accident news : ಕಾರು ಹಾಗು ಬೈಕ್ ನಡುವೆ ಭೀಕರ ಅಪಘಾತ | ಮೂವರಿಗೆ ಗಾಯ
accident news : ಕಾರು ಹಾಗು ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು ಬಾಲಕ ಸೇರಿ ಮೂವರು ಗಾಯಗೊಂಡಿರುವ ಘಟನೆ ಸೊರಬ ಪಟ್ಟಣದ ಹೊಸಪೇಟೆ ಹಕ್ಲು ಸರ್ಕಲ್ ಬಳಿ ಸಂಭವಿಸಿದೆ.ಘಟನೆಯಲ್ಲಿ ಕಾಸವಾಡಿಕೊಪ್ಪದ ಪ್ರಶಾಂತ್, ಪತ್ನಿ ಕುಸುಮಾ, ಪುತ್ರ ಗಗನ್ ಗಾಯಗೊಂಡಿದ್ದಾರೆ.ಬೈಕ್ ನಲ್ಲಿ ಮೂವರು ಗುಂಡಶೆಟ್ಟಿಕೊಪ್ಪದಿಂದ ಕಾಸವಾಡಿಗೆ ತೆರಳುತಿದ್ದರು. ಈ ಸಂದರ್ಭದಲ್ಲಿ ಬೈಕ್ ಗೆ ಕಾರು ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ಪ್ರಶಾಂತ್ ಅವರ ಎಡಗಾಲು, ಕೈಗೆ ತೀವ್ರ ಗಾಯವಾಗಿದೆ. ಕೂಡಲೆ ಅವರನ್ನು ಸೊರಬ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಯಿತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನೆ ಸಂಬಂಧ ಸೊರಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.