naxalism : ನಂಬಲ ಕೇಶವ ರಾವ್ 1970 ರ ದಶಕದ ಅಂತ್ಯದಿಂದಲೂ ನಕ್ಸಲೀಯ ಚಳವಳಿಯ ಭಾಗವಾಗಿದ್ದವರು. ಮತ್ತು ನಕ್ಸಲಿಸಂ ಮೋಸ್ಟ್ ವಾಂಟೆಡ್ ತಂತ್ರಜ್ಞರಲ್ಲಿ ಒಬ್ಬರಾಗಿದ್ದರು. ಛತ್ತೀಸ್‌ಗಢದಲ್ಲಿ ಭದ್ರತಾ ಪಡೆಗಳೊಂದಿಗಿನ ಎನ್‌ಕೌಂಟರ್‌ನಲ್ಲಿ ಇವರನ್ನು ಭದ್ರತಾ ಪಡೆಗಳು ಹೊಡೆದು ಉರಳಿಸಿದೆ. ಭಾರತದ ಮೋಸ್ಟ್ ವಾಂಟೆಡ್ ನಕ್ಸಲ್ ನಾಯಕರಲ್ಲಿ ಒಬ್ಬರಾದ ನಂಬಲ ಕೇಶವ ರಾವ್ ಅಲಿಯಾಸ್ ಬಸವರಾಜುರನ್ನು ಬುಧವಾರ ಛತ್ತೀಸ್‌ಗಢದಲ್ಲಿ ಭದ್ರತಾ ಪಡೆಗಳು ಎನ್‌ಕೌಂಟರ್‌ನಲ್ಲಿ ಹೊಡೆದು ಉರುಳಿಸಿವೆ.
ನಕ್ಸಲ್ ಭದ್ರಕೋಟೆ ಎನಿಸಿದ್ದ ಅಬುಜ್ಮದ್ ಅರಣ್ಯದಲ್ಲಿ ಜಿಲ್ಲಾ ಮೀಸಲು ಪಡೆ (ಡಿಆರ್‌ಜಿ) ನೇತೃತ್ವದ ಜಂಟಿ ಕಾರ್ಯಾಚರಣೆಯಲ್ಲಿ ಹತರಾದ 30 ನಕ್ಸಲರಲ್ಲಿ ಬಸವರಾಜು ಸಹ ಒಬ್ಬರು. ಕೇಂದ್ರ ಗೃಹ ಸಚಿವ ಅಮಿತ್ ಶಾ ಈ ಕಾರ್ಯಾಚರಣೆಯನ್ನು “ನಕ್ಸಲಿಸಂ ನಿರ್ಮೂಲನೆ ಮಾಡುವ ಯುದ್ಧದಲ್ಲಿ ಒಂದು ಹೆಗ್ಗುರುತು” ಎಂದು ಕರೆದಿದ್ದಾರೆ. ನಂಬಳ ಕೇಶವ ರಾವ್ ಅವರನ್ನು “ನಕ್ಸಲ್ ಚಳುವಳಿಯ ಬೆನ್ನೆಲುಬು” ಎಂದು ಉಲ್ಲೇಖಿಸಿರುವ ಅವರು, “ನಕ್ಸಲ್ವಾದದ ವಿರುದ್ಧ ಭಾರತದ ಮೂರು ದಶಕಗಳ ಯುದ್ಧದಲ್ಲಿ ನಮ್ಮ ಪಡೆಗಳು ಪ್ರಧಾನ ಕಾರ್ಯದರ್ಶಿ ದರ್ಜೆಯ ನಾಯಕನನ್ನು ಹತ್ಯೆ ಮಾಡಿರುವುದು ಇದೇ ಮೊದಲು” ಎಂದು ಹೇಳಿದರು.
naxalism : ನಂಬಲ ಕೇಶವ ರಾವ್ ಯಾರು..?
