elephant : ಕಳೆದ ಎರಡು ದಿನಗಳಿಂದ ತೀರ್ಥಹಳ್ಳಿ ತಾಲೂಕಿನ ವಿವಿಧ ಭಾಗಗಳಲ್ಲಿ ಒಂಟಿ ಕಾಡಾನೆಯೊಂದು ಸಂಚರಿಸುತ್ತಿದೆ. ಇದರ ನಡುವೆ ಜೂನ್ 01 ರ ಬೆಳಿಗ್ಗೆ 5:30 ಕ್ಕೆ ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರರವರ ಮನೆಯ ಆವರಣದಲ್ಲಿ ಕಾಣಿಸಿಕೊಂಡಿದೆ.
ಸಕಲೇಶ್ಪುರದಲ್ಲಿ ಸಿಕ್ಕ 15 ವರ್ಷದ ಕಾಡಾನೆಯನ್ನು ಅರಣ್ಯಾಧಿಕಾರಿಗಳು ಹಿಡಿದು ಅದರ ಕುತ್ತಿಗೆಗೆ ರೇಡಿಯೋ ಕಾಲರ್ ಅಳವಡಿಸಿ ಕಾಡಿಗೆ ಬಿಟ್ಟಿದ್ದರು. ಆ ಕಾಡಾನೆ ಈಗ ತೀರ್ಥಹಳ್ಳಿ ತಾಲೂಕಿಗೆ ಪ್ರವೇಶಿಸಿದೆ. ಶುಕ್ರವಾರ ತೀರ್ಥಹಳ್ಳಿಯಲ್ಲಿ ಕಾಣಿಸಿಕೊಂಡಿರುವ ಆನೆ ಸಾರ್ವಜನಿಕ ವಲಯದಲ್ಲಿ ಆತಂಕವನ್ನು ಸೃಷ್ಠಿಸಿದೆ. ತಾಲೂಕಿನ ಕುಚ್ಚಲು, ಮುತ್ತಿನಕೊಪ್ಪ ಸೇರಿದಂತೆ ಇತರ ಪ್ರದೇಶದಲ್ಲಿ ಓಡಾಡುತ್ತಿರುವ ಆನೆಯ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳು ಸಾರ್ವಜನಿಕರಿಗೆ ಎಚ್ಚರಿಕೆಯನ್ನು ನೀಡುತ್ತಿದ್ದಾರೆ. ಆನೆಗೆ ರೇಡಿಯೋ ಕಾಲರ್ ಅಳವಡಿಸಿದ್ದರೂ, ಅದರ ರಿಯಲ್-ಟೈಮ್ ಡೇಟಾ ನಾಲ್ಕರಿಂದ ಐದು ಗಂಟೆಗಳ ತಡವಾಗಿ ಬರುತ್ತಿರುವುದುದರಿಂದ ಅರಣ್ಯ ಅಧಿಕಾರಿಗಳಿಗೆ ಆನೆಯನ್ನು ಪತ್ತೆಹಚ್ಚುವುದು ಬಹಳಾ ಕಷ್ಟವಾಗುತ್ತಿದೆ.

