shivamogga news today : ರಾವಲ್ಪಿಂಡಿಯ ಅಡಿಯಾಲ ಜೈಲಿನ ಮುಂದೆ ಪ್ರಧಾನಿ ನರೇಂದ್ರ ಮೋದಿ ಕೈಗೆ ಕೋಳ ತೊಡಿಸಿದ ಫೊಟೊ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದ ಯುವಕನ ಮೇಲೆ ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
shivamogga news today : ಏನಿದು ಪ್ರಕರಣ
ಮುಜಾಮಿಲ್ ಮುಜ್ ಎಂಬಾತನು ಶಿವಮೊಗ್ಗದಲ್ಲಿದ್ದಾಗ ಫೇಸ್ಬುಕ್ ಅಕೌಂಟ್ನ್ನು ಕ್ರಿಯೇಟ್ ಮಾಡಿದ್ದ. ಹಾಗೆಯೇ ಪಾಕ್ ಮತ್ತು ಭಾರತದ ನಡುವೆ ಯುದ್ಧದ ವಾತಾವರಣ ನಿರ್ಮಾಣವಾದಾಗ ಫೇಸ್ಬುಕ್ ನಲ್ಲಿ ಭಾರತದ ಪ್ರಧಾನಿಗೆ ರಕ್ತ ಸಿಕ್ತ ಬಟ್ಟೆಯನ್ನ ತೊಡಿಸಿ ಇಬ್ಬರು ಸೈನಿಕರ ಜೊತೆ ನಿಂತಿರುವಂತೆ ಫೋಟೊ ಕ್ರಿಯೇಟ್ ಮಾಡಿ ಹರಿಬಿಟ್ಟಿದ್ದ. ನಂತರ ಆತ ದುಬೈಗೆ ತೆರಳಿದ್ದ. ಇದೀಗ ಮುಜಾಮಿಲ್ ಮುಜ್ ವಿರುದ್ದ ರಾಷ್ಟ್ರದ ವಿರುದ್ಧ ಮತ್ತು ದೇಶದ ಸಾರ್ವಜನಿಕರ ಭಾವನೆಗೆ ಕೆರಳಿಸುವ ಪ್ರಕರಣ ಎಂದು ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಸುಮೋಟೊ ಪ್ರಕರಣ ದಾಖಲಿಲಾಗಿದೆ.
