ನಾಳೆ ಶಿವಮೊಗ್ಗದಲ್ಲಿ ಸಂಚಾರ ಮಾರ್ಗ ಬದಲಾವಣೆ

prathapa thirthahalli
Prathapa thirthahalli - content producer

Shivamogga today :ಶಿವಮೊಗ್ಗ : ಸೆಪ್ಟೆಂಬರ್ 06, 2025 ರಂದು ನಗರದಲ್ಲಿ ನಡೆಯಲಿರುವ ಹಿಂದೂ ಮಹಾಸಭಾ ಗಣಪತಿ ವಿಸರ್ಜನಾ ಮೆರವಣಿಗೆ ಹಿನ್ನೆಲೆಯಲ್ಲಿ ಸುಗಮ ಸಂಚಾರಕ್ಕಾಗಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ವಾಹನ ಸಂಚಾರ ನಿಷೇಧ, ನಿಲುಗಡೆ ಹಾಗೂ ಮಾರ್ಗ ಬದಲಾವಣೆ ಮಾಡಿ ತಾತ್ಕಾಲಿಕ ಅಧಿಸೂಚನೆ ಹೊರಡಿಸಿದ್ದಾರೆ.

Shivamogga today : ಮೆರವಣಿಗೆಯ ಮಾರ್ಗ ಹಾಗೂ ನಿರ್ಬಂಧಗಳು

ಮೆರವಣಿಗೆಯು ಭೀಮೇಶ್ವರ ದೇವಸ್ಥಾನದಿಂದ ಆರಂಭವಾಗಿ, ಎನ್‌ಪಿಎಂ ಮುಖ್ಯ ರಸ್ತೆ, ರಾಮಣ್ಣ ಶ್ರೇಷ್ಠಿ ಪಾರ್ಕ್, ಗಾಂಧಿ ಬಜಾರ್ ಮುಖ್ಯ ರಸ್ತೆ, ಎಸ್.ಎನ್. ಸರ್ಕಲ್, ಎ.ಎ. ಸರ್ಕಲ್, ನೆಹರು ರಸ್ತೆ, ಗೋಪಿ ಸರ್ಕಲ್, ದುರ್ಗಿಗುಡಿ, ಮಹಾವೀರ ಸರ್ಕಲ್, ಡಿವಿಎಸ್ ಸರ್ಕಲ್, ಕಾನ್ವೆಂಟ್ ರಸ್ತೆ, ಮತ್ತು ಕೋಟೆ ರಸ್ತೆ ಮಾರ್ಗವಾಗಿ ಸಾಗಿ ಭೀಮೇಶ್ವರ ದೇವಸ್ಥಾನದ ಬಳಿ ತುಂಗಾ ನದಿಯಲ್ಲಿ ವಿಸರ್ಜನೆಗೊಳ್ಳಲಿದೆ.

ಮೆರವಣಿಗೆ ಸಾಗುವ ಈ ಮಾರ್ಗದಲ್ಲಿ ಮತ್ತು ಅದರ ಸುತ್ತಮುತ್ತಲಿನ 100 ಮೀಟರ್ ಅಂತರದಲ್ಲಿ ಎಲ್ಲಾ ವಾಹನಗಳ ಸಂಚಾರ ಹಾಗೂ ನಿಲುಗಡೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಅಲ್ಲದೆ, ಕೋಟೆ ರಸ್ತೆ ಮತ್ತು ಓಲ್ಡ್ ಬಾರ್‌ಲೈನ್ ರಸ್ತೆಗಳಲ್ಲೂ ವಾಹನ ಸಂಚಾರ ಇರುವುದಿಲ್ಲ.

Shivamogga today ಬದಲಾದ ಪ್ರಮುಖ ಸಂಚಾರ ಮಾರ್ಗಗಳು

ಬೆಂಗಳೂರು, ಭದ್ರಾವತಿ, ಮತ್ತು ಎನ್.ಆರ್. ಪುರದಿಂದ ಬರುವ ವಾಹನಗಳು: ಎಲ್ಲಾ ಭಾರಿ ವಾಹನಗಳು, ಬಸ್‌ಗಳು, ಸಿಟಿ ಬಸ್‌ಗಳು ಮತ್ತು ಕಾರುಗಳು ಎಂ.ಆರ್.ಎಸ್. ಸರ್ಕಲ್‌ನಿಂದ ಬೈಪಾಸ್ ರಸ್ತೆ ಮೂಲಕ ಸಂಚರಿಸಬೇಕು.

ಚಿತ್ರದುರ್ಗ ಮತ್ತು ಹೊಳೆಹೊನ್ನೂರಿನಿಂದ ಬರುವ ವಾಹನಗಳು: ಈ ಮಾರ್ಗಗಳಿಂದ ಬರುವ ಮತ್ತು ಹೋಗುವ ಎಲ್ಲಾ ಭಾರಿ ವಾಹನಗಳು ಮತ್ತು ಬಸ್‌ಗಳು ಎಂ.ಆರ್.ಎಸ್. ಸರ್ಕಲ್ ಮಾರ್ಗವಾಗಿ ಬೈಪಾಸ್ ರಸ್ತೆ ಮೂಲಕ ಹೋಗಬೇಕು.

ಹೊನ್ನಾಳಿ, ಹರಿಹರ, ಮತ್ತು ದಾವಣಗೆರೆಯಿಂದ ಬರುವ ವಾಹನಗಳು: ಎಲ್ಲಾ ಭಾರಿ ವಾಹನಗಳು ಮತ್ತು ಬಸ್‌ಗಳು ಸಂಗೊಳ್ಳಿ ರಾಯಣ್ಣ ಸರ್ಕಲ್, ಶಂಕರಮಠ ಸರ್ಕಲ್, ಹೊಳೆಹೊನ್ನೂರು ಸರ್ಕಲ್, ವಿದ್ಯಾನಗರದ ಎಂ.ಆರ್.ಎಸ್. ಸರ್ಕಲ್ ಮಾರ್ಗವಾಗಿ ಬೈಪಾಸ್ ರಸ್ತೆ ಮೂಲಕ ಸಂಚರಿಸಬೇಕು.

ಕೆಎಸ್‌ಆರ್‌ಟಿಸಿ ಮತ್ತು ಖಾಸಗಿ ಬಸ್ ನಿಲ್ದಾಣದಿಂದ ಹೊರಡುವ ವಾಹನಗಳು: ಹೊನ್ನಾಳಿ, ಶಿಕಾರಿಪುರ, ಸೊರಬ, ಹರಿಹರ, ದಾವಣಗೆರೆಗೆ ಹೋಗುವ ಎಲ್ಲಾ ಬಸ್‌ಗಳು ಮತ್ತು ಭಾರಿ ಸರಕು ವಾಹನಗಳು ಸಾಗರ ರಸ್ತೆ, ಹೆಲಿಪ್ಯಾಡ್ ಸರ್ಕಲ್, ಆಲ್ಕೋಳ ಸರ್ಕಲ್, ಪೊಲೀಸ್ ಚೌಕಿ, ರಾಜ್‌ಕುಮಾರ್ ಸರ್ಕಲ್, ಬೊಮ್ಮನಕಟ್ಟೆ, ಮತ್ತು ಸವಳಂಗ ರಸ್ತೆ ಮೂಲಕ ಹೋಗಬೇಕು.

ಬೆಂಗಳೂರು, ಭದ್ರಾವತಿಗೆ ಹೊರಡುವ ವಾಹನಗಳು: ಕೆಎಸ್‌ಆರ್‌ಟಿಸಿ ಮತ್ತು ಖಾಸಗಿ ಬಸ್ ನಿಲ್ದಾಣದಿಂದ ಬೆಂಗಳೂರು, ಭದ್ರಾವತಿ ಕಡೆಗೆ ಹೋಗುವ ಎಲ್ಲಾ ವಾಹನಗಳು ಬೈಪಾಸ್ ರಸ್ತೆ ಮತ್ತು ಎಂ.ಆರ್.ಎಸ್. ಸರ್ಕಲ್ ಮೂಲಕ ಹೋಗಬೇಕು.

ಶಿಕಾರಿಪುರ, ಸೊರಬ, ಆನವಟ್ಟಿಯಿಂದ ಬರುವ ವಾಹನಗಳು: ಶಿವಮೊಗ್ಗಕ್ಕೆ ಬರುವ ಮತ್ತು ಹೊರಹೋಗುವ ಎಲ್ಲಾ ಬಸ್‌ಗಳು ಮತ್ತು ಭಾರಿ ವಾಹನಗಳು ಉಷಾ ನರ್ಸಿಂಗ್ ಹೋಮ್ ಸರ್ಕಲ್, ಲಕ್ಷ್ಮಿ ಟಾಕೀಸ್ ಸರ್ಕಲ್, ಪೊಲೀಸ್ ಚೌಕಿ, ಆಲ್ಕೋಳ ಸರ್ಕಲ್ ಮಾರ್ಗವಾಗಿ ಸಾಗರ ರಸ್ತೆಯಲ್ಲಿ ಸಂಚರಿಸಬೇಕು.

ಈ ಎಲ್ಲಾ ಮಾರ್ಗ ಬದಲಾವಣೆಗಳು ಪೊಲೀಸ್ ವಾಹನಗಳು, ವಿಐಪಿ ವಾಹನಗಳು, ಆಂಬುಲೆನ್ಸ್ ಮತ್ತು ಅಗತ್ಯ ಸೇವೆ ಒದಗಿಸುವ ವಾಹನಗಳಿಗೆ ಅನ್ವಯಿಸುವುದಿಲ್ಲ ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

 

Share This Article