, ಶಂಕರಘಟ್ಟ, ತಾವರಘಟ್ಟ, ಎಚ್.ಕೆ ಜಂಕ್ಷನ್, ಕುವೆಂಪು ವಿಶ್ವ ವಿದ್ಯಾನಿಲಯ, ರಂಗನಾಥಪುರ, ತಮ್ಮಡಿಹಳ್ಳಿ, ಮಾಳೇನಹಳ್ಳಿ, ನೆಲ್ಲಿಸರ, ಮಲ್ಲಿಗೇನಹಳ್ಳಿ ಮತ್ತು ಸುತ್ತ-ಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು, ಗ್ರಾಹಕರು ಸಹಕರಿಸುವಂತೆ ಗ್ರಾಮೀಣ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಕೋರಿದ್ದಾರೆ.