instagram post : ಇನ್ಸ್ಟಾಗ್ರಾಮ್ ಪೋಸ್ಟ್​ ಒಂದರ ವಿರುದ್ದ ಕೇಸ್​ ಕೊಟ್ಟ ಬಿಜೆಪಿ 

ಹಂಚಿಕೊಳ್ಳಿ
WhatsApp Facebook X Telegram
instagram post
instagram post ಶೀಘ್ರ ಕ್ರಮಕ್ಕೆ ಆಗ್ರಹ

instagram post :  ಶಿವಮೊಗ್ಗ | ದೇಶದ್ರೋಹದ ಪೋಸ್ಟ್​ ಹಾಕಿದವನ ವಿರುದ್ದ ಪೊಲೀಸರು ಶೀಘ್ರವೇ ಕ್ರಮ ಕೈಗೊಳ್ಳದಿದ್ದರೆ ಶಿವಮೊಗ್ಗದ ಪ್ರತಿಯೊಬ್ಬ ನಾಗರೀಕರು ಸೈನಿಕರಾಗಿ ಕೆಲಸ ಮಾಡಬೇಕಾಗುತ್ತದೆ ಎಂದು ಶಿವಮೊಗ್ಗ ನಗರ ಶಾಸಕ ಎಸ್​ ಎನ್​ ಚೆನ್ನಬಸಪ್ಪ ಎಚ್ಚರಿಸಿದರು.

instagram post : ಎಸ್​ ಎನ್​ ಚನ್ನಬಸಪ್ಪ ಹೇಳಿದ್ದೇನು

ಶಿವಮೊಗ್ಗದಲ್ಲಿ ಪಾಕಿಸ್ತಾನದ ಪರವಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಹಾಕಿದವನನ್ನು ಶೀಘ್ರವೇ ಬಂಧಿಸಬೇಕೆಂದು ಆಗ್ರಹಿಸಿ ಇಂದು ಬಿಜೆಪಿ ನಗರ ಸಮಿತಿ ಕೋಟೆ ಪೊಲೀಸ್​ ಠಾಣೆಯಲ್ಲಿ ಪ್ರತಿಭಟನೆಯನ್ನು ಕೈಗೊಂಡಿತು. ಈ ವೇಳೆ ಮಾತನಾಡಿಸ ಶಾಸಕ ಚೆನ್ನಬಸಪ್ಪ  ಶಿವಮೊಗ್ಗದಲ್ಲಿ ದೇಶದ್ರೋಹಿಗಳಿದ್ದಾರೆ ಎಂದು ನಾವು ಬಹಳಾ ಹಿಂದಿನಿಂದಲೂ ಹೇಳುತ್ತಿದ್ದೇವೆ. ಅದಕ್ಕೆ  ಪೂರಕವಾಗಿ ಈಗ ತುಂಗಾ ನಗರ ಹಾಗೂ ಕೋಟೆ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಆತನನ್ನು ವಿಚಾರಣೆ ಮಾಡಿ ವಾಪಸ್​ ಕಳುಹಿಸಿದ್ದಾರೆ. ಆದರೆ ಆತನನ್ನು ಬಂಧಿಸಿಲ್ಲ. ಈ ವಿಷಯದಲ್ಲಿ ಪೊಲೀಸ್​ ಇಲಾಖೆ ಯಾವುದೇ ಒತ್ತಡಕ್ಕೆ ಮಣಿಯದೆ ಆತನನ್ನು ಬಂಧಿಸಬೇಕು ಎಂದರು.

instagram post
instagram post ದೇಶದ್ರೋಹಿಗಳನ್ನು ಬಂಧಿಸುವಂತೆ ಪ್ರತಿಭಟನೆ

ದೇಶದ್ರೋಹದ ಪೋಸ್ಟ್ ಅನ್ನು ಸ್ಟೇಟಸ್ ನಲ್ಲಿ ಹಾಕ್ತಾರೆ ಪಾಕಿಸ್ತಾನಕ್ಕೆ ಒಳ್ಳೆಯದಾಗಲಿ ಅಂತ  ದೇವರಲ್ಲಿ ಬೇಡಿಕೊಳ್ಳುತ್ತಾರೆ. ಈ ವಿಚಾರದಲ್ಲಿ ದೇಶದ್ರೋಹಿಗಳಿಗೆ ಯಾವುದೇ ದೇವರು ಸಹಕಾರ ಕೊಡವುದಿಲ್ಲ . ಪೊಲೀಸರು ದೇಶದ್ರೋಹಿಗಳ ಕುಂಟುಂಬವನ್ನು ಶೋಧಿಸಿ ತಕ್ಕ ಶಾಸ್ತಿ ಮಾಡದಿದ್ದರೆ ನಾಳೆ ಶಿವಮೊಗ್ಗದ ಸ್ಥಿತಿ ಬೇರೆ ರೀತಿ ಇರುತ್ತೆ. ತನಿಖೆಗೆ ಪೊಲೀಸರು ಹಿಂದೇಟು ಹಾಕಿದರೆ ಶಿವಮೊಗ್ಗದ  ಪ್ರತಿಯೊಬ್ಬ ನಾಗರೀಕರು ಸೈನಿಕನಾಗಿ ಕೆಲ್ಸಾ ಮಾಡಬೇಕಾಗುತ್ತದೆ. ನಾಳೆ 10 ಗಂಟೆಯ ಒಳಗೆ ಪೊಲೀಸರು ಕ್ರಮ ಕೈಗೊಳ್ಳದಿದ್ದರೆ ನಾಳೆ ಮತ್ತೆ ಪೊಲೀಸ್​ ಠಾಣೆಗೆ ಬಂದು ಪರಿಶೀಲಿಸುತ್ತೇವೆ ಎಂದರು.

 

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor