KARNATAKA NEWS/ ONLINE / Malenadu today/ Aug 7, 2023 SHIVAMOGGA NEWS
ಶಿವಮೊಗ್ಗ ದೊಡ್ಡಪೇಟೆ ಪೊಲೀಸ್ ಸ್ಟೇಷನ್ ಲಿಮಿಟ್ಸ್ನಲ್ಲಿ ನಿನ್ನೆ ಪತ್ರಕರ್ತ ಹಾಗೂ ಅವರ ಮಗನ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ. ಈ ಸಂಬಂಧ IPC 1860 (U/s-143,147,323,324,504,506,149), PROTECTION OF CHILDREN FROM SEXUAL OFFENCES ACT 2012 (U/s-12) ಅಡಿಯಲ್ಲಿ ಕೇಸ್ ದಾಖಲಾಗಿದೆ. ಇದೊಂದು ಗಂಭೀರ ಪ್ರಕರಣವಾಗಿದ್ದು ಈ ಬಗ್ಗೆ ಪೊಲೀಸ್ ಇಲಾಖೆಯು ಸಹ ಕಠಿಣ ಕ್ರಮಕ್ಕೆ ಮುಂದಾಗಿದೆ.
ನಿನ್ನೆ ಸಂಜೆ ಪತ್ರಕರ್ತ ಮುದಾಸಿರ್ ಎಂಬವರ ಮಗ ಸ್ಥಳೀಯ ಮಸೀದಿಯೊಂದರ ಬಳಿ ಇರುವ ಅಂಗಡಿಯೊಂದಕ್ಕೆ ತೆರಳಿದ್ದಾನೆ. ಈ ವೇಳೆ ಅಲ್ಲಿದ್ದ ಆರೋಪಿಗಳು ಬಾಲಕನನ್ನ ಚುಡಾಯಿಸಿ ಆತನಿಗೆ ಲೈಂಗಿಕ ಶೋಷಣೆ ನೀಡಿದ್ದಾರೆ. ಈ ವೇಳೆ ಬಾಲಕ ಕಿರುಚಿಕೊಂಡಿದ್ದಾನೆ. ತಕ್ಷಣವೇ ವಿಚಾರ ತಿಳಿದು ತಂದೆಯಾಗಿ ಮುದಾಸಿರ್ ಅಲ್ಲಿಗೆ ಬಂದು ವಿಚಾರಿಸಿದ್ದಾರೆ. ಈ ವೇಳೆ ಅವರ ಮೇಲೂ ಆರೋಪಿಗಳು ಹಲ್ಲೆ ಮಾಡಿದ್ದಾರೆ. ಅಷ್ಟೊತ್ತಿಗೆ ಸ್ಥಳಕ್ಕೆ ಬಂದ, ಮುದಾಸಿರ್ ರವರ ಸ್ನೇಹಿತರು ತಂದೆ ಹಾಗೂ ಮಗನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಈ ಮಧ್ಯೆ ಪುನಃ ಮುದಾಸಿರ್ರವರನ್ನ ಕರೆಮಾಡಿ ಮಾತನಾಡಬೇಕು ಎಂದು ಕರೆಸಿಕೊಂಡ ದುಷ್ಕರ್ಮಿಗಳು, ಅವರ ಮೇಲೆ ಮತ್ತೆ ಹಲ್ಲೆ ಮಾಡಿದ್ದಾರೆ. ಇದೇ ವಿಚಾರವಾಗಿ ದೊಡ್ಡಪೇಟೆ ಪೊಲೀಸ್ ಸ್ಟೇಷನ್ ಕಾಂಪೌಂಡ್ನೊಳಗೆ ಆರೋಪಿಗಳು ಮತ್ತವರ ಕಡೆಯವರು ಪೊಲೀಸರಿಗೂ ಗೌರವ ತೋರದೆ ಕಿರುಚಾಡಿದ್ದಾರೆ ಎಂಬ ಆರೋಪಗಳು ಸಹ ಕೇಳಿಬಂದಿದೆ. ಸದ್ಯ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು, ನಡೆದ ಘಟನೆಗಳ ಬಗ್ಗೆ ಹೆಚ್ಚಿನ ವಿಚಾರಣೆ ನಡೆಸ್ತಿದ್ದಾರೆ.
ಇನ್ನಷ್ಟು ಸುದ್ದಿಗಳು