elephant : ಶಾಸಕರ ಮನೆಗೆ ಎಂಟ್ರಿಕೊಟ್ಟ ಆನೆ
ಶನಿವಾರ ಸಂಜೆ ಮುತ್ತಿನಕೊಪ್ಪ ಕುಚ್ಚುಲು ಬಳಿ ಒಂಟಿ ಕಾಡಾನೆ ಕಾಣಿಸಿಕೊಂಡಿದ್ದು, ಆನೆಯನ್ನು ಗಡಿ ದಾಟಿಸಲು ಅರಣ್ಯ ಇಲಾಖೆ ಅಧಿಕಾರಿಗಳು ಹರ ಸಾಹಸವನ್ನೇ ಪಟ್ಟರು. ಅದಾದ ಬಳಿಕ ಭಾನುವಾರ ಬೆಳಿಗ್ಗೆ ಆಶ್ಚರ್ಯವೆಂಬಂತೆ ಆನೆ ತೀರ್ಥಹಳ್ಳಿ, ಹೊದಲ, ಗುಡ್ಡೆಕೊಪ್ಪ, ಆರಗದ ಬಳಿ ಕಾಣಿಸಿಕೊಂಡಿದೆ. ಅಷ್ಟೇ ಅಲ್ಲದೆ ಬೆಳಗ್ಗಿನ ಜಾವ 5:30 ರ ಸುಮಾರಿಗೆ ಶಾಸಕ ಆರಗ ಜ್ಞಾನೇಂದ್ರರವರ ಮನೆಯ ಆವರಣಕ್ಕೂ ಬಂದು ವಿಸಿಟ್ ಕೊಟ್ಟು ಹೋಗಿದೆ. ನಂತರ ಆರಗ ಜ್ಞಾನೇಂದ್ರ ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸುತ್ತಿರುವ ಜಾಗಕ್ಕೆ ಭೇಟಿ ನೀಡಿ ಮಾಹಿತಿ ಪಡೆದರು.

ವಿಡಿಯೋ ಮಾಡುತ್ತಿದ್ದವರ ಮೇಲೆ ದಾಳಿ ಮಾಡಲು ಬಂದ ಆನೆ
ಆನೆಯ ಚಲನ ವಲನಗಳನ್ನು ಗಮನಿಸಿ ಆನೆಯ ವಿಡಿಯೋ ಮಾಡಲು ಹೋದ ಯುವಕರ ಮೇಲೆ ಆನೆ ದಾಳಿಮಾಡಲು ಬಂದಿದೆ. ಕೆಲ ಯುವಕರು ಆನೆ ಬಂತೋ ಎಂದು ಕೂಗುತ್ತಾ ಅದರ ವಿಡಿಯೋವನ್ನು ಮಾಡಲು ಮುಂದಾಗಿದ್ದಾರೆ. ಅದರ ಸದ್ದು ಕೇಳಿ ತಿರುಗಿದ ಆನೆ ಘೀಳಿಡುತ್ತಾ ಯುವಕರ ಮೇಲೆ ದಾಳಿ ಮಾಡಲು ಮುಂದಾಗಿದೆ. ಆಗ ಯುವಕರು ಎದುಸಿರು ಬಿಡುತ್ತಾ ಮೊಬೈಲ್ ಬಿಟ್ಟು ಓಡಿದ್ದಾರೆ. ಅಷ್ಟೇ ಅಲ್ಲದೆ ಮಧ್ಯಾಹ್ನ ಆರಗ ಸಮೀಪ ಅರಣ್ಯದಲ್ಲಿ ಕಾಡಾನೆಯ ಚಲನವಲನ ಗಮನಿಸುತ್ತಿದ್ದಾಗ ಅರಣ್ಯ ಇಲಾಖೆ ಅಧಿಕಾರಿ, ಕಾಡಾನೆಗೆ ಯಾವುದೇ ತೊಂದರೆ ಮಾಡದಂತೆ ತಿಳಿವಳಿಕೆ ಮಾಹಿತಿ ನೀಡುತ್ತಿದ್ದರು. ಆಗ ಆನೆ ಅಧಿಕಾರಿಗಳ ಮೇಲೆ ದೀಢೀರ್ ಎರಗಿದೆ. ಸ್ವಲ್ಪದರಲ್ಲಿ ತೀರ್ಥಹಳ್ಳಿ ಎಸಿಎಫ್ ಮಧುಸೂದನ್, ಡಿಆರ್ ಎಫ್‌ಒ ಒಬ್ಬರು ಜೀವಾಪಾಯದಿಂದ ಪಾರಾಗಿದ್ದಾರೆ.
View this post on Instagram