shivamogga news today ಚಿತ್ರದುರ್ಗದ ಮಹಿಳೆಯೊಬ್ಬರ 20 ಗ್ರಾಂ ಚಿನ್ನದ ಸರ ಶಿವಮೊಗ್ಗದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಬಳಿ ಕಳ್ಳತನವಾಗಿದ್ದು, ಈ ಕುರಿತು ಮಹಿಳೆ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾರೆ.
shivamogga news today :ಎಫ್ಐಆರ್ನಲ್ಲಿ ಏನಿದೆ.
ಚಿತ್ರದುರ್ಗದ ಪಾರ್ವತಮ್ಮ ಎಂಬುವವರು ತಮ್ಮ ಮಗಳನ್ನು ಶಿವಮೊಗ್ಗದ ವೆಟರ್ನರಿ ಕಾಲೇಜಿನಲ್ಲಿ ಓದಿಸುತ್ತಿದ್ದರು. ಹಾಗಾಗಿ ಪಿಜಿಯಲ್ಲಿ ಇದ್ದ ಪುತ್ರಿಯನ್ನು ನೋಡಿಕೊಂಡು ಬರೋಣವೆಂದು ಪಾರ್ವತಮ್ಮ ತಮ್ಮ ಸೊಸೆಯೊಂದಿಗೆ ಜೂನ್ 07 ರಂದು ಶಿವಮೊಗ್ಗಕ್ಕೆ ಆಗಮಿಸಿದ್ದರು. ಹಾಗೆಯೇ ಪುತ್ರಿಯನ್ನು ನೋಡಿ ಮಾತನಾಡಿಸಿಕೊಂಡು ನಂತರ ಚಿತ್ರದುರ್ಗಕ್ಕೆ ವಾಪಾಸ್ ಹೋಗಲು ಕೆಎಸ್ಆರ್ಟಿಸಿ ಬಸ್ ನಿಲ್ದಾಣಕ್ಕೆ ಬಂದಿದ್ದಾರೆ. ಆ ವೇಳೆ ಇಬ್ಬರೂ ಸಹ ಶೌಚಾಲಯದ ಹೊರೆಗೆ ತಮ್ಮ ವ್ಯಾನಿಟಿ ಬ್ಯಾಗ್ನ್ನು ಇಟ್ಟು ಶೌಚಕ್ಕೆ ತೆರಳಿದ್ದಾರೆ. ನಂತರ ಬಸ್ ಹತ್ತಿ ಊರಿಗೆ ತೆರಳಿದ್ದು, ರಾತ್ರಿ ಪರ್ಸ್ ತೆಗೆದು ನೋಡಿದಾಗ ಮಹಿಳೆಗೆ ಶಾಕ್ ಎದುರಾಗಿದೆ. ಅದೇನೆಂದರೆ ಬ್ಯಾಗ್ನಲ್ಲಿದ್ದ 70 ಸಾವಿರ ಮೌಲ್ಯದ 20 ಗ್ರಾಂ ಚಿನ್ನದ ಸರ ಹಾಗೂ ಪರ್ಸನ್ನು ಕಳ್ಳರು ಕದ್ದಿದ್ದಾರೆ. ಈ ಕುರಿತು ಪಾರ್ವತಮ್ಮ ಶೌಚಕ್ಕೆ ತೆರಳಿದಾಗಲೇ ಈ ಕಳ್ಳತನ ಆಗಿರಬಹುದೆಂದು ಆರೋಪಿಸಿ ದೂರನ್ನು ದಾಖಲಿಸಿದ್ದಾರೆ.