ನವೆಂಬರ್ 10 2025 ಮಲೆನಾಡು ಟುಡೆ ಸುದ್ದಿ : ಶಿವಮೊಗ್ಗದಲ್ಲಿ ಎರಡು ಬೇರೆ ಬೇರೆ ಪ್ರಕರಣಗಳಲ್ಲಿ ಇಬ್ಬರು ವ್ಯಕ್ತಿಗಳು ನಾಪತ್ತೆಯಾಗಿದ್ದು, ಅವರನ್ನ ಹುಡುಕಿಕೊಡಿ ಎಂದು ಪೊಲೀಸರು ಪ್ರಕಟಣೆಯನ್ನು ನೀಡಿದ್ದಾರೆ.
ಫೋಟೋ ಹಿಡ್ಕಾ..! ಸಕ್ರೆಬೈಲ್ ಉಬ್ಬು ಹತ್ರ ಕಾಡಾನೆ ಕಾಣ್ತು! ತೀರ್ಥಹಳ್ಳಿ ರೋಡಲ್ಲಿ ಜಾಗ್ರತೆ
ಮಾಳೂರು ಸ್ಟೇಷನ್ ವ್ಯಾಪ್ತಿಯ ನಿವಾಸಿ ಕಾಣೆ/persons missing from Shivamogga
ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕು ಬೆಜ್ಜವಳ್ಳಿ ನಿವಾಸಿ ಪ್ರಶಾಂತ್ ತಮ್ಮ ಅಂಗಡಿಯಲ್ಲಿ ಪತ್ರ ಬರೆದಿಟ್ಟು ಕಾಣೆಯಾಗಿದ್ದಾರೆ. ಇವರನ್ನ ಪತ್ತೆ ಮಾಡಲು ಸಹಕರಿಸುವಂತೆ ಪೊಲೀಸರು ಪ್ರಕಟಣೆ ನೀಡಿದ್ದಾರೆ.
ಮಾಳೂರು ಪೊಲೀಸ್ ಠಾಣೆ ಪ್ರಕಟಣೆ
ದಿ:24-10-2025 ರಂದು ಪ್ರಶಾಂತ್ ಸಾಲ ಜಾಸ್ತಿಯಾಗಿದೆ ದುಡಿಮೆ ಹಾಗೂ ಹೆಂಡತಿ ಜೊತೆ ಬಾಳ್ವೆ ಮಾಡಲು ಇಷ್ಟವಿಲ್ಲದೇ ಮಹಾರಾಷ್ಟಕ್ಕೆ ಹೋಗುತ್ತೇನೆ ಪತ್ರ ಬರೆದು ಮನೆ ಬಿಟ್ಟು ಹೋಗಿದ್ದು ಇದುವರೆಗೂ ಅವರ ಯಾವುದೇ ಮಾಹಿತಿ ದೊರಕಿರುವುದಿಲ್ಲ. ಕಾಣೆಯಾದ ವ್ಯಕ್ತಿ 6 ಅಡಿ ಎತ್ತರ, ದುಂಡು ಮುಖ, ಗೋಧಿ ಮೈ ಬಣ್ಣ, ಕಪ್ಪು ಕೂದಲು, ಸದೃಢ ಮೈಕಟ್ಟು ಹೊಂದಿದ್ದಾರೆ. ಇವರು ಕಾಣೆಯಾದ ನೀಲಿ ಬಣ್ಣದ ಶರ್ಟ್ ಮತ್ತು ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದು, ಕನ್ನಡ ಮತ್ತು ತೆಲುಗು ಭಾಷೆಗಳನ್ನು ಮಾತನಾಡುತ್ತಾರೆ. ಕಾಣೆಯಾದ ವ್ಯಕ್ತಿಯ ಪತ್ತೆ ಯಾರಿಗಾದರೂ ಸಿಕ್ಕಲ್ಲಿ ಪಿಎಸ್‌ಐ ಮಾಳೂರು ಠಾಣೆ ದೂ.ಸಂ:08181-235142, 9480803353, ಸಿಪಿಐ ಮಾಳೂರು ವೃತ್ತ ದೂ.ಸಂ:08181-228310, 9480803333, ಶಿವಮೊಗ್ಗ ಪೊಲೀಸ್ ಕಂಟ್ರೋಲ್ ರೂಂ ದೂ.ಸಂ: 08182-261413, 9480803300 ಗೆ ಸಂಪರ್ಕಿಸಬಹುದೆಂದು ಮಾಳೂರು ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್ಸಪೆಕ್ಟರ್ ಪ್ರಕಣೆಯಲ್ಲಿ ತಿಳಿಸಿದ್ದಾರೆ.

