lorry fallen on road today : ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಲಾರಿ
ಶಿವಮೊಗ್ಗ ಶಿಕಾರಿಪುರ ರಸ್ತೆಯಲ್ಲಿ ಸಿಗುವ ಸವಳಂಗ ಸಮೀಪ ಎಲೆಕ್ಟ್ರಿಕ್ ವಯರ್ಗಳ ಲೋಡ್ ಸಾಗಿಸುತ್ತಿದ್ದ ಲಾರಿ ಇಂದು ಬೆಳಗ್ಗಿನ ಜಾವ ಪಲ್ಟಿಯಾಗಿದೆ. ಘಟನೆಯಲ್ಲಿ ಯಾರಿಗೂ ಅಪಾಯ ಉಂಟಾಗಿಲ್ಲ. ರಸ್ತೆಯ ನಡುವೆ ಲಾರಿ ಅಡ್ಡಬಿದ್ದಿರುವುದರಿಂದ ಸಂಚಾರಕ್ಕೆ ಸ್ವಲ್ಪ ಸಮಸ್ಯೆಯಾಗಿದೆ.
ಇಂದು ಬೆಳಗ್ಗಿನ ಜಾವ ಎಲೆಕ್ಟ್ರಿಕ್ ವಯರ್ ತುಂಬಿದ ಲಾರಿ ಚಾಲಕನ ನಿಯಂತ್ರಣ ತಪ್ಪಿ ನೆಲಕ್ಕುರುಳಿದೆ. ಇದರಿಂದಾಗಿ ಲಾರಿಯಲ್ಲಿದ್ದ ವಯರ್ಗಳು ಚೆಲ್ಲಾಪಿಲ್ಲಿಯಾಗಿದೆ. ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದರು. ಉಳಿದಂತೆ ಘಟನೆಯ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೆ ತಿಳಿದುಬರಬೇಕಿದೆ.
TAGGED:lorry fallen on road today

