shivamogga doddapete case ಶಿವಮೊಗ್ಗ ದೊಡ್ಡಪೇಟೆ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಯುವಕನ ಮೇಲೆ ಹಲ್ಲೆ: ಜೀವ ಬೆದರಿಕೆ ಹಾಕಿದ ಐವರು ಆರೋಪಿಗಳು
Shivamogga news / ಶಿವಮೊಗ್ಗ ನ್ಯೂಸ್
ಶಿವಮೊಗ್ಗ, ಕರ್ನಾಟಕ: ಕಳೆದ ಜೂನ್ 7ರಂದು ಶಿವಮೊಗ್ಗ ದೊಡ್ಡಪೇಟೆ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಹಲ್ಲೆ ಸಂಬಂಧ ಕೇಸ್ವೊಂದು ದಾಖಲಾಗಿದೆ. ಇಬ್ಬರು ವ್ಯಕ್ತಿಗಳ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿರುವ (Assault and Life Threat) ಐವರು ಆರೋಪಿಗಳ ವಿರುದ್ಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಭಾರತೀಯ ನ್ಯಾಯ ಸಂಹಿತೆ (BNS), 2023 ರ ವಿವಿಧ ಕಲಂಗಳು, ಅಂದರೆ 109(1), 115(2), 140(2), 189(2), 118(1), 189(4), 191(3), 351(2), 191(2), 352, 190 (Sections of BNS) ಅಡಿಯಲ್ಲಿ Fir ದಾಖಲಾಗಿದೆ.
ನಡೆದಿದ್ದೇನು? shivamogga doddapete case
ಮಹಮ್ಮದ್ (Complainant), 21 ವರ್ಷ ವಯಸ್ಸಿನ ಕೂಲಿ ಕಾರ್ಮಿಕ, ನೀಡಿದ ದೂರಿನ ಸಾರಾಂಶದ ಪ್ರಕಾರ, ಅವರು ಸೂಳೆಬೈಲು ಡೈರಿ ಬಳಿ ಕುಳಿತಿದ್ದಾಗ ಆತನ ಸ್ನೇಹಿತನೊಬ್ಬ ಅಲ್ಲಿಗೆ ಬಂದು ಮಂಡ್ಲಿಗೆ ಡ್ರಾಪ್ ಕೇಳಿದ್ದಾನೆ. ಆತನನ್ನು ಬೈಕ್ನಲ್ಲಿ ಕೂರಿಸಿಕೊಂಡು ನ್ಯೂ ಮಂಡ್ಲಿ ಮಿಲ್ ಬಳಿ ಹೋಗುತ್ತಿದ್ದಾಗ 4-5 ಜನರು ಬೈಕ್ ಮತ್ತು ಪ್ಯಾಸೆಂಜರ್ ಆಟೋದಲ್ಲಿ ಫಾಲೋ ಮಾಡಿಕೊಂಡು ಬಂದಿದ್ದಾರೆ.

ಬಳಿಕ ತಮ್ಮ ಅಣ್ಣನಿಗೆ ಹೊಡೆಯುತ್ತೀರಾ ಎಂದು ಹೇಳಿ, ಬೈಕ್ನಲ್ಲಿ ಡ್ರಾಪ್ ಕೇಳಿದ್ದ ಯುವಕನನ್ನ ತಮ್ಮ ಆಟೋದಲ್ಲಿ ಕೂರಿಸಿಕೊಂಡು ತೆರಳಿದ್ದಾರೆ. ಆ ಬಳಿಕ ಕುಲ್ಡ ಅಕ್ರಂ ಮನೆ ಬಳಿ ಅವರನ್ನ ಕರೆತಂದು, ಅಲ್ಲಿಯು ಹಲ್ಲೆ ಮಾಡಿದ್ದಾರೆ. ತದನಂತರ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಲಾಗಿದೆ.
shivamogga doddapete case