ನಿಷೇಧಿತ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾವೋವಾದಿ) ದ ಪ್ರಧಾನ ಕಾರ್ಯದರ್ಶಿ ನಂಬಲ ಕೇಶವ ರಾವ್, 1970 ರ ದಶಕದ ಅಂತ್ಯದಿಂದಲೂ ನಕ್ಸಲೈಟ್ ಚಳವಳಿಯ ಭಾಗವಾಗಿದ್ದರು. ಮತ್ತು ಅದರ ತಂತ್ರಜ್ಞರಲ್ಲಿ ಒಬ್ಬರಾಗಿದ್ದರು. ಇವರ ತಲೆಗೆ ಸರ್ಕಾರ 1.5 ಕೋಟಿ ರೂ. ಬಹುಮಾನವನ್ನ ಘೋಷಿಸಿತ್ತು. ಬಹು ರಾಜ್ಯಗಳಲ್ಲಿ ಭದ್ರತಾ ಪಡೆಗಳ ಮೇಲೆ ಹಲವಾರು ಮಾರಕ ದಾಳಿಗಳಲ್ಲಿ ಈತ ಮೋಸ್ಟ್ ವಾಂಟೆಂಡ್ ಆಗಿದ್ದ. ಬಸವರಾಜ್ ಆಂಧ್ರಪ್ರದೇಶದ ಶ್ರೀಕಾಕುಳಂ ಜಿಲ್ಲೆಯ ಜಿಯಣ್ಣಪೇಟೆ ಗ್ರಾಮದವರಾಗಿದ್ದು, ನಂಬಲಾ ಶಾಲಾ ಶಿಕ್ಷಕರ ಪುತ್ರರಾಗಿದ್ದರು. 1980 ರ ದಶಕದಲ್ಲಿ ವಿದ್ಯಾರ್ಥಿ ಚಳವಳಿಯಲ್ಲಿ ತೊಡಗಿಸಿಕೊಳ್ಳುವ ಮೊದಲು ಅವರು ವಾರಂಗಲ್ ಪ್ರಾದೇಶಿಕ ಎಂಜಿನಿಯರಿಂಗ್ ಕಾಲೇಜಿನಲ್ಲಿ (ಆರ್‌ಇಸಿ) ಎಂಜಿನಿಯರಿಂಗ್ ಅಧ್ಯಯನ ಮಾಡಿದ್ದರು. 1980 ರಲ್ಲಿ ವಿದ್ಯಾರ್ಥಿ ಸಂಘದ ಪ್ರತಿಭಟನೆಯ ಸಮಯದಲ್ಲಿ ಬಂಧಿಸಲ್ಪಟ್ಟ ನಂತರ, ಅವರು ಭೂಗತರಾಗಿ ನಕ್ಸಲರನ್ನು ಸೇರಿಕೊಂಡರು. ಮುಂದಿನ ನಾಲ್ಕು ದಶಕಗಳಲ್ಲಿ, ರಾವ್ ಅರಣ್ಯ ಯುದ್ಧದಲ್ಲಿ ಪರಿಣತಿ ಮತ್ತು ಐಇಡಿಗಳನ್ನು ತಯಾರಿಸುವಲ್ಲಿ ಕುಖ್ಯಾತಿಯಾಗಿದ್ದರು.

naxalism : 2010 ರ ದಂತೇವಾಡ ದಾಳಿಯ ಹಿಂದಿನ ಮಾಸ್ಟರ್ ಮೈಂಡ್ ಈತನೇ ಎಂದು ಭದ್ರತಾ ಅಧಿಕಾರಿಗಳು ನಂಬಿದ್ದಾರೆ. ಇದು ಭಾರತೀಯ ಪಡೆಗಳ ಮೇಲೆ ನಡೆದ ಅತ್ಯಂತ ಭೀಕರ ದಾಳಿಗಳಲ್ಲಿ ಒಂದಾಗಿದ್ದು, ಛತ್ತೀಸ್‌ಗಢದಲ್ಲಿ 76 ಸಿಆರ್‌ಪಿಎಫ್ ಯೋಧರು ಸಾವನ್ನಪ್ಪಿದ್ದರು. ಆಂಧ್ರಪ್ರದೇಶದಲ್ಲಿ ಟಿಡಿಪಿ ಶಾಸಕ ಕೆ ಸರ್ವೇಶ್ವರ ರಾವ್ ಮತ್ತು ಮಾಜಿ ಶಾಸಕ ಶಿವರಿ ಸೋಮ ಅವರ ಹತ್ಯೆ ಸೇರಿದಂತೆ ಹಲವಾರು ಉನ್ನತ ಮಟ್ಟದ ದಾಳಿಗಳ ಹಿಂದೆ ರಾವ್ ಅವರ ಕೈವಾಡವಿದೆ ಎಂದು ನಂಬಲಾಗಿದೆ. ಭಾರಿ ಬಹುಮಾನದ ಹೊರತಾಗಿಯೂ, ರಾವ್ ದಶಕಗಳವರೆಗೆ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು.