kanthara chapter 1 : ತೀರ್ಥಹಳ್ಳಿಗೆ ಎಂಟ್ರಿಕೊಟ್ಟ ಕಾಂತಾರ ಚಾಪ್ಟರ್ 1 ಚಿತ್ರತಂಡ | ಕಾರಣವೇನು
kanthara chapter 1 2022 ರಲ್ಲಿ ರಿಲೀಸ್ ಆಗಿದ್ದ ಕಾಂತಾರ ಚಿತ್ರ ವಿಶ್ವದೆಲ್ಲಡೆ ಉತ್ತಮ ಪ್ರದರ್ಶನ ಕಂಡು ಜಗತ್ತಿಗೆ ಕನ್ನಡ ಚಿತ್ರಗಳ ತಾಕತ್ತನ್ನು ಪರಿಚಯಿಸಿತ್ತು.16 ಕೋಟಿ ಬಜೆಟ್ನಲ್ಲಿ ನಿರ್ಮಾಣವಾದ ಈ ಚಿತ್ರ 400 ಕೋಟಿಗೂ ಅಧಿಕ ಕಲೆಕ್ಷನ್ನ್ನು ಮಾಡಿತ್ತು. ಈ ಚಿತ್ರದ ಯಶಸ್ಸಿನ ನಂತರ ಚಿತ್ರದ ನಾಯಕ ಹಾಗೂ ನಿರ್ದೇಶಕ ರಿಶಬ್ ಶೆಟ್ಟಿ ಕಾಂತಾರ ಪ್ರೀಕ್ವೆಲ್ನ್ನು ಮಾಡಲು ಮುಂದಾದರು. ಇದೀಗ ದೊಡ್ಡ ಬಜೆಟ್ನಲ್ಲಿ ನಿರ್ಮಾಣವಾಗುತ್ತಿರುವ ಕಾಂತಾರ ಚಿತ್ರದ ಶೂಟಿಂಗ್ ಬಿರುಸಿಲಲ್ಲಿ ಸಾಗುತ್ತಿದ್ದು, ಚಿತ್ರತಂಡ ಈಗ ತೀರ್ಥಹಳ್ಳಿಯಲ್ಲಿ ಶೂಟಿಂಗ್ಗಾಗಿ ಬೀಡುಬಿಟ್ಟಿದೆ.
ಹೌದು ಕಾಂತಾರ ಚಾಪ್ಪರ್ 1 ಚಿತ್ರದ ಶೂಟಿಂಗ್ಗಾಗಿ ಮಾಣಿ ಹಿನ್ನೀರಿನ ಪರಿಸರದಲ್ಲಿ ಬೃಹತ್ ಬಂದರಿನ ಸೆಟ್ ಹಾಕಲಾಗುತ್ತಿದೆ. ದೋಣಿ ಹಡಗಿನ ಬಂದರನ್ನಾಗಿ ಮಾರ್ಪಡಿಸಲು ತಜ್ಞರು ಸೆಟ್ ಹಾಕುತ್ತಿದ್ದಾರೆ. ಕಾಂತಾರ ಒನ್ ಸಿನಿಮಾದ ಅಂತಿಮ ಹಂತದ ಶೂಟಿಂಗ್ಗೆ ಮಾಣಿ ಹಿನ್ನೀರಿನ ಪರಿಸರ ಸಾಕ್ಷಿಯಾಗಲಿದೆ.
kanthara chapter 1 ಮಾಣಿ ಹಿನ್ನೀರಿನ ಹುಳ್ಕೊಪ್ಪಕುಗ್ರಾಮದಲ್ಲಿ ಬಂದರಿನ ಸೆಟ್ ಸಿದ್ಧವಾಗುತ್ತಿದೆ. ಕಾಂತಾರ ಚಲನಚಿತ್ರದ ನಾಯಕ ನಟ ರಿಷಬ್ ಶೆಟ್ಟಿಯವರು ನಿನ್ನೆಯಿಂದ (ಜೂನ್ 10) ಹದಿನೈದು ದಿನಗಳ ಕಾಲ ತೀರ್ಥಹಳ್ಳಿ ತಾಲೂಕಿನ ಯಡೂರಿನ ಆಮಂತ್ರಣ ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಇವರ ಜೊತೆ ಕ್ಯಾಮೆರಾಮನ್, ಸ್ಕ್ರಿಪ್ ರೈಟರ್, ಸಂಕಲನಕಾರರ ತಂಡವೇ ಬೀಡುಬಿಟ್ಟಿದೆ.

ಕಾಂತಾರ ಸಿನಿಮಾದ ಅಂತಿಮ ಹಂತದ ಚಿತ್ರೀಕರಣ ಇದಾಗಿದ್ದು , ಐತಿಹಾಸಿಕ ಸನ್ನಿವೇಶದ ಚಿತ್ರೀಕರಣಕ್ಕಾಗಿ ಸೆಟ್ ಹಾಕಲಾಗುತ್ತಿದೆ. ಮುಂಬೈನಿಂದ ಸುಮಾರು 50ಕ್ಕೂ ಹೆಚ್ಚು ಕುದುರೆಗಳನ್ನು ತರಿಸಿಕೊಳ್ಳಲಾಗಿದೆ. ಸೆಟ್ ಹಾಕಿದ ಜಾಗದಲ್ಲಿ ಒಂದು ವಿಡಿಯೊ ತುಣುಕು ಕೂಡ ಸೋರಿಕೆಯಾಗದ ರೀತಿಯಲ್ಲಿ ಎಚ್ಚರ ವಹಿಸಲಾಗಿದೆ. ಅಂದುಕೊಂಡಂತೆ ಎಲ್ಲಾ ನಡೆದರೆ ಚಿತ್ರ ತಂಡವೇ ಘೋಷಿಸಿದಂತೆ ಅಕ್ಟೋಬರ್ 02 20225 ರಂದು ದೇಶದಾದ್ಯಂತ ಕಾಂತಾರ ಚಾಪ್ಟರ್ 1 ರ ದರ್ಶನವಾಗಲಿದೆ.