ಶಿವಮೊಗ್ಗ ಜೈಲು ಗೇಟ್ನಲ್ಲಿಯೇ ವಾಸೀಂ ಅರೆಸ್ಟ್!, ಮಾಳೂರು ಸಮೀಪ ಬಾಣಂತಿ ಸಾವು! ಶಿವಮೊಗ್ಗದಲ್ಲಿ ಏನೆಲ್ಲಾ ಆಯ್ತು!
ಸಾಗರದ ತ್ಯಾಗರ್ತಿ ನಿವಾಸಿ ನಾಪತ್ತೆ
ಇನ್ನೊಂದು ಘಟನೆಯಲ್ಲಿ ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ತ್ಯಾಗರ್ತಿಯ ನಿವಾಸಿ ಬಸವರಾಜ ಎಂಬವರು ಕಾಣೆಯಾಗಿದ್ದು, ಅವರ ಪತ್ತೆಗೆ ಆನಂದಪುರ ಪೊಲೀಸ್ ಠಾಣೆ ಯ ಪೊಲೀಸರು ಪ್ರಕಟಣೆ ನೀಡಿದ್ದಾರೆ.
20 ಸೆಕೆಂಡ್ನಲ್ಲಿ ಕದ್ದು ಬಿಟ್ಟರು! ಮೂಕ ಪ್ರಾಣಿಯ ಕಳ್ಳತನಕ್ಕೆ ಮೌನ ಸಾಕ್ಷಿಯಾದ ಸಾಗರ!
ಆನಂದಪುರ ಪೊಲೀಸ್ ಠಾಣೆ ಪ್ರಕಟಣೆ/persons missing from Shivamogga
ದಿ: 22-07-2024 ರಂದು ಮಾನಸಿಕ ಸಮಸ್ಯೆಯಿಂದ ಬಳಲುತ್ತಿರುವ ಬಸವರಾಜ್ ರವರು ಕೌಟುಂಬಿಕ ಸಮಸ್ಯೆಯ ಕಾರಣಕ್ಕೆ ಬೆಳಿಗ್ಗೆ 7 ಗಂಟೆಗೆ ತನ್ನ ತಮ್ಮನ ಮನೆಯಿಂದ ಕಾಣೆಯಾಗಿದ್ದಾರೆ. ಕಾಣೆಯಾದ ವ್ಯಕ್ತಿ 41 ವರ್ಷದವರಾಗಿದ್ದು, 4.5 ಅಡಿ ಎತ್ತರ, ದುಂಡನೆ ಮುಖ, ಕಪ್ಪನೆಯ ಮೈಬಣ್ಣ ಸಾಧಾರಣ ಮೈಕಟ್ಟು ಹೊಂದಿದ್ದಾರೆ. ಇವರು ಮನೆಯಿಂದ ಹೋಗುವಾಗ ಬಿಳಿ ಕಾಫಿ ಬಣ್ಣದ ಟೀ ಶರ್ಟ್ ಮತ್ತು ನೀಲಿ ಬಣ್ಣದ ಲುಂಗಿ ಧರಿಸಿದ್ದು, ಕನ್ನಡ ಭಾಷೆಯನ್ನು ಮಾತನಾಡುತ್ತಾರೆ. ಕಾಣೆಯಾದ ವ್ಯಕ್ತಿಯ ಪತ್ತೆ ಯಾರಿಗಾದರೂ ಸಿಕ್ಕಲ್ಲಿ ಆನಂದಪುರ ಪೊಲೀಸ್ ಠಾಣೆ ದೂ.ಸಂ:9480803363, ಸಾಗರ ಗ್ರಾಮಾಂತರ ವೃತ್ತ ನಿರೀಕ್ಷಕರು ದೂ.ಸಂ:9480803336, ಶಿವಮೊಗ್ಗ ಕಂಟ್ರೋಲ್ ರೂಂ ದೂ.ಸಂ: 08182-270521 ಗೆ ಸಂಪರ್ಕಿಸಬಹುದೆಂದು ಆನಂದಪುರ ಪೊಲೀಸ್ ಠಾಣೆಯ ಸಬ್‌ಇನ್ಸ್ಪೆಕ್ಟರ್ ಪ್ರಕಣೆಯಲ್ಲಿ ತಿಳಿಸಿದ್ದಾರೆ

ಸಾಗರದಲ್ಲಿ ಕರ್ತವ್ಯನಿರತ ಕೆಎಸ್‌ಆರ್‌ಟಿಸಿ ಸಿಬ್ಬಂದಿ ಹೃದಯಾಘಾತದಿಂದ ಸಾವು
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel instagram youtube telegram google business malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